ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಇವಿಎಂ ಕಾರಣ: ಶಿವರಾಮೇಗೌಡ

|
Google Oneindia Kannada News

Recommended Video

ನಿಖಿಲ್ ಸೋಲಿಗೆ ಶಿವರಾಮೇಗೌಡ ಹೇಳಿದ್ದೇನು ಗೊತ್ತಾ..? | Oneindia Kannada

ಮಂಡ್ಯ, ಮೇ 25: ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಇವಿಎಂ ಕಾರಣ ಎಂದು ಮಾಜಿ ಸಂಸದ ಶಿವರಾಮೇಗೌಡ ಆರೋಪಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ!ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ!

ಯಾರಿಗೆ ವೋಟ್ ಕೊಟ್ಟರೂ ಬಿಜೆಪಿಗೆ ಬೀಳುವಂತೆ ಮಾಡಿದ್ದಾರೆ. ಸುಮಲತಾ ಗೆಲ್ಲುತ್ತಾರೆ ಅಂದರೆ ಇವಿಎಂ ಮೇಲೆ ಅನುಮಾನ ಹೆಚ್ಚಾಗುತ್ತದೆ. ನೂರಕ್ಕೆ ನೂರು ಇವಿಎಂ ಯಂತ್ರದಲ್ಲಿ ಮೋಸವಾಗಿದೆ ಎಂದು ಶಿವರಾಮೇಗೌಡ ಹೇಳಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದ ಶಿವರಾಮೇಗೌಡ, ಸುಮಲತಾ ಅಂಬರೀಷ್ ವಿರುದ್ಧ ಪದೇ ಪದೇ ನಾಲಿಗೆ ಹರಿಬಿಟ್ಟಿದ್ದರು. ಅವರ ಹೇಳಿಕೆಗಳಿಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಸುಮಲತಾ ಅವರ ಗೆಲುವಿಗೆ ಶಿವರಾಮೇಗೌಡ ಅವರ ಅವಹೇಳನಾಕಾರಿ ಮಾತುಗಳೂ ಕಾರಣ ಎನ್ನಲಾಗಿದೆ.

ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ: ಶಿವರಾಮೇಗೌಡ ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ: ಶಿವರಾಮೇಗೌಡ

ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ. ಅವರು ನಾಯ್ಡು ಮೂಲದವರು. ಅವರು ಮಂಡ್ಯವನ್ನು ನಾಯ್ಡುಮಯಗೊಳಿಸಲು ಹೊರಟಿದ್ದಾರೆ. ಸುಮಲತಾ ಟೂರಿಂಗ್ ಟಾಕೀಸ್ 18ನೇ ತಾರೀಕಿನವರೆಗೂ ಇರುತ್ತದೆ. ಆಮೇಲೆ ಎಲ್ಲರೂ ಪ್ಯಾಕ್ ಮಾಡಿಕೊಂಡು ಹೊರಡುತ್ತಾರೆ. ಅವರು ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆ. ಮಂಡ್ಯಕ್ಕೆ ಅಂಬರೀಷ್ ಅವರ ಕೊಡುಗೆ ಏನೂ ಇಲ್ಲ ಎಂದು ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದರು.

ಅಂಬರೀಷ್ ನಂಬಿ ಹಾಳುಮಾಡಿಕೊಂಡೆ ಸಿನಿಮಾ ಶೂಟಿಂಗ್‌ಗೆ ಬಂದವರು

ಅಂಬರೀಷ್ ನಂಬಿ ಹಾಳುಮಾಡಿಕೊಂಡೆ ಸಿನಿಮಾ ಶೂಟಿಂಗ್‌ಗೆ ಬಂದವರು

ಸುಮಲತಾ ಗಂಡನನ್ನು (ಅಂಬರೀಶ್) ನಂಬಿ ರಾಜಕೀಯ ಜೀವನದ ಇಪ್ಪತ್ತು ವರ್ಷ ಹಾಳು ಮಾಡಿಕೊಂಡೆ. ಈ ಸಿನಿಮಾದವರು ಶೂಟಿಂಗಿಗೆಂದು ಮಂಡ್ಯಕ್ಕೆ ಬಂದಂತಿದೆ, ಏಪ್ರಿಲ್ 18 ರ ಮತದಾನವಾದ ನಂತರ ಅವರೆಲ್ಲಾ ಕೈಗೆ ಸಿಗುವುದಿಲ್ಲ, ಟೆಂಟು ಕಿತ್ತುಕೊಂಡು ಬೆಂಗಳೂರಿಗೆ ಓಡಿ ಹೋಗುತ್ತಾರೆ ಎಂದು ಎಲ್.ಆರ್.ಶಿವರಾಮೇಗೌಡ ಅವರು ಹೇಳಿದ್ದರು.

ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಗೆ ಗೆಲುವು ಸುಲಭವಿಲ್ಲ! ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಗೆ ಗೆಲುವು ಸುಲಭವಿಲ್ಲ!

ಅವರು ಗೌಡ್ತಿಯಲ್ಲ, ನಾಯ್ಡು

ಅವರು ಗೌಡ್ತಿಯಲ್ಲ, ನಾಯ್ಡು

ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ. ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ನಾಯ್ಡು ಜನಾಂಗದವರು ಮಂಡ್ಯವನ್ನು ಮರುಳು ಮಾಡುತ್ತಿದ್ದಾರೆ. ಸುಮಲತಾ ಗೌಡರಾ, ಒಕ್ಕಲಿಗರಾ ಎಂಬುದು ತೀರ್ಮಾನ ಆಗಬೇಕು. ಅಂಬರೀಷ್ ಅವರನ್ನು ಮದುವೆ ಆದ ಮೇಲೆ ಗೌಡರೇ ಎಂದುಕೊಳ್ಳೋಣ. ಆದರೆ, ಅಂಬಿಗೆ ಮತ ಹಾಕಿದವರಿಗೆ ಸಹಾಯ ಮಾಡಿದ್ದಾರಾ? ಮಂಡ್ಯಕ್ಕೆ ಬಂದು ಮತ ಹಾಕಿದ್ದಾರಾ? ಕುಮಾರಸ್ವಾಮಿ ಮಂಡ್ಯಕ್ಕೆ ಅಂಬರೀಶ್ ಪಾರ್ಥೀವ ಶರೀರ ತಂದಾಗ ಅಂತಿಮ ದರ್ಶನ ಪಡೆಯಲು ಬಂದ ಜನಸಾಗರ ನೋಡಿ ಇವತ್ತು ಚುನಾವಣೆಗೆ ಬಂದಿದ್ದೀರಾ ಎಂದು ಶಿವರಾಮೇಗೌಡ ಪ್ರಶ್ನಿಸಿದ್ದರು.

ಸುಮಲತಾ ಪಡೆದ ಮತಗಳು

ಸುಮಲತಾ ಪಡೆದ ಮತಗಳು

ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ 1,25,876 ಮತಗಳಿಂದ ಸೋಲು ಅನುಭವಿಸಿದ್ದರು. ನಿಖಿಲ್ ಅವರು 5,77,784 ಮತಗಳನ್ನು ಪಡೆದುಕೊಂಡಿದ್ದರು. ಅವರ ನೇರ ಪ್ರತಿಸ್ಪರ್ಧಿಯಾಗಿದ್ದ ಸುಮಲತಾ ಅಂಬರೀಶ್ ಅವರು 7,03,660 ಮತಗಳನ್ನು ಗಳಿಸಿದ್ದರು.

ಪ್ರೀತಿಗೆ ಮರುಳಾಗುತ್ತಾರೆ

ಪ್ರೀತಿಗೆ ಮರುಳಾಗುತ್ತಾರೆ

ಇದು ಕಾಂಗ್ರೆಸ್ ರೆಬೆಲ್ ನಾಯಕರ ಗೆಲುವು, ಮಂಡ್ಯ ಜನರ ಸ್ವಾಭಿಮಾನದ ಗೆಲುವು, ಮಂಡ್ಯ ಜನರು ಪ್ರೀತಿಗೆ ಮರುಳಾಗುತ್ತಾರೆ ಹೊರತೂ ಮೋಸಕ್ಕಲ್ಲ. ಇಡೀ ಸರ್ಕಾರ ವಿರುದ್ಧ ನಿಂತಿದ್ದೀರಿ, ಅದು ನಿಜ. ಮಂಡ್ಯದ ಜನ ನನ್ನ ಪರವಾಗಿ ಇದ್ದರು. ಅಂಬರೀಷ್ ಮೇಲಿನ ಪ್ರೀತಿ ನನ್ನ ಕೈ ಹಿಡಿಯಿತು. ಇದು ಅಂಬರೀಷ್, ಮಂಡ್ಯದ ಸ್ವಾಭಿಮಾನಿಗಳ ಗೆಲುವು. ಕಾಂಗ್ರೆಸ್ಸಿನ ರೆಬೆಲ್ ಕಾರ್ಯಕರ್ತರು, ರಾಜ್ಯ ರೈತ ಸಂಘದವರು, ಯಶ್, ದರ್ಶನ್ ಅಭಿಮಾನಿಗಳು, ನನ್ನ ಪುಟ್ಟ ತಂಡ ಹಗಲು ರಾತ್ರಿ ದುಡಿದರು. ಅವರ ಪ್ರೀತಿ, ವಿಶ್ವಾಸಕ್ಕೆ ನಾವು ಋಣಿಯಾಗಿದ್ದೇವೆ ಎಂದು ಸುಮಲತಾ ಹೇಳಿದ್ದರು.

English summary
Lok Sabha Election Results: Mandya former MP Shivaramegowda accused EVM for Nikhil Kumaraswamy defeat against sumalatha Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X