ಮಂಡ್ಯ: ಲಾಕಪ್ ಡೆತ್ ಪ್ರಕರಣ ಮೂವರು ಕಾನ್ಸ್ಟೇಬಲ್ ಅಮಾನತು
ಮಂಡ್ಯ, ಜುಲೈ 13: ಜಿಲ್ಲೆಯ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಲಾಕಪ್ ನಡೆದಿದೆ ಎಂದು ಆರೋಪಿಸಲಾಗಿದ್ದು ಘಟನೆ ಸಂಬಂಧ 3 ಕಾನ್ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ.
ನಿನ್ನೆ (ಗರುವಾರ) ರಾತ್ರಿ ಮದ್ದೂರು ತಾಲ್ಲೂಕು ಬೆಳ್ತೂರು ಗ್ರಾಮದ ಮೂರ್ತಿ (45) ಎಂಬಾತನನ್ನು ಬೈಕ್ ಕಳ್ಳತನ ಆರೋಪದಡಿ ಠಾಣೆಗೆ ಕರೆತಂದಿದ್ದರು. ಆದರೆ ರಾತ್ರಿ ನಡೆದ ವಿಚಾರಣೆ ಪ್ರಕ್ರಿಯೆಯಲ್ಲಿ ಮೂರ್ತಿ ಸಾವನ್ನಪ್ಪಿದ್ದಾನೆ.
ಇಂದು ಬೆಳಿಗ್ಗೆಯಿಂದಲೇ ಮೃತ ಮೂರ್ತಿಯ ಸಂಬಂಧಿಕರು ಠಾಣೆಯ ಮುಂದೆ ತೀವ್ರ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಸಮಾಧಾನ ಪಡಿಸಿದರೂ ಪರಿಸ್ಥಿತಿ ಹತೋಟಿಗೆ ಬರಲಿಲ್ಲ.

ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ನ್ಯಾಯಾಧೀಶರ ಮುಂದೆ ಮೃತ ಮೂರ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೂವರು ಕಾನ್ಸ್ಟೇಬಲ್‌ಗಳನ್ನು ಅಮಾನತು ಮಾಡಿದರು. ಪ್ರಕರಣವನ್ನು ಸಿಸಿಡಿ ಪೊಲೀಸರಿಗೆ ವಹಿಸಲಾಗಿದೆ.












Click it and Unblock the Notifications