ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧು ಪ್ರಶ್ನೆಯೇ ಇಲ್ಲ: ಚುನಾವಣಾ ಆಯುಕ್ತ

ಮಂಡ್ಯ, ಮಾರ್ಚ್ 30: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಂಗೀಕಾರ ಆಗಿದೆ, ಅದನ್ನು ಅಸಿಂಧುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಚುನಾವಣಾ ಮುಖ್ಯ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅಂಗೀಕಾರ ಕುರಿತಂತೆ ಎದ್ದಿರುವ ಗೊಂದಲಗಳ ಪರಿಶೀಲನೆಗೆಂದು ಸಂಜೀವ್ ಕುಮಾರ್ ಅವರು ಇಂದು ಮಂಡ್ಯಕ್ಕೆ ಬಂದಿದ್ದರು.

ನಾಮಪತ್ರ ಸಿಂಧುಗೊಳಿಸುವ ಸಂಬಂಧ ಎದ್ದಿರುವ ಗೊಂದಲಗಳ ಬಗ್ಗೆ ಚುನಾವಣಾಧಿಕಾರಿಗಳು, ಎರಡೂ ಅಭ್ಯರ್ಥಿಗಳ ಪರ ವೀಕ್ಷಕರ ದೂರುಗಳನ್ನು ಕೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Nikhil Kumaraswamy nomination can not be invalid: Sanjeev Kumar

ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅಂಗೀಕಾರವಾಗಿದೆ, ಅದು ಈಗ ಮುಗಿದ ಅಧ್ಯಾಯ, ನಾಮಪತ್ರವನ್ನು ಚುನಾವಣಾಧಿಕಾರಿ ಅಂಗೀಕಾರ ಮಾಡಿದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ನಾಮಪತ್ರ ಅಂಗೀಕಾರ ಕುರಿತು ಇನ್ನೇನೆ ದೂರುಗಳಿದ್ದರೂ ಸಹ ನ್ಯಾಯಾಲಯಕ್ಕೆ ಹೋಗಬೇಕು, ಅಲ್ಲಿಯೇ ಇತ್ಯರ್ಥವಾಗಬೇಕು, ಈಗಂತೂ ನಾಮಪತ್ರ ಅಂಗೀಕಾರವಾಗಿದೆ, ಮತದಾನ ನಿಗದಿತ ಸಮಯಕ್ಕೆ ನಡೆಯಲಿದೆ ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿಗಳು ಪಕ್ಷಪಾತಿಗಳಾಗಿ ವರ್ತಿಸಿದ್ದಾರೆ ಎಂದು ಸುಮಲತಾ ಪರ ಚುನಾವಣಾ ವೀಕ್ಷಕರು ಮಾಡಿದ ಆರೋಪದ ಬಗ್ಗೆ ಮಾತನಾಡಿದ ಅವರು, ಅದನ್ನು ಗುರುತು ಹಾಕಿಕೊಳ್ಳಲಾಗಿದ್ದು, ಆ ಕುರಿತಂತೆ ಚುನಾವಣೆ ಅಧಿಕಾರಿ ವಿರುದ್ಧ ತನಿಖೆ ಮಾಡಲಾಗುವುದು ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+