• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಘೋಷಿಸಿದ ಆಸ್ತಿ ಎಷ್ಟು?

|
   Lok Sabha Elections 2019 :ಪಕ್ಷೇತರ ಅಭ್ಯರ್ಥಿ ಸುಮಲತಾ ಘೋಷಿಸಿದ ಆಸ್ತಿ ಎಷ್ಟು? | Oneindia Kannada

   ಮಂಡ್ಯ, ಮಾರ್ಚ್ 20: ಮಾಜಿ ಸಚಿವ ದಿವಂಗತ ಎಂ.ಎಚ್ ಅಂಬರೀಷ್ ಅವರ ಪತ್ನಿ ನಟಿ ಸುಮಲತಾ ಅಮರನಾಥ್ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸುಮಲತಾ ಅವರು ಸಲ್ಲಿಸಿದ ಅಫಿಡವಿಟ್ ನಂತೆ ಒಟ್ಟು 23 ಕೋಟಿ ರು ಗೂ ಅಧಿಕ ಆಸ್ತಿ ಹೊಂದಿದ್ದಾರೆ.

   ನಾಮಪತ್ರ ಸಲ್ಲಿಸಿ, ರೋಡ್ ಶೋ ನಡೆಸಿ, ನಟ ಯಶ್ ಹಾಗೂ ದರ್ಶನ್ ತೂಗುದೀಪ ಅವರ ಜೊತೆ ಸಮಾರಂಭದಲ್ಲಿ ಪಾಲ್ಗೊಂಡ ಸುಮಲತಾ ಅವರು ಮಂಡ್ಯ ಜತೆಗಿನ ತಮ್ಮ ಅವಿನಾಭಾವ ಸಂಬಂಧವನ್ನು ಎಳೆ ಎಳೆಯಾಗಿ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಮನವರಿಕೆ ಮಾಡಿಕೊಟ್ಟರು.

   ರಾಜಕೀಯಕ್ಕೆ ಬಂದು ಹೊಸದಾಗಿ ನಾನು ಹೆಸರು ಮಾಡಿಕೊಳ್ಳಬೇಕು ಅಂತೇನೂ ಇಲ್ಲ. ನನ್ನ ಅಸ್ತಿತ್ವ ನನಗೆ ಇದೆ. ಅಂಬರೀಶ್ ಅವರ ಹೆಸರು ನನಗಿದೆ. ಇವತ್ತು ಹೊಸದಾಗಿ ಹುಡುಕಿಕೊಂಡು ಬರುವ ಅಗತ್ಯವಿಲ್ಲ. ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ಈ ಮಣ್ಣಿನ ತಾಯಿ. ನಾನು ನಿಮ್ಮ ಪ್ರೀತಿಯ ಅಂಬರೀಶ್ ಅವರ ಧರ್ಮ ಪತ್ನಿ. ಅಭಿಷೇಕ್ ಗೌಡನ ತಾಯಿ ಎಂದರು.

   ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ಲಸ್-ಮೈನಸ್ ಗಳೇನು?

   ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿರುವ ವಿವರಗಳು ಮುಂದಿವೆ...

   ಚುನಾವಣೆ ಸ್ಪರ್ಧೆ ಮಾಡಲು ಮಂಡ್ಯ ಜನತೆ ಆಗ್ರಹ ಕಾರಣ

   ಚುನಾವಣೆ ಸ್ಪರ್ಧೆ ಮಾಡಲು ಮಂಡ್ಯ ಜನತೆ ಆಗ್ರಹ ಕಾರಣ

   'ನೀವು ಯಾವ ಪಕ್ಷ ಬೇಕಾದರೂ ನಿಂತುಕೊಳ್ಳಿ. ಪಕ್ಷೇತರರಾಗಿ ನಿಂತುಕೊಳ್ಳಿ. ನಾವು ಅಂಬರೀಶಣ್ಣನ ಪರವಾಗಿ, ಅಂಬರೀಶಣ್ಣನ ಮೇಲೆ ಇಟ್ಟಿರುವ ಪ್ರೀತಿಯಿಂದ ನಿಮ್ಮನ್ನು ನಾವು ಗೆಲ್ಲಿಸ್ತೀವಿ. ಇಷ್ಟೊಂದು ವರ್ಷಗಳು ನಾವು ಅಂಬರೀಶ್ ಅಣ್ಣನ್ನೇ ನಂಬಿಕೊಂಡಿದ್ದಿವಿ. ಈಗ ನೀವು ನಮ್ಮ ಪರ ಇರಬೇಕು. ನೀವು ನಮ್ಮ ಕೈ ಬಿಡಬಾರದು' ಎಂದು ಮಂಡ್ಯದ ಜನತೆ ಹೇಳಿದ್ದರಿಂದ ನಾನು ಇಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು.

   ಸುಮಲತಾ ಓದು ಎಸೆಸ್ಸೆಲ್ಸಿ ತನಕ

   ಸುಮಲತಾ ಓದು ಎಸೆಸ್ಸೆಲ್ಸಿ ತನಕ

   ಹೆಸರು : ಸುಮಲತಾ ಅಮರನಾಥ್

   ಪತಿ: ದಿವಂಗತ ಎಂಎಚ್ ಅಮರನಾಥ್ ಅಲಿಯಾಸ್ ಅಂಬರೀಷ್

   ಪುತ್ರ: ಅಭಿಷೇಕ್ ಗೌಡ

   ವಯಸ್ಸು: 55 ವರ್ಷ

   ವಿಳಾಸ: ಬೆಂಗಳೂರಿನ ಜೆಪಿ ನಗರ 2ನೇ ಹಂತದ 21ನೇ ಮುಖ್ಯರಸ್ತೆಯಲ್ಲಿ ಮನೆ.

   * ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಹಕ್ಕು ಹೊಂದಿದ್ದಾರೆ.

   * 1 ಫೇಸ್ ಬುಕ್, 2 ಟ್ವಿಟ್ಟರ್ ಹಾಗೂ 2 ಇನ್ಸ್ಟಾಗ್ರಾಮ್ ಖಾತೆಗಳನ್ನು ಹೊಂದಿದ್ದಾರೆ.

   * ಯಾವುದೇ ಕ್ರಿಮಿನಲ್ ಕೇಸ್ ಗಳು ಇವರ ವಿರುದ್ಧ ಇಲ್ಲ.

   * ಅಂಧ್ರಪ್ರದೇಶದ ಗುಂಟೂರಿನ ಸಂತ ಜೋಸೆಫ್ ಕಾನ್ವೆಟ್ ಬ್ರೊಡಿಪೇಟ್ ಶಾಲೆಯಲ್ಲಿ 1977-78ರಲ್ಲಿ ಎಸ್ಎಸ್ಎಲ್ ಸಿ ತನಕ ವ್ಯಾಸಂಗ.

   ಮೊದಲ ಭಾಷಣದಲ್ಲೇ ಸುಮಲತಾ ಸಿಕ್ಸರ್, ಎದುರಾಳಿಗಳಿಗೆ ಬೌನ್ಸರ್!

   ಸ್ಥಿರಾಸ್ತಿ: 17 ಕೋಟಿ ಪ್ಲಸ್

   ಸ್ಥಿರಾಸ್ತಿ: 17 ಕೋಟಿ ಪ್ಲಸ್

   * ಸ್ಥಿರಾಸ್ತಿ ಮೌಲ್ಯ : 17,72,91,150 ರು

   * 41,00,000 ರು ಮೌಲ್ಯದ ಕೃಷಿ ಭೂಮಿ ಇದೆ.

   * ಬೆಂಗಳೂರಿನ ಜೆಪಿ ನಗರದಲ್ಲಿ ಮನೆ, ಕಟ್ಟಡಗಳ ಮೌಲ್ಯ 17,72,91,150 ರು

   * 2017-18ರ ಅರ್ಥಿಕ ವರ್ಷದ ಐಟಿ ರಿಟರ್ನ್ಸ್ ನಲ್ಲಿ 1,33,15,757 ರು ಆದಾಯ ತೋರಿಸಿದ್ದಾರೆ.

   ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?

   ಚರಾಸ್ತಿ : 5 ಕೋಟಿ ರು ಪ್ಲಸ್

   ಚರಾಸ್ತಿ : 5 ಕೋಟಿ ರು ಪ್ಲಸ್

   * ಎಚ್ ಡಿಎಫ್ ಸಿ, ಸಿಟಿ ಬ್ಯಾಂಕ್, ಎಸ್ ಬಿಐ ಬ್ಯಾಂಕ್ ಗಳಲ್ಲಿ ಖಾತೆಗಳಿಂದ 12,70,363 ರು ನಗದು ಹೊಂದಿದ್ದಾರೆ.

   * ವಿಜಯ ಬ್ಯಾಂಕ್ ಷೇರು ,ಎಚ್ ಡಿ ಎಫ್ ಸಿ ಈಕ್ವಿಟಿ, ಎಚ್ ಡಿ ಎಫ್ ಸಿ ಯುಲಿಪ್, ವಿಮೆ, ಕೋಟಕ್ ಮಹೀಂದ್ರಾ ವಿಮೆ ಹೊಂದಿದ್ದಾರೆ

   * ಚರಾಸ್ತಿ: 5,68,62,989 ರು

   * 1,66,81,189 ಮೌಲ್ಯದ ಚಿನ್ನ, 12,57,545 ರು ಮೌಲ್ಯ ಬೆಳ್ಳಿ ಹೊಂದಿದ್ದಾರೆ.

   ಸುಮಲತಾ ಅವರು 14 ಕೋಟಿ ಸಾಲ ಹೊಂದಿದ್ದಾರೆ

   ಸುಮಲತಾ ಅವರು 14 ಕೋಟಿ ಸಾಲ ಹೊಂದಿದ್ದಾರೆ

   * ಸುಮಲತಾ ಅವರು ಒಟ್ಟು 1,42,32,295 ರು ಸಾಲ ಹೊಂದಿದ್ದಾರೆ.

   * ಪ್ರಮೀಳಾ ಕೆ.ಜಿ (ಯಾವುದೇ ಭದ್ರತೆ ಇಲ್ಲದ ಸಾಲ) 45,00,000ರು

   * ಸಂತೋಷ್ ಡಿ.ಟಿ (ಯಾವುದೇ ಭದ್ರತೆ ಇಲ್ಲದ ಸಾಲ) 95,00,000 ರು

   * ಸ್ಯಾಂಡಲ್ ವುಡ್ ಮೀಡಿಯಾ (ಯಾವುದೇ ಭದ್ರತೆ ಇಲ್ಲದ ಸಾಲ) 2,32,295 ರು

   * ಬ್ಯಾಂಕ್ ಇನ್ನಿತರ ಆರ್ಥಿಕ ಸಂಸ್ಥೆಗಳಿಂದ ಯಾವುದೇ ಬಗೆಯ ಸಾಲವನ್ನು ಹೊಂದಿಲ್ಲ, ಬಾಕಿ ಉಳಿಸಿಕೊಂಡಿಲ್ಲ.

   ಮಂಡ್ಯದ ಬಗ್ಗೆ ಗುಪ್ತಚರ ವರದಿ, ಜೆಡಿಎಸ್‌ ಹಾದಿ ಸುಲಭವಲ್ಲ!

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Sumalatha Ambareesh, widow of former minister M.H. Ambareesh today filed nomination for Mandya Lok Sabha constituency as an independent candidate. Here are details of her assets and liabilities
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more