ಮೋದಿ ಪತ್ರದಿಂದ ಮಂಡ್ಯದ ಮುಸ್ಲಿಂ ಯುವತಿಗೆ ಶೈಕ್ಷಣಿಕ ಸಾಲ

Subscribe to Oneindia Kannada

ಬೆಂಗಳೂರು, ಮಾರ್ಚ್ 21: ಉನ್ನತ ಶಿಕ್ಷಣ ಪೂರೈಸಲು ಶೈಕ್ಷಣಿಕ ಸಾಲ ಸಿಗದ ಹಿನ್ನಲೆಯಲ್ಲಿ ಸಹಾಯ ಮಾಡುವಂತೆ ಈ ಯುವತಿ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಪತ್ರ ಬರೆದಿದ್ದರು. ತಕ್ಷಣ ಇದಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತರವೂ ಬಂದಿತ್ತು. ಇದೀಗ ಪತ್ರ ಬಂದ ಕೇವಲ 10 ದಿನಗಳಲ್ಲಿ ಆಕೆಗೆ ಶೈಕ್ಷಣಿಕ ಸಾಲ ಸಿಕ್ಕಿದೆ.

ಪಿಇಎಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿರುವ ಬಿಬಿ ಸಾರ ಎಂಬ ಯುವತಿಗೆ 1.5 ಲಕ್ಷ ಶೈಕ್ಷಣಿಕ ಸಾಲ ಬೇಕಾಗಿತ್ತು. ಇವರು ಮಡ್ಯದ ಶುಗರ್ ಟೌನ್ ನಿವಾಸಿ ಅಬ್ದುಲ್ ಇಲಿಯಾಸ್ ಪುತ್ರಿಯಾಗಿದ್ದಾರೆ.[ಶಹಬ್ಬಾಶ್ ಮೋದೀಜಿ ಎಂದ ರಾಷ್ಟ್ರಪತಿ ಪ್ರಣಬ್!]

Mandya: With Narendra Modi’s letter, this Muslim lady got educational loan

ಇವರು ಸೆಂಟ್ರಲ್ ಬ್ಯಾಂಕ್ ಇಂಡಿಯಾಗೆ ಸಾಲ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಸಾಲ ಸಿಗಲು ವಿಳಂಬವಾಗಿತ್ತು. ಈ ಸಂದರ್ಭ ಪ್ರಧಾನಿಗೆ ಪತ್ರ ಬರೆದಿದ್ದರು. ಸಾರಾ ಪತ್ರದ ಮೇರೆಗೆ, ಈ ಹೆಣ್ಣು ಮಗಳಿಗೆ ಶೈಕ್ಷಣಿಕ ಸಾಲ ಸಿಗುವಂತೆ ನೋಡಿಕೊಳ್ಳಿ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಪ್ರಧಾನಿ ಕಾರ್ಯಾಲಯದಿಂದ ಉತ್ತರವೂ ಬಂದಿತ್ತು.[ಪುಟಾಣಿ ಆರಾಧ್ಯ ಕರೆಗೆ ಸ್ಪಂದಿಸುತ್ತಾರಾ ಪ್ರಧಾನಿ ಮೋದಿ?]

ಪ್ರಧಾನಿ ಕಾರ್ಯಾಲಯದಿಂದ ಬಂದ ಪತ್ರವನ್ನು ತೋರಿಸಿದರೂ ಬ್ಯಾಂಕಿನವರು ಸಾಲ ಕೊಡಲು ಹಿಂದೇಟು ಹಾಕಿದರು. ಕೊನೆಗೆ ವಿಜಯ ಬ್ಯಾಂಕಿಗೆ ಹೋದಾಗ ಪತ್ರ ನೋಡಿ ತಕ್ಷಣ ಸಾಲ ನೀಡಿದ್ದಾರೆ. ಹೀಗೆ ಪ್ರಧಾನಿ ಪತ್ರವೊಂದು ಸಾಲ ಸಿಗದ ಯುವತಿಗೆ ಸಾಲ ಸಿಗುವಂತೆ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BB Sara of Mandya wrote a letter to prime minister Narendra Modi after bank refused to give educational loan to her. She received a letter from prime ministers office and problem has been solved. Now she got a loan from Vijaya Bank with the help of PM letter.
Please Wait while comments are loading...