Mandya Rain: ಮಳೆಗಾಗಿ 'ವರುಣದೇವ'ನ ಮೊರೆ ಹೋದ ಮದ್ದೂರಿನ ಜನತೆ, ವಿಶೇಷ ಆಚರಣೆ
ಮಂಡ್ಯ, ಏಪ್ರಿಲ್. 14: ರಾಜ್ಯದಲ್ಲಿ ಉಷ್ಣಾಂಶ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಳೆದೆರಡು ದಿನಗಳಿಂದ ಅಲ್ಲಲ್ಲಿ ಸಾಧಾರಣ ಮಳೆ ಬಿದ್ದಿದೆ. ಆದರೂ ಕೂಡ ರಾಜ್ಯದಲ್ಲಿ ಬಿಸಿಗಾಳಿ ಮತ್ತು ಮಳೆ ಕೊರತೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆಗಳು ಮುನ್ಸೂಚನೆ ನೀಡಿವೆ. ಬರದ ಬೇಗೆಯಲ್ಲಿ ರಾಜ್ಯದ ಜನರು ತತ್ತರಿಸಿದ್ದಾರೆ.
ಮಾರ್ಚ್‌ನಿಂದ ಮೇ ವರೆಗಿನ ಹೀಟ್‌ವೇವ್ ಹೆಚ್ಚಾಗಲಿದೆ. ಈ ಋತುವಿನಲ್ಲಿ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲನ್ನು ನೋಡಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ. ಇದೇ ವೇಳೆ ಮಳೆಯ ಅಭಾವದಿಂದ ಕಂಗೆಟ್ಟಿರುವ ಮಂಡ್ಯ ಜಿಲ್ಲೆಯ ಜನರು ಮಳೆ ದೇವರನ್ನು ಒಲಿಸಿಕೊಳ್ಳಲು ನಾನಾ ವಿಧಿ ವಿಧಾನಗಳನ್ನು ಹಾಗೂ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ.

ವರುಣದೇವನ ಓಲೈಕೆಗೆ ಮದ್ದೂರಿನಲ್ಲಿ ವಿಶೇಷ ಪೂಜೆ
ರಾಜ್ಯದಲ್ಲಿ ಮಳೆ ಬರದ ಸಮಯದಲ್ಲಿ ಮಳೆ ದೇವರನ್ನು ಪೂಜಿಸುವ ಹಳೆಯ ಆಚರಣೆಗಳು ರಾಜ್ಯದ ಹಲವೆಡೆ ನಡೆಯುತ್ತವೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ನಿವಾಸಿಗಳು ಈರಯ್ಯ ದೇವರ (ಮಳೆ ದೇವರು) ನ ಪುರಾತನ ಪ್ರತಿಮೆಯನ್ನು ಮಾಡಿ, 101 ಮಡಿಕೆ ನೀರನ್ನು ಸುರಿದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಶುದ್ಧೀಕರಿಸಿದ್ದಾರೆ.
ಈರಯ್ಯ ಸ್ವಾಮಿಯ ಪ್ರತಿಮೆಯನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸಿದರೆ ಮಳೆ ಬರುವುದು ಖಚಿತ ಎಂಬ ನಂಬಿಕೆ ಊರಿನವರಲ್ಲಿದೆ. ಬಳಿಕ ಈರಯ್ಯ ಪ್ರತಿಮೆಯನ್ನು ಊರಿನಲ್ಲಿ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಮಳೆ ದೇವರ ಮೂರ್ತಿಯನ್ನು ಹೊತ್ತು ಮದ್ದೂರಿನ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
ಮೆರವಣಿಗೆ ವೇಳೆ ಓಣಿಯಲ್ಲಿರುವ ಮನೆಗಳಿಗೆ ಭೇಟಿ ನೀಡಲಾಗಿದೆ. ಮಹಿಳೆಯರು ಶ್ರೀಗಂಧದ ಕಡ್ಡಿಗಳನ್ನು ಹತ್ತಿ ಭಕ್ತಿ ಭಾವದಿಂದ ಪ್ರತಿಮೆಗೆ ಪೂಜೆ ಸಲ್ಲಿಸಿದ್ದಾರೆ. ಕರ್ಪೂರದಿಂದ ಆರತಿ ಬೆಳಗಿ ಆದಷ್ಟು ಬೇಗ ಮಳೆ ಬರಲಿ ಎಂದು ಬೇಡಿಕೊಂಡಿದ್ದಾರೆ. ದೇವರ ಮೂರ್ತಿ ಹೊತ್ತಿದ್ದ ವ್ಯಕ್ತಿಯ ಮೊಣಕಾಲುಗಳ ಮೇಲೆ ನೀರು ಸುರೊದು ಬಳಿಕ ಪ್ರತಿಮೆಯ ಮೇಲೆ ನೀರಿನನ್ನು ಸುರಿಯಲಾಯಿತು. ಗ್ರಾಮದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮದ್ದೂರಮ್ಮನ ಕೆರೆಯಲ್ಲಿ ಈರಯ್ಯ ಸ್ವಾಮಿಯ ವಿಸರ್ಜನೆ ಮಾಡಿ, ಪಟ್ಟಣದ ನಿವಾಸಿಗಳಿಗೆ ಪೂಜೆಯ ಪ್ರಸಾದ ವಿತರಿಸಲಾಗಿದೆ.
ಕೋಲಾರದಲ್ಲೂ ಇದೆ ವಿಶಿಷ್ಟ ಆಚರಣೆ
ರಾಜ್ಯದಲ್ಲಿ ಇಂತಹ ವಿಶಿಷ್ಟ ಆಚರಣೆ ನಡೆಯುತ್ತಿರುವುದು ಇದೇ ಮೊದಲಲ್ಲ. ವರುಣ ದೇವರನ್ನು ಮೆಚ್ಚಿಸಲು, ರಾಜ್ಯದ ಹಲವು ಭಾಗಗಳಲ್ಲಿ ರೈತಾಪಿ ವರ್ಗ ಇಂತಹ ಆಚರಣೆಗಳನ್ನು ಮಾಡುತ್ತಾರೆ. ಕೋಲಾರ ಜಿಲ್ಲೆಯ ಯಲುವಹಳ್ಳಿ ಗ್ರಾಮದಲ್ಲಿಯೂ ಈ ಮೆರವಣಿಗೆಯನ್ನು ಮಾಡಲಾಗುತ್ತದೆ.












Click it and Unblock the Notifications