ಮಂಡ್ಯದಲ್ಲಿ ಶೇ90 ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ

Posted By:
Subscribe to Oneindia Kannada

ಮಂಡ್ಯ, ಸೆ. 09: ಕಾವೇರಿ ನೀರಿಗಾಗಿ ಎಲ್ಲೆಡೆ ಹಾಹಾಕಾರ, ಪ್ರತಿಭಟನೆ, ಬಂದ್ ನಡೆಯುತ್ತಿರುವ ಸಂದರ್ಭದಲ್ಲಿ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಎಲ್ಲೂ ಕಾಣಿಸುತ್ತಿಲ್ಲವಲ್ಲ ಎಂಬ ಕಳವಳಕ್ಕೆ ಉತ್ತರ ಸಿಕ್ಕಿದೆ. ಕರ್ನಾಟಕ ಬಂದ್, ಮಂಡ್ಯದ ರೈತರ ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದಾರೆ. ಪ್ರತಿಭಟನೆಯೊಂದೆ ಪರಿಹಾರವಲ್ಲ, ಅದಕ್ಕಿಂತ ಹೆಚ್ಚಿನದ್ದು ನನ್ನಿಂದ ರೈತರಿಗೆ ನೀಡಬೇಕಿದೆ ಎಂದಿದ್ದಾರೆ.

My support for the farmers goes beyond protest Tweets Former MP Ramya

ನಾನು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಮಂಡ್ಯದ ರೈತರ ಕೃಷಿ ಚಟುವಟಿಕೆಗೆ ಅಗತ್ಯವಾಗಿ ನೀರು ಪೂರೈಸಲು ಸರ್ಕಾರ ಬದ್ಧವಿದೆ ಎಂದು ಭರವಸೆ ನೀಡಿದ್ದಾರೆ.ಅದರಂತೆ, ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿದು ಬಂದಿದೆ. ಮಂಡ್ಯದ ಅನೇಕ ಕಡೆಗಳಲ್ಲಿ ರೈತರು ನಾಟಿ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆ ಭರದಿಂದ ಸಾಗಿದೆ ಎಂದು ರಮ್ಯಾ ಮಾಹಿತಿ ನೀಡಿದ್ದಾರೆ.

ಕೃಷಿ ಪಾಠ: ರಮ್ಯಾ ಟ್ವೀಟ್ ಗೆ ಪ್ರತಿಯಾಗಿ ಅನೇಕರು ತಮ್ಮ ಕೃಷಿ ಜ್ಞಾನವನ್ನು ಪ್ರದರ್ಶಿಸಿದ್ದಾರೆ. ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಬೇಕು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು.

1850 ರಿಂದ ಬೆಳೆ ವಿಧಾನವೇ ಸರಿಯಿಲ್ಲ. ಮಳೆ ಕೊಯ್ಲು ವಿಧಾನ ಕಡ್ಡಾಯಗೊಳಿಸಬೇಕು.

ಬೆಂಗಳೂರಿನ ನೀರಿನ ದಾಹಕ್ಕೆ ಪರಿಹಾರ ಸಿಕ್ಕರೆ, ಮಂಡ್ಯದ ಜನತೆಗೆ ಇನ್ನಷ್ಟು ನೀರು ಸಿಗಲಿದೆ.


ಮಳೆ ಇಲ್ಲದ ಕಾಲದಲ್ಲಿ ಏತ ನೀರಾವರಿ ಯೋಜನೆಗಳ ಸಮರ್ಪಕ ಬಳಕೆಯಾಗಬೇಕು

ಹೀಗೆ ಒಂದೇ ಎರಡೇ ಬಹುಶಃ ರಮ್ಯಾರನ್ನು ಮುಂದಿನ ಕೃಷಿ ಸಚಿವರನ್ನಾಗಿಸಬಹುದು. ಅಥವಾ ಕೃಷ್ಣಭೈರೇಗೌಡರು ಈ ಟ್ವೀಟ್ಸ್ ನೋಡಿದರೆ ಖುಷಿಪಡುವುದರಲ್ಲಿ ಅನುಮಾನವೇ ಇಲ್ಲ.

ಎಲ್ಲಾ ಟ್ವೀಟ್ ಗಳಿಗೂ ಉತ್ತರಿಸುತ್ತಾ, ಮಂಡ್ಯ ಜಿಲ್ಲೆಯ ಕಾಲುವೆ, ಪಂಪ್ ಹೌಸ್, ನಾಟಿ ಕಾರ್ಯದ ಚಿತ್ರಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ.


ಒಟ್ಟಾರೆ, ಕೃಷಿ ಪಾಂಡಿತ್ಯ, ಮಾಹಿತಿ ಹಂಚಿಕೆ ಮೂಲಕ ಬಂದ್ ಬಿಸಿ ನಡುವೆ ಶೇ 90 ರಷ್ಟು ರೈತಾಪಿ ವರ್ಗಕ್ಕೆ ನೀರು ಸಿಕ್ಕಿದೆ ಎಂದು ಘೋಷಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Bandh : My support for the farmers goest beyond protest Tweeted Former MP from Mandya Ramya aliad Divya Spandana. She also posted many images of agricultural activities in Mandya District after releasing water from VC Canal.
Please Wait while comments are loading...