ಮತಗಟ್ಟೆ ಹೆಂಚು ತೆಗೆಸಿದ ಶಾಸಕ ಚೆಲುವರಾಯಸ್ವಾಮಿ: ಆಕ್ಷೇಪ
ಮಂಡ್ಯ, ಮೇ 12: ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ. ಶಾಸಕರೊಬ್ಬರು ಮತಗಟ್ಟೆಯಲ್ಲಿ ಬೆಳಕಿನ ಸಮಸ್ಯೆಯಿದ್ದ ಕಾರಣ ಮತಗಟ್ಟೆಯ ಹೆಂಚು ತೆಗೆಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲದ ಇಜ್ಜಲಘಟ್ಟ ಮತಗಟ್ಟೆಯಲ್ಲಿ ಶಾಸಕ ಚಲುವರಾಯಸ್ವಾಮಿ ಬೆಳಕಿನ ಸಮಸ್ಯೆ ಇದ್ದ ಕಾರಣ ಕಾರ್ಯಕರ್ತರಿಗೆ ಹೇಳಿ ಮತಗಟ್ಟೆಯ ಹೆಂಚು ತೆಗೆಸಿದ್ದಾರೆ.ಇದು ಮತಗಟ್ಟೆ ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆ ರೀತಿ ಚುನಾವಣಾಧಿಕಾರಿಗಳ ಒಪ್ಪಿಗೆ ಇಲ್ಲದೆ ಮತಗಟ್ಟೆಯ ಹೆಂಚು ತೆಗೆದಿರುವುದಕ್ಕೆ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು













Click it and Unblock the Notifications