ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ; ಕಂಟೋನ್ಮೆಂಟ್ ಝೋನ್ ಬಿ ಕೊಡಗಳ್ಳಿಗೆ ಡಿಸಿ ಭೇಟಿ

|
Google Oneindia Kannada News

ಮಂಡ್ಯ, ಮೇ 08: ಕೊರೊನಾ ಪ್ರಕರಣ ದಾಖಲಾದ ಕಾರಣ ಬಿ ಕೊಡಗಳ್ಳಿ ಗ್ರಾಮವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಇಪ್ಪತ್ತು ದಿನಗಳ ಕಾಲ ಜನರು ಸಹಕಾರ ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಮೇಲುಕೋಟೆ ಹೋಬಳಿಯ ಬಿ ಕೊಡಗಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಭೇಟಿ ನೀಡಿದರು. ಅಧಿಕಾರಿಗಳ ಜೊತೆ ಗ್ರಾಮದಲ್ಲಿ ಕೊರೊನಾ ಹರಡದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.

 ಮಂಡ್ಯ; ತಂದೆ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮಗಳ ಗ್ರಾಮ ಸೀಲ್ ಡೌನ್ ಮಂಡ್ಯ; ತಂದೆ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮಗಳ ಗ್ರಾಮ ಸೀಲ್ ಡೌನ್

ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ತುಂಬಿದ ಜಿಲ್ಲಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಇಡೀ ಗ್ರಾಮದ ಜನರ ಆರೋಗ್ಯ ತಪಾಸಣೆಯನ್ನು ಮಾಡಿಸುವುದಾಗಿ ಭರವಸೆಯನ್ನು ನೀಡಿದರು. ಗ್ರಾಮದಲ್ಲಿ ಯಾರೂ ಆತಂಕಗೊಳ್ಳಬಾರದು ಎಂದು ಕರೆ ನೀಡಿದರು.

 ಮಂಡ್ಯ ವ್ಯಕ್ತಿಯಿಂದ ಆತಂಕದಲ್ಲಿದ್ದ ತೆಕ್ಕಟ್ಟೆ ಜನರೀಗ ರಿಲ್ಯಾಕ್ಸ್‌ ಮಂಡ್ಯ ವ್ಯಕ್ತಿಯಿಂದ ಆತಂಕದಲ್ಲಿದ್ದ ತೆಕ್ಕಟ್ಟೆ ಜನರೀಗ ರಿಲ್ಯಾಕ್ಸ್‌

ಗ್ರಾಮದ ಕೆಲವರಿಗೆ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಎಲ್ಲರ ಪರೀಕ್ಷಾ ವರದಿ ನೆಗೆಟಿವ್ ಬಂದಿರುತ್ತದೆ. ಗ್ರಾಮದಲ್ಲಿ ಯಾರೂ ಕೂಡ ಆತಂಕ ಪಡಬೇಕಿಲ್ಲ. ಕೊರೊನಾ ನಿವಾರಣೆಗಾಗಿ ಎಲ್ಲರೂ ನಮ್ಮ ಜೊತೆ ಸಹಕಾರ ನೀಡಬೇಕು ಎಂದು ಕರೆ ಕೊಟ್ಟರು.

 ಒಂದೇ ದಿನ 8 ಕೇಸ್; ಆರೆಂಜ್ ಝೋನ್‌ ನಿಂದ ರೆಡ್‌ ಝೋನ್‌ ಗೆ ಮಂಡ್ಯ ಒಂದೇ ದಿನ 8 ಕೇಸ್; ಆರೆಂಜ್ ಝೋನ್‌ ನಿಂದ ರೆಡ್‌ ಝೋನ್‌ ಗೆ ಮಂಡ್ಯ

ಸ್ವಚ್ಛತೆಯನ್ನು ಕಾಪಾಡಿ

ಸ್ವಚ್ಛತೆಯನ್ನು ಕಾಪಾಡಿ

ಪ್ರತಿ ಅರ್ಧ ಗಂಟೆಗೆ ಒಮ್ಮೆ ಕೈ ಕಾಲುಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ಒಬ್ಬ ವ್ಯಕ್ತಿ ಶೌಚಾಲಯ ಉಪಯೋಗಿಸಿದ ನಂತರ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛಗೊಳಿಸಿ ಮೂವತ್ತು ನಿಮಿಷದ ನಂತರ ಮತ್ತೊಬ್ಬರು ಬಳಸುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ.

ಮಾದರಿ ಗ್ರಾಮವಾಗಿ ಮಾಡೋಣ

ಮಾದರಿ ಗ್ರಾಮವಾಗಿ ಮಾಡೋಣ

ಪ್ರತಿ ಮನೆಯಲ್ಲೂ ಆಹಾರ ಪದಾರ್ಥ ಬಳಕೆ ಮಾಡುವ ವೇಳೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಇಪ್ಪತ್ತು ದಿನಗಳ ಕಾಲ ಜನರು ಜಿಲ್ಲಾಡಳಿತ ಜೊತೆ ಸಹಕರಿಸಿ, ಮುಂದಿನ ದಿನಗಳಲ್ಲಿ ಯಾವುದೇ ಪ್ರಕರಣಗಳು ಪತ್ತೆ ಆಗದಿದ್ದರೆ ಇಡೀ ಜಿಲ್ಲೆಯಲ್ಲಿ ಬಿ ಕೊಡಗಳ್ಳಿ ಮಾದರಿ ಗ್ರಾಮ ವಾಗುವುದು. ಕೊರೊನಾ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರೂ ಸಹಕರಿಸಿ ಎಂದು ಕೋರಲಾಗಿದೆ.

ಹೊರಗಿನಿಂದ ಬಂದರೆ ಮಾಹಿತಿ ಕೊಡಿ

ಹೊರಗಿನಿಂದ ಬಂದರೆ ಮಾಹಿತಿ ಕೊಡಿ

ಗ್ರಾಮಕ್ಕೆ ಇನ್ನು ಮುಂದಿನ ದಿನಗಳಲ್ಲಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಯಾರಾದರೂ ಬರುವ ಮುನ್ಸೂಚನೆಗಳು ಇದ್ದಲ್ಲಿ ತಾಲೂಕಿನ ಅಧಿಕಾರಿಗಳಿಗೆ ಮಾಹಿತಿ ನೀಡಿಬೇಕು. ನಾವು ಅವರನ್ನು ಪರೀಕ್ಷೆಗೆ ಒಳಪಡಿಸಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಜನರಿಗೆ ಮಾಹಿತಿ ನೀಡಿದ್ದಾರೆ.

ಕಂಟೋನ್ಮೆಂಟ್ ಝೋನ್

ಕಂಟೋನ್ಮೆಂಟ್ ಝೋನ್

ಗ್ರಾಮ ಕಂಟೋನ್ಮೆಂಟ್ ಝೋನ್ ಆಗಿರುವುದರಿಂದ ದಿನಬಳಕೆಯ ವಸ್ತುಗಳನ್ನು ಆದಷ್ಟು ಇತಿ ಮಿತಿಯಿಂದ ಬಳಸುವುದು ಅಗತ್ಯವಾಗಿರುತ್ತದೆ ಎಂದು ಜನರಿಗೆ ತಿಳಿಸಲಾಗಿದೆ. ಗ್ರಾಮದಲ್ಲಿ ಅಗತ್ಯ ವಸ್ತುಗಳ ಅಥವಾ ಇನ್ಯಾವುದೇ ರೀತಿಯ ಸಮಸ್ಯೆಗಳು ಬಂದಲ್ಲಿ ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಕರೆ ನೀಡಲಾಗಿದೆ.

English summary
Mandya district Pandavapura taluk Bkodagahalli village is now containment zone. Deputy Commissioner Dr.M.V. Venkatesh visited the village and inspected situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X