ನಿಖಿಲ್ ಕುಮಾರಸ್ವಾಮಿ ಈಗ ಜೆಡಿಎಸ್‌ನ ಯುವ ಸಾರಥಿ!
ಮಂಡ್ಯ, ಮೇ 22 : ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಹೊಸ ಬಿರುದು ಸಿಕ್ಕಿದೆ. ಚುನಾವಣಾ ಫಲಿತಾಂಶ ಘೋಷಣೆಗೂ ಮುನ್ನವೇ ಮಂಡ್ಯದ ಸಂಸದ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ಪತ್ರಿಕೆಯೊಂದು ವೈರಲ್ ಆಗಿದೆ. ಇದರಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ 'ಜೆಡಿಎಸ್ ಯುವಸಾರಥಿ' ಎಂಬ ಬಿರುದು ನೀಡಲಾಗಿದೆ. ಕೆ.ನಿಖಿಲ್ ಕುಮಾರಸ್ವಾಮಿ ಸಂಸದರು, ಮಂಡ್ಯ ಜಿಲ್ಲೆ ಎಂದು ಮುದ್ರಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಜೆಡಿಎಸ್ ಮುಖಂಡ ನಾಗರಾಜ್ ಮಗನ ಮದುವೆಯ ಆಹ್ವಾನ ಪತ್ರಿಕೆ ಇದಾಗಿದೆ. ಜೂನ್ 9ರಂದು ವಿವಾಹ ಮಹೋತ್ಸವ ನಡೆಯಲಿದೆ. ಈ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಕಣದಲ್ಲಿದ್ದಾರೆ.

ಮಂಡ್ಯದಲ್ಲಿ ಏಪ್ರಿಲ್ 18ರಂದು ಲೋಕಸಭಾ ಚುನಾವಣೆ ನಡೆದಿತ್ತು. ಚುನಾವಣೆ ನಡೆದ ಎರಡೇ ದಿನದಲ್ಲಿ ನಿಖಿಲ್ ಮಂಡ್ಯದ ಸಂಸದರು ಎಂಬ ಫಲಕಗಳನ್ನು ಜೆಡಿಎಸ್ ಬೆಂಬಲಿಗರು ಸಿದ್ಧಪಡಿಸಿದ್ದರು.
ಎಕ್ಸಿಟ್ ಪೋಲ್ ಫಲಿತಾಂಶದ ಬಗ್ಗೆ ಶೃಂಗೇರಿಯಲ್ಲಿ ಪತ್ರಿಕ್ರಿಯೆ ನೀಡಿರುವ ನಿಖಿಲ್ ಕುಮಾರಸ್ವಾಮಿ ಅವರು, 'ಒದೊಂದು ಸಮೀಕ್ಷೆಗಳಲ್ಲಿ ಒಂದೊಂದು ಫಲಿತಾಂಶ ಬಂದಿದೆ. ನಾನು ಯಾವುದನ್ನೂ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications