ಸುಮಲತಾ ಪರ ಪ್ರಚಾರ: ನಟರಿಗೆ ಎಚ್ಚರಿಕೆ ನೀಡಿದ ಕೆ.ಆರ್. ಪೇಟೆ ಶಾಸಕ
Recommended Video

ಮಂಡ್ಯ, ಮಾರ್ಚ್ 20: ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಪರ ಪ್ರಚಾರ ನಡೆಸದಂತೆ ನಟರಿಗೆ ಕೆ.ಆರ್. ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಧಮಕಿ ಹಾಕಿದ್ದಾರೆ.
ನಮ್ಮದೇ ಸರ್ಕಾರ ಅಸ್ತಿತ್ವದಲ್ಲಿದೆ. ನೀವು ಆಸ್ತಿ ಅಂತಸ್ತು ಏನು ಮಾಡಿದ್ದೀರಿ ಅದರ ಮೇಲೆ ತನಿಖೆ ಮಾಡುತ್ತೇವೆ. ನಿಮ್ಮ ಕೆಲಸ ನೋಡಿಕೊಂಡು ಗೌರವದಿಂದ ಮನೆಯಲ್ಲಿರಿ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ರಾಜಕಾರಣ, ಕುಮಾರಣ್ಣ, ದೇವೇಗೌಡರ ಬಗ್ಗೆ ಮಾತನಾಡಲು ಅಧಿಕಾರವಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡಿದರೆ ತಕ್ಕಪಾಠ ಮಾಡುತ್ತೇವೆ. ಭಾರತದಲ್ಲಿ ಸರ್ಕಾರ ಎಲ್ಲಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಇವರಿಗೆ ತಿಳಿದಿಲ್ಲ. ನಿಮಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ಸುಮ್ಮನೆ ಸಿನಿಮಾ ಮಾಡಿ ಎಂದು ಆಗ್ರಹಿಸಿದರು.

ಇದರಿಂದ ಫಿಲಂ ಇಂಡಸ್ಟ್ರಿಗೆ ಎಫೆಕ್ಟ್ ಆಗುತ್ತದೆ. ನಾವೆಲ್ಲ ಟಿಕೆಟ್ ಪಡೆದುಕೊಂಡು ಸಿನಿಮಾ ನೋಡುತ್ತಿರುವುದರಿಂದ ಅವರು ದೊಡ್ಡ ನಟರಾಗಿ ಬೆಳೆದಿರುವುದು ಎಂದು ಹೇಳಿದರು.
ಈ ಬಗ್ಗೆ ಟಿವಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ ನಾರಾಯಣಗೌಡ, ತಾವು ಆಕ್ರೋಶದಿಂದ ಮಾತನಾಡಿರುವುದು ನಿಜ. ಆದರೆ, ದರ್ಶನ್ ಮಂಡ್ಯದ ಜನರು, ರಾಜಕಾರಣಿಗಳು ಮತ್ತು ದೇವೇಗೌಡರ ಬಗ್ಗೆ ಕೆಟ್ಟದಾಗಿ ಏಕವಚನದಲ್ಲಿ ಮಾತನಾಡಿದ್ದಾರೆ. ಅವರಿಗೆ ಹೀಗೆ ಮಾತನಾಡುವ ಹಕ್ಕು ಏನಿದೆ? ಇದು ಎಲ್ಲ ಕಡೆ ಮೊನ್ನೆಯಿಂದ ಹರಿದಾಡುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications