ಮತ್ತೊಮ್ಮೆ ಮಂಡ್ಯ ರೈತರ ಮನಗೆದ್ದ ಮುಖ್ಯಮಂತ್ರಿ ಕುಮಾರಸ್ವಾಮಿ

Recommended Video

      ಮತ್ತೊಮ್ಮೆ ಮಂಡ್ಯ ರೈತರ ಮನಗೆದ್ದ ಮುಖ್ಯಮಂತ್ರಿ ಕುಮಾರಸ್ವಾಮಿ | Oneindia Kannada

      ಮಂಡ್ಯ, ಡಿಸೆಂಬರ್ 08: ಆಗಸ್ಟ್ ನಲ್ಲಿ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ಕೊಯ್ಲುಗೆ ಬಂದಿರುವ ಹಿನ್ನಲೆಯಲ್ಲಿ ಅದನ್ನು ಕೊಯ್ಲು ಮಾಡುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ರೈತರ ಮನಗೆದ್ದಿದ್ದಾರೆ.

      ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಈ ಕಾರ್ಯವನ್ನು ನೆರವೇರಿಸಿ ಗ್ರಾಮದಲ್ಲಿ ಸುಗ್ಗಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಶೃಂಗೇರಿ, ಮಡಿಕೇರಿಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕಾರಣ ಸುಮಾರು ಮೂರು ಗಂಟೆಗಳ ಕಾಲ ತಡವಾಗಿ ಬಂದರು.

      ಆ ನಂತರ ಸಂಜೆ 6 ಗಂಟೆಗೆ ಗದ್ದೆಗಿಳಿದು ಭತ್ತ ಕೊಯ್ಲಿಗೆ ಚಾಲನೆ ನೀಡಿದ ಕುಮಾರಸ್ವಾಮಿ, 6.04 ನಿಮಿಷಕ್ಕೆ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ಸೀತಾಪುರದ ಯೋಗೇಂದ್ರ ಅವರಿಗೆ ಸೇರಿದ ಒಂದೂವರೆ ಎಕರೆ ಹಾಗೂ ಡಿ.ದೇವರಾಜು ಎಂಬುವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಭತ್ತ ಕೊಯ್ಲು ಮಾಡಲಾಯಿತು.

      ಕೊಯ್ಲಿಗಾಗಿ ಸಿಎಂ ಕುಮಾರಸ್ವಾಮಿ ಮತ್ತು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಹಿತ್ತಾಳೆಯ ಕುಡುಗೋಲನ್ನು ಸಿದ್ಧಪಡಿಸಿದ್ದು ವಿಶೇಷವಾಗಿತ್ತು.

       60 ಗಂಡಾಳುಗಳು ಸಾಥ್ ನೀಡಿದರು

      60 ಗಂಡಾಳುಗಳು ಸಾಥ್ ನೀಡಿದರು

      ಕೊಯ್ಲಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಪುಟ್ಟರಾಜು ಅವರಿಗೆ 60 ಗಂಡಾಳುಗಳು ಹಾಗೂ 25 ಹೆಣ್ಣಾಳುಗಳು ಸಾಥ್ ನೀಡಿದರು. ಸಿಎಂ ಅವರಿಂದ ಕೊಯ್ಲು ಪ್ರಕ್ರಿಯೆ ನಡೆಸಿ ರಾಶಿ ಪೂಜೆ ಮಾಡಲು ಹೆಚ್ಚು ಸಮಯವಾಗಲಿದೆ ಎಂಬ ಕಾರಣಕ್ಕೆ ಬೆಳಗ್ಗೆಯೇ ಯಂತ್ರದ ಮೂಲಕ ಮೂರು ಎಕರೆ ಪ್ರದೇಶದ ಭತ್ತವನ್ನು ಕಟಾವು ಮಾಡಿ ಒಕ್ಕಣೆ ಮಾಡಿ ಭತ್ತದ ರಾಶಿಯನ್ನು ಹಾಕಲಾಗಿತ್ತು.

       ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು

      ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು

      ಈ ಭತ್ತದ ರಾಶಿಯನ್ನು ಸೇವಂತಿಗೆ ಹೂವು, ಬಾಳೆ ದಿಂಡು, ಕಬ್ಬಿನ ತೊಂಡೆಗಳಿಂದ ಸಿಂಗರಿಸಲಾಗಿತ್ತು. ಭತ್ತದ ರಾಶಿಯ ಪಶ್ಚಿಮ ಭಾಗದ ಕೊಳಗ ಮತ್ತು ಬಳ್ಳದಲ್ಲಿ ಭತ್ತವನ್ನು ತುಂಬಿ ಇಡಲಾಗಿತ್ತು. ಇವುಗಳಿಗೆಲ್ಲಾ ಮುಖ್ಯಮಂತ್ರಿಗಳು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

       ಪೊಲೀಸರಿಗೆ ಆವಾಜ್

      ಪೊಲೀಸರಿಗೆ ಆವಾಜ್

      ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭತ್ತ ಕೊಯ್ಲಿಗೆ ಆಗಮಿಸುವ ವೇಳೆಗೆ ಮದ್ಯ ಸೇವಿಸಿ ನಾಲೆಯ ಮೇಲೆ ಟಿವಿಎಸ್ ನಲ್ಲಿ ಬಂದ ವ್ಯಕ್ತಿ "ನಾನು ಆಂಜನೇಯ ಭಕ್ತ. ಪ್ರತಿ ದಿನ ಇಲ್ಲೇ ನಾನು ಓಡಾಡೋದು. ನನ್ನ ಸ್ಕೂಟರ್ ಮುಟ್ತೀರಾ" ಎಂದು ಹೇಳಿದ. ನಂತರ ಆತನನ್ನು ತಡೆದ ಪೊಲೀಸರಿಗೆ ಆವಾಜ್ ಹಾಕಿದ್ದೂ ನಡೆಯಿತು. ಆಗ ಸಮಾಧಾನದಲ್ಲೇ ಮಾತನಾಡಿದ ಪೊಲೀಸರು, ಏಯ್ ಕುಡಿದಿದ್ದೀಯಾ ನಡೀ ಆ ಕಡೆ ಎಂದು ರಸ್ತೆಯ ಪಕ್ಕಕ್ಕೆ ಕರೆದೊಯ್ದರು. ಆತ ತಂದಿದ್ದ ಸ್ಕೂಟರ್ ನ್ನೂ ಪೊಲೀಸರೇ ಪಕ್ಕಕ್ಕೆ ನಿಲ್ಲಿಸಿದರು. ಪೊಲೀಸರಿಗೆ ಗೊತ್ತಿಲ್ಲದಂತೆ ಸ್ಕೂಟರ್ ತೆಗೆದುಕೊಂಡು ಹೋಗಲು ಆ ವ್ಯಕ್ತಿ ಯತ್ನಿಸಿದಾಗ ಮತ್ತೆ ಪೊಲೀಸರು ಅವನನ್ನು ತಡೆದ ಘಟನೆಯೂ ನಡೆಯಿತು.

       ಅಮಾವಾಸ್ಯೆಯಂದೇ ಭತ್ತ ಕೊಯ್ಲು

      ಅಮಾವಾಸ್ಯೆಯಂದೇ ಭತ್ತ ಕೊಯ್ಲು

      ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ದು ಆ.11ರ ಅಮಾವಾಸ್ಯೆ ದಿನ. ಈಗ ಭತ್ತ ಕೊಯ್ಲು ಮಾಡಿದ್ದೂ ಡಿ.7 ಕೂಡ ಅಮಾವಾಸ್ಯೆಯೇ ಆಗಿದೆ, ಆದಿ ಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಭಕ್ತರಾಗಿರುವ ಕುಮಾರಸ್ವಾಮಿ ಅವರು ಚುನಾವಣೆಗೆ ಮುನ್ನ ಅಮಾವಾಸ್ಯೆಯಂದು ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದುದನ್ನು ಸ್ಮರಿಸಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+