ಮಂಡ್ಯದ ಮಳವಳ್ಳಿಯಲ್ಲಿ ಸಿಡಿಲು ಬಡಿದು ಮನೆ ಜಖಂ, ನಾಲ್ವರಿಗೆ ಗಾಯ

ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮ ಮಳವಳ್ಳಿ ಪಟ್ಟಣದ ಮುಸ್ಲಿಂ ಬ್ಲಾಕ್‍ನ ಪಿರಂಬಿ ಸೈಯದ್ ಪಾಷ ಎಂಬುವರಿಗೆ ಸೇರಿದ ಮನೆಯ ಮೇಲೆ ಹಾಕಲಾಗಿದ್ದ ಕಲ್ನಾರ್ ಶೀಟ್ ಜಖಂಗೊಂಡಿದೆ. ಘಟನೆಯಲ್ಲಿ ನಾಲ್ಕು ಜನ ಗಾಯಗೊಂಡಿದ್ದಾರೆ.

ಮಂಡ್ಯ, ಮೇ 23: ಈ ಬಾರಿ ಸುರಿಯುತ್ತಿರುವ ಮಳೆ ಅಲ್ಲಲ್ಲಿ ಅವಾಂತರಗಳನ್ನು ಸೃಷ್ಠಿ ಮಾಡುತ್ತಿದ್ದು, ಈಗಾಗಲೇ ಬಿರುಗಾಳಿ ಮಳೆಯಿಂದ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸುತ್ತಿವೆ. ಸಿಡಿಲು ಬಡಿದು ನಾಲ್ವರು ಗಾಯಗೊಂಡು, ಮನೆ ಜಖಂಗೊಂಡಿರುವ ಘಟನೆ ಮಳವಳ್ಳಿ ಪಟ್ಟಣದ ಮುಸ್ಲಿಂ ಬ್ಲಾಕ್‍ನಲ್ಲಿ ನಡೆದಿದೆ.

ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮ ಮಳವಳ್ಳಿ ಪಟ್ಟಣದ ಮುಸ್ಲಿಂ ಬ್ಲಾಕ್‍ನ ಪಿರಂಬಿ ಸೈಯದ್ ಪಾಷ ಎಂಬುವರಿಗೆ ಸೇರಿದ ಮನೆಯ ಮೇಲೆ ಹಾಕಲಾಗಿದ್ದ ಕಲ್ನಾರ್ ಶೀಟ್ ಜಖಂಗೊಂಡಿದೆ. ರಾತ್ರಿ ಸಮಯದಲ್ಲಿ ಘಟನೆ ನಡೆದಿದ್ದರಿಂದ ಮನೆಯೊಳಗೆ ಮಲಗಿದ್ದ ಸೈಯದ್ ಗುಲಾಬ್, ಸೈಯದ್ ಮುಬಾರಕ್, ರೇಷ್ಮಾ ಬಾನು, ಶರನಾಬಾನು ಅವರು ಗಾಯಗೊಂಡಿದ್ದಾರೆ.

Mandya: Home damaged by thunderbolt in Malavalli

ವಿಷಯ ತಿಳಿದು ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎಚ್.ಎಸ್.ದಿನೇಶ್ ಚಂದ್ರ ಪರಿಶೀಲನೆ ನಡೆಸಿದ್ದು ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Mandya: Home damaged by thunderbolt in Malavalli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+