Get Updates
Get notified of breaking news, exclusive insights, and must-see stories!

ತಾಪಂ ಕಚೇರಿಯಲ್ಲಿ ಕುಸಿದುಬಿದ್ದು ಕರ್ತವ್ಯನಿರತ ಮಹಿಳಾ ಪಿಡಿಓ ಸಾವು

ಪಾಂಡವಪುರ, ಡಿಸೆಂಬರ್‌ 5: ಕರ್ತವ್ಯನಿರತ ಮಹಿಳಾ ಪಿಡಿಓ ಒಬ್ಬರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಮೈಸೂರಿನ ವಸಂತನಗರ ನಿವಾಸಿ ಭಾರತಿ(54) ಮೃತ ಪಿಡಿಓ. ಪಾಂಡವಪುರ ತಾಲೂಕಿನ ಗುಮ್ಮನಹಳ್ಳಿ ಗ್ರಾಪಂನಲ್ಲಿ ಕಳೆದ ನಾಲ್ಕೈದು ತಿಂಗಳ ದಿಂದ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಡ್ಯ ತಾಲೂಕು ತೂಬಿನಕೆರೆ ಗ್ರಾಪಂನಲ್ಲಿ ಕಾರ‌್ಯದರ್ಶಿಯಾಗಿದ್ದ ಭಾರತಿ ಅವರು ಇತ್ತೀಚೆಗೆ ಪಿಡಿಓ ಆಗಿ ಬಡ್ತಿಹೊಂದಿ ಪಾಂಡವಪುರ ತಾಲೂಕಿಗೆ ವರ್ಗಾವಣೆಗೊಂಡು ಗುಮ್ಮನಹಳ್ಳಿ ಗ್ರಾಪಂನಲ್ಲಿ ಪಿಡಿಓ ಆಗಿ ಕೆಲಸ ಮಾಡುತ್ತಿದ್ದರು. ಮೃತರಿಗೆ ಪತಿ ಪ್ರಕಾಶ್, ಓರ್ವ ಪುತ್ರಿ ಇದ್ದಾರೆ. ಪ್ರಕಾಶ್ ಅವರು ಸಹ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

On-duty female PDO collapses and dies in Taluk Panchayat office

ಆರ್‌ಟಿಐ ಕಾರ‌್ಯಕರ್ತ ರಮೇಶ್ ಎಂಬುವರು ಗುಮ್ಮನಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಪಂನಲ್ಲೂ ನರೇಗಾ ಕಾಮಗಾರಿಗಳು ಗುಣಾತ್ಮಕವಾಗಿ ನಡೆದಿಲ್ಲ. ದೂರು ನೀಡಿದ್ದರು ಎನ್ನಲಾಗಿದೆ. ಆ ವಿಚಾರವಾಗಿ ಚರ್ಚಿಸಲು ಶಾಸಕ ದರ್ಶನ್‌ಪುಟ್ಟಣ್ಣಯ್ಯ, ತಾಪಂ ಇಓ ಲೋಕೇಶ್‌ಮೂರ್ತಿ ಅವರು ಸೋಮವಾರ ಪಿಡಿಓ ಭಾರತಿ ಹಾಗೂ ಆರ್‌ಟಿಐ ಕಾರ‌್ಯಕರ್ತರನ್ನು ಕಚೇರಿ ಕರೆದು ಚರ್ಚಿಸಿದ್ದರು ಎನ್ನಲಾಗಿದೆ. ಸಭೆ ಮುಗಿದ ಬಳಿಕ ಸಿಬ್ಬಂದಿಗಳ ಕಚೇರಿಗೆ ತೆರಳಿದ ಪಿಡಿಓ ಭಾರತಿ ಅವರು ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಾರೆ. ತಕ್ಷಣವೇ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಮೈಸೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪಿಡಿಓ ಸಾವನ್ನಪ್ಪಿದ್ದಾರೆ.

ಪಿಡಿಓ ಮೃತದೇಹವನ್ನು ಪಟ್ಟಣದ ತಾಪಂ ಕಚೇರಿಯ ಆವರಣಕ್ಕೆ ತೆಗೆದುಕೊಂಡು ಬಂದು ಎಲ್ಲಾ ಪಿಡಿಓಗಳು ಕೆಲಕಾಲ ಅಂತಿಮ ದರ್ಶನ್‌ಕ್ಕೆ ಅವಕಾಶ ನೀಡಿದರು. ಬಳಿಕ ಮೃತದೇಹವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಯಿತು. 'ಆರ್‌ಐಟಿ ಕಾರ‌್ಯಕರ್ತರು ನೀಡಿದ ಒತ್ತಡದಿಂದ ಪಿಡಿಓ ಅವರಿಗೆ ಹೃದಯಾಘಾತವಾಗಿದೆ, ಪಿಡಿಓಗಳಿಗೆ ಕಚೇರಿಗಳಲ್ಲಿ ಕೆಲಸ ಮಾಡಲು ಒತ್ತಾಡ ಆಗುತ್ತಿದೆ' ಎಂದು ಸಂಬಂಧಿಕರು, ಪಿಡಿಓಗಳು ಆರೋಪಿಸಿದರು.

'ಮೃತ ಪಿಡಿಓ ಭಾರತಿ ಅವರು ಉತ್ತಮ ಅಧಿಕಾರಿಯಾಗಿದ್ದರು, ಯಾವುದೇ ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡುತ್ತಿದ್ದರು. ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಅವರ ಪತಿ ರಮೇಶ್ ಆರ್‌ಟಿಐ ಮಾಹಿತಿ ಹಾಕಿ ಒತ್ತಡ ಏರುತ್ತಿದ್ದರು. ಅತಿಯಾದ ಒತ್ತಡದಿಂದಲೇ ಪಿಡಿಓ ಸಾವನ್ನಪ್ಪಿದ್ದಾರೆ' ಎಂದು ಗುಮ್ಮನಹಳ್ಳಿ ಗ್ರಾಪಂ ಪಿಡಿಓ ರಾಜೇಗೌಡ ಆರೋಪಿಸಿದರು.

ಪಿಡಿಓ ಭಾರತಿ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಜತೆಗೆ ಆರ್‌ಟಿಐ ಕಾರ‌್ಯಕರ್ತರ ರಮೇಶ್ ಅವರು ತಾಲೂಕಿನ ಎಲ್ಲಾ ಗ್ರಾಪಂಗಳ ನರೇಗ ಕೆಲಸ ನಿಯಾಮಾನುಸಾರ ನಡೆದಿಲ್ಲ ಎಂದು ದೂರು ನೀಡಿದ್ದ ಹಿನ್ನೆಲೆಯ ಅವರೊಟ್ಟಿಗೆ ಚರ್ಚಿಸಲು ಕಚೇರಿಗೆ ಕರೆಸಿದ್ದೆವು. ಜತೆಯಲ್ಲಿ ಪಿಡಿಓ ಭಾರತಿ ಅವರನ್ನು ಕರೆದಿದ್ದವು. ಸಭೆಯಲ್ಲಿ ಶಾಸಕರು ಸರಿಯಾಗಿ ಕೆಲಸ ಮಾಡಿ ಎಂದು ತಿಳಿಸಿ ತೆರಳಿದರು. ಸಭೆ ಮುಗಿದು ಅವರು ಕಚೇರಿಯ ಸಿಬ್ಬಂದಿಗಳ ಕೊಠಡಿಗೆ ತೆರಳಿದ್ದ ಸಂದರ್ಭದಲ್ಲಿ ಅವರಿಗೆ ಎದನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಾಂಡವಪುರ ತಾಲೂಕು ಪಂಚಾಯಿತಿ ಇಒ ಲೋಕೇಶ್‌ಮೂರ್ತಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+