ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚಿದ ಕಲ್ಲುಗಣಿಗಾರಿಕೆ: ಜಾರ್ಖಂಡ್ ತಂಡದಿಂದ ಕೆಅರ್‌ಎಸ್‌ ಸುರಕ್ಷತೆ ಪರಿಶೀಲನೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜುಲೈ, 22: ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್‌ಎಸ್‌ನ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟು ಸುರಕ್ಷತೆಗೆ ಅಪಾಯವಿರುವ ಕುರಿತು ಅಧ್ಯಯನ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು, ಜುಲೈ 25 ರಿಂದ 31ರವರೆಗೆ ಪ್ರಾಯೋಗಿಕ ಸ್ಫೋಟ ನಡೆಸಲು ನಿರ್ಧರಿಸಿದೆ.

ಜಾರ್ಖಂಡ್ ರಾಜ್ಯದ ಧನಬಾದ್‌ನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರ ಪ್ರಾಯೋಗಿಕ ಸ್ಫೋಟ ನಡೆಸಲಿದೆ. ಕೃಷ್ಣರಾಜಸಾಗರ ಸುರಕ್ಷತೆಗಾಗಿ ಅಧ್ಯಯನ ನಡೆಸುವುದರೊಂದಿಗೆ ಅಲ್ಲಿನ ಗಣಿಗಾರಿಕೆ ನಿಷೇಧಿಸುವ ಸಂಬಂಧ ಸುರಕ್ಷಿತ ವಲಯ ಗುರುತಿಸಲಿದೆ. ಇದಕ್ಕಾಗಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್‌ ಮೈನಿಂಗ್ ಅಂಡ್ ಯೂಯೆಲ್ ಸರ್ವೇಯವರು ಅಣೆಕಟ್ಟೆಗೆ ಹತ್ತಿರದಲ್ಲಿರುವ ಪ್ರದೇಶದಲ್ಲಿ ಅಧ್ಯಯನ ನಡೆಸುವಂತೆ ತಿಳಿಸಿದ್ದಾರೆ.

5 ಗಣಿ ಪ್ರದೇಶಗಳಲ್ಲಿ ಸ್ಫೋಟಕ್ಕೆ ಸಿದ್ಧತೆ
ಸಿಎಸ್‌ಐಆರ್ ಮತ್ತು ಸಿಐಎಂಎಆರ್ ವರದಿಯಲ್ಲಿ ತಿಳಿಸಿರುವಂತೆ ಒಟ್ಟು 5 ಕ್ವಾರಿಗಳಲ್ಲಿ ಟ್ರಯಲ್ ಬ್ಲಾಸ್ಟಿಂಗ್‌ಗಳನ್ನು ನಡೆಸಲು ಯೋಜಿಸಿದೆ. ಸ್ಫೋಟ ಕಾರ್ಯಾಚರಣೆ ನಡೆಸಲು ಅಗತ್ಯವಾದ ಸಾಮಗ್ರಿಗಳು ಮತ್ತು ನುರಿತ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸೂಚಿಸಲಾಗಿದೆ. ಶ್ರೀರಂಗಪಟ್ಟಣ ಮತ್ತು ಪಾಂಡವಪುರ ವ್ಯಾಪ್ತಿಯಲ್ಲಿ 5 ಪ್ರಾಯೋಗಿಕ ಸ್ಫೋಟಗಳನ್ನು ನಡೆಸಲು ರಂಧ್ರಗಳನ್ನು ಕೊರೆದು, ಸ್ಫೋಟಕಗಳನ್ನು ಸರಬರಾಜು ಮಾಡಲು ಕೊಡಗು ಜಿಲ್ಲೆ ಕುಶಾಲನಗರದ ಕಂಪನಿಯೊಂದಕ್ಕೆ ಜವಾಬ್ದಾರಿ ವಹಿಸಲಾಗಿದೆ.

KRS Experimental explosion to check dam safety


7 ದಿನಗಳ ಕಾಲ ಸ್ಫೋಟ ನಡೆಸುವುದರೊಂದಿಗೆ ಸ್ಪೋಟದಿಂದ ಭೂಮಿಯೊಳಗೆ ಉಂಟಾಗಬಹುದಾದ ಕಂಪನದ ತೀವ್ರತೆ, ಶಬ್ಧವನ್ನು ಅಳೆಯಲಾಗುತ್ತದೆ. ಹಾಗೂ ಏರ್‌ಬ್ಲಾಸ್ಟ್ ನಡೆಸುವುದರೊಂದಿಗೆ ಅಣೆಕಟ್ಟಿನ ಸುರಕ್ಷತೆ ಕುರಿತು ವಿಜ್ಞಾನಿಗಳ ತಂಡ ಅಧ್ಯಯನ ನಡೆಸಲಿದೆ. ಅಧ್ಯನಕ್ಕೆ ಆಗಮಿಸುವ ವಿಜ್ಞಾನಿಗಳು ಮತ್ತು ಸಿಬ್ಬಂದಿ ತಂಡಕ್ಕೆ ಜಿಲ್ಲಾಡಳಿತದ ವತಿಯಿಂದ ಸೂಕ್ತ ಪೊಲೀಸ್‌ ಭದ್ರತೆಯನ್ನು ಮಾಡಲಾಗಿದೆ.

KRS Experimental explosion to check dam safety

3 ತಿಂಗಳಲ್ಲಿ ವರದಿ ಸಲ್ಲಿಸುವುದಾಗಿ ಭರವಸೆ
ಜಾರ್ಖಂಡ್ ಮೂಲದ ವಿಜ್ಞಾನಿಗಳು ಅಧ್ಯಯನ ನಡೆಸುವುದರೊಂದಿಗೆ 3 ತಿಂಗಳೊಳಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ. ಈ ಬಾರಿ ಸ್ಫೋಟದಿಂದ ಯಾವುದೇ ತೊಂದರೆಗಳು ಆಗದೇ ಆಯಶಸ್ವಿಯಾಗಿ ಪೂರ್ಣಗೊಂಡರೆ ಅಧ್ಯಯನ ನಡೆಸಿದ ವಿಜ್ಞಾನಿಗಳು ವರದಿ ಸಲ್ಲಿಕೆ ಕಾರ್ಯ ಸುಗಮವಾಗಲಿದೆ. ವಿಜ್ಞಾನಿಗಳು ನೀಡುವ ವರದಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಕೇವಲ ಕೆಆರ್‌ಎಸ್ ಮಾತ್ರವಲ್ಲದೆ ರಾಜ್ಯದ ಉಳಿದ ಅಣೆಕಟ್ಟುಗಳ ಸುರಕ್ಷತೆ ದೃಷ್ಟಿಯಿಂದಲೂ ಗಣಿಗಾರಿಕೆ ಸಂಬಂಧ ಯಾವ ಯಾವ ನಿಯಮಾವಳಿಗಳನ್ನು ರೂಪಿಸಬೇಕು ಎನ್ನುವುದಕ್ಕೆ ಹೊಸ ಮಾರ್ಗಸೂಚಿಯಾಗಲಿದೆ.

KRS Experimental explosion to check dam safety

ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಸ್ಫೋಟಕ ನಡೆಸುವುದನ್ನು ನೋಡಿದ್ದೇವೆ. ಇದರಿಂದ ಎಷ್ಟೋ ನದಿಗಳು, ಅಣೆಕಟ್ಟುಗಳಿಗೆ ತೊಂದರೆಗಳು ಕೂಡ ಆಗುತ್ತಿವೆ. ಅಣೆಕಟ್ಟುಗಳು ಸ್ಫೋಟಕಗಳಿಂದ ಬಿರುಕು ಬಿಡುತ್ತಿದ್ದು, ಅಪಾಯದ ಅಂಚಿನಲ್ಲಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಅದೇ ರೀತಿಯಾಗ ಬರೀ ರಾಜ್ಯದಲ್ಲಿ ಅಲ್ಲದೇ ದೇಶದಲ್ಲೇ ಪ್ರಖ್ಯಾತಿ ಪಡೆದಿರುವ ಕೆಆರ್‌ಎಸ್‌ ಅಣೆಕಟ್ಟು ಸುತ್ತಲಿನ ಗಣಿಗಾರಿಕೆಯಿಂದ ಅಪಾಯದ ಅಂಚಿನಲ್ಲಿದೆ ಎಂದು ಆರೋಪಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೆ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ ಕೆಆರ್‌ಎಸ್‌ ಅಣೆಕಟ್ಟಿನ ಸುತ್ತ ಅಧ್ಯಯನ ನಡೆಸಲು ಮುಂದಾಗಿದೆ. ಹೊರರಾಜ್ಯಗಳಿಂದ ವಿಜ್ಞಾನಿಗಳನ್ನು ಕರೆಸಿ ಅಧ್ಯಯನ ಮಾಡಿಸಲು ನಿರ್ಧರಿಸಿದೆ.

English summary
The district administration has decided to conduct a trial blast from July 25 to 31 to conduct a study on the safety of the dam due to the ongoing mining around KRS in Mandya district. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X