ಯುವತಿ ಓಡಿ ಹೋಗಿ ಮದುವೆಯಾದ್ಲು, ಆದರೆ ಬದುಕಿದ್ದು ನಾಲ್ಕೇ ದಿನ

ಮಂಡ್ಯ, ಫೆಬ್ರವರಿ 23: ಯುವತಿ ಯುವಕನೋರ್ವನನ್ನು ಪ್ರೀತಿ ಮಾಡಿದ್ದಳು, ಹಲವಾರು ಕನಸುಗಳನ್ನು ಕಟ್ಟಿಕೊಂಡು, ಮನೆಯವರ ವಿರೋಧದ ನಡುವೆ ಮದುವೆಯನ್ನೂ ಆಗಿದ್ದಳು. ಆದರೆ ದುರ್ವಿಧಿ ನೋಡಿ, ಮದುವೆಯಾಗಿ ನಾಲ್ಕೇ ದಿನಕ್ಕೆ ಅವಳ ಪ್ರಾಣ ಕಸಿಯಿತು.

ಪತಿ, ಪತ್ನಿ ಬೈಕ್‌ನಲ್ಲಿ ಹೋಗುತ್ತಿದ್ದರು, ಓವರ್ ಟೇಕ್ ಂಆಡುವ ವೇಳೆ ಟೈಲ್ಸ್ ತುಂಬಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಯುವತಿ ಮೃತಪಟ್ಟಿದ್ದು, ಯುವಕನ ಸ್ಥಿತಿ ಗಂಭೀರವಾಗಿರುವ ಘಟನೆ ಮಂಡ್ಯದ ಯಲಿಯೂರು ಸಮೀಪ ನಡೆದಿದೆ.

ಸಹನಾ(19) ಮೃತ ಯುವತಿ, ದರ್ಶನ್(24) ಸ್ಥಿತಿ ಗಂಭೀರವಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಸಹನಾ ಮತ್ತು ದರ್ಶನ್ ನಾಲ್ಕು ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

Newly married girl dies in road accident

ಇಬ್ಬರೂ ರಾಮನಗರ ಮೂಲದವರಾಗಿದ್ದು, ಎರಡು ತಿಂಗಳ ಹಿಂದೆ ಇಬ್ಬರೂ ನಾಪತ್ತೆಯಾಗಿದ್ದರು. ಆದರೆ 4 ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿರೋದಾಗಿ ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ಬಿಡುಗಡೆಯಾಗಿದ್ದರು.

ಬೈಕಿನಲ್ಲಿ ಇಬ್ಬರು ಹೋಗುತ್ತಿದ್ದರು. ಆದರೆ ಯಲಿಯೂರು ಸಮೀಪ ಓವರ್ ಟೇಕ್ ಮಾಡುವ ವೇಳೆ ಟೈಲ್ಸ್ ತುಂಬಿದ್ದ ಲಾರಿಗೆ ಡಿಕ್ಕಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+