ವಿಎಚ್‌ಪಿಯಿಂದ ಶ್ರೀರಂಗಪಟ್ಟಣ ಚಲೋ; 144 ಸೆಕ್ಷನ್ ಜಾರಿ
ಮಂಡ್ಯ, ಜೂ. 2: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ಕುರಿತು ಈಗ ಹಲವು ಚರ್ಚೆಗಳು ನಡೆಯುತ್ತಿವೆ. ಜೂನ್ 4 ರಂದು ವಿಶ್ವಹಿಂದೂ ಪರಿಷತ್ 'ಶ್ರೀರಂಗಪಟ್ಟಣ ಚಲೋ' ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಯಾವುದೇ ರೀತಿಯ ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆ ಅಥವಾ ರಥಯಾತ್ರೆಗಳನ್ನು ನಿರ್ಬಂಧಿಸಿದ್ದಾರೆ. ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳು ಜೂನ್ 3 ರಂದು ಮಧ್ಯಾಹ್ನ 3 ರಿಂದ ಜೂನ್ 5 ರಂದು ಮಧ್ಯಾಹ್ನ 12 ರವರೆಗೆ ಜಾರಿಯಲ್ಲಿರುತ್ತವೆ.
ಈ ಮಧ್ಯೆ ವಿವಾದಿತ ಜಾಮಿಯಾ ಮಸೀದಿಯಲ್ಲಿ ವಿಡಿಯೋಗ್ರಫಿ ನಡೆಸುವ ಕುರಿತು ಮಂಡ್ಯ ಜಿಲ್ಲಾಧಿಕಾರಿ (ಡಿಸಿ) ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಪೂರ್ವ ದ್ವಾರದ ವೀಡಿಯೊಗ್ರಫಿಗೆ ಅನುಮತಿ ನೀಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಜಾಮಿಯಾ ಮಸೀದಿಯು ಜೀವಂತ ಸ್ಮಾರಕವಾಗಿದೆ ಮತ್ತು ಪ್ರಸಕ್ತವಾಗಿ ಸಂರಕ್ಷಿತ ಪ್ರದೇಶದೊಳಗೆ ಮದರಸಾವನ್ನು ನಡೆಸಲಾಗುತ್ತಿದೆ ಎಂದು ಸೂಪರಿಂಟೆಂಡೆಂಟ್ ಪತ್ರದಲ್ಲಿ ತಿಳಿಸಲಾಗಿದೆ.
ವಿಎಚ್‌ಪಿ ಮತ್ತು ಬಜರಂಗದಳ ಮೇ 20ರಂದು ಡಿಸಿಗೆ ಮನವಿ ಪತ್ರ ಸಲ್ಲಿಸಿದ್ದು, ಜ್ಞಾನವಾಪಿ ಮಸೀದಿ ಮಾದರಿಯಲ್ಲಿ ಜಾಮಿಯಾ ಮಸೀದಿಯಲ್ಲಿ ಸಮೀಕ್ಷೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದ್ದವು. ಮಸೀದಿಯ ಸ್ಥಳವು ಮೊದಲು ಹನುಮಾನ್ ದೇವಾಲಯವಾಗಿತ್ತು. ನಂತರ ಅದನ್ನು ಕೆಡವಲಾಯಿತು ಮತ್ತು ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಹೇಳಿವೆ.
ಮಂಡ್ಯದ ಕುವೆಂಪು ವೃತ್ತದಿಂದ ವಿವಾದಿತ ಮಸೀದಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಂಘಟನೆಗಳು ಕರೆ ನೀಡಿವೆ. ಅಧಿಕಾರಿಗಳಿಂದ ಅನುಮತಿ ಕೇಳಿದ್ದರು ಆದರೆ ಅನುಮತಿ ನಿರಾಕರಿಸಲಾಯಿತು. ಹೀಗಿದ್ದರೂ ಗುಂಪುಗಳು ಪ್ರತಿಭಟನಾ ಮೆರವಣಿಗೆಗೆ ಮುಂದಾಗಿವೆ.

ಒಂದು ವಾರದ ಹಿಂದೆ ಮಂಡ್ಯ ಜಿಲ್ಲೆಯ ವಿಎಚ್‌ಪಿ ಸದಸ್ಯರು ಮಸೀದಿಯಲ್ಲಿ ತಂಗಿರುವ ಜನರನ್ನು ತಕ್ಷಣ ಖಾಲಿ ಮಾಡಿಸುವಂತೆ ಪೊಲೀಸರು ಮತ್ತು ಡಿಸಿಗೆ ಮನವಿ ಸಲ್ಲಿಸಿದರು. ಕೆಲವರು ವಿವಾದಿತ ದೇವಾಲಯದ ಸ್ಥಳದಲ್ಲಿ ಬರಹಗಳನ್ನು ಅಪವಿತ್ರಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಕೆಲವರು ಮಸೀದಿಯಲ್ಲಿಯೇ ಇದ್ದು ಪ್ರಾರ್ಥನೆ ಸಲ್ಲಿಸುವ ಮೂಲಕ ದೇವಾಲಯದಲ್ಲಿರುವ ಶಾಸನಗಳು ಮತ್ತು ಶಿಲ್ಪಗಳನ್ನು ನಾಶಪಡಿಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಸ್ಮಾರಕ ಕಾಯ್ದೆಯ ಪ್ರಕಾರ, ಅವರು ಸ್ಥಳದಲ್ಲಿ ಇರಲು, ನಮಾಜ್ ಮಾಡಲು ಮತ್ತು ಅಡುಗೆ ಮಾಡಲು ಅವಕಾಶ ನೀಡಬಾರದು. ಅವರನ್ನು ತೆರವುಗೊಳಿಸುವಂತೆ ನಾವು ಪೊಲೀಸರನ್ನು ಒತ್ತಾಯಿಸಿದ್ದೇವೆ ಎಂದು ವಿಎಚ್‌ಪಿ ಸದಸ್ಯರೊಬ್ಬರು ಹೇಳಿದ್ದಾರೆ.












Click it and Unblock the Notifications