ಸುಮಲತಾ ಗೆಲುವು: ಹರಕೆ ತೀರಿಸಲು ಪಾದಯಾತ್ರೆ ಹೊರಟ ಅಭಿಮಾನಿಗಳು
ಮಂಡ್ಯ, ಜೂನ್ 17: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದರೆ ಮಹದೇಶ್ವರ ಬೆಟ್ಟಕ್ಕೆ ಕಾಲು ನಡಿಗೆಯಲ್ಲಿ ಬರುವುದಾಗಿ ಹರಕೆ ಹೊತ್ತಿದ್ದ ಬೆಂಬಲಿಗರು ಇದೀಗ ಹರಕೆ ತೀರಿಸಲು ಮುಂದಾಗಿದ್ದಾರೆ.
ಸುಮಲತಾ ಅವರು ಗೆದ್ದರೆ ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವುದಾಗಿ ಇವರು ಹರಕೆ ಹೊತ್ತಿದ್ದರು. ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಮ್ ನ ನಿಮಿಷಾಂಬ ದೇವಾಲಯದಿಂದ ಪಾದಯಾತ್ರೆಗೆ ಚಾಲನೆ ನೀಡಿ ಸುಮಾರು 50ಕ್ಕೂ ಹೆಚ್ಚು ಬೆಂಬಲಿಗರು ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದಾರೆ.

ಬನ್ನೂರು, ಮಳವಳ್ಳಿ, ಕೊಳ್ಳೇಗಾಲ ಮೂಲಕ ಮೂರು ದಿನಗಳ ಕಾಲ ಪಾದಯಾತ್ರೆಯಲ್ಲಿ, ಕಡೆಯ ದಿನ ಮಹದೇಶ್ವರ ಬೆಟ್ಟ ತಲುಪಲಿದ್ದಾರೆ. ಪಾದಯಾತ್ರೆಗೆ ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಎಸ್.ಎಲ್. ಲಿಂಗರಾಜು ಚಾಲನೆ ನೀಡಿದರು. ಸುಮಲತಾ ಬೆಂಬಲಿಗ ಮಂಜು ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.












Click it and Unblock the Notifications