ಚುನಾವಣೆ ಫಲಿತಾಂಶ : ಮಂಡ್ಯದಲ್ಲಿ ಶಕ್ತಿ ಪ್ರದರ್ಶಿಸಿದ ಜೆಡಿಎಸ್!
ಮಂಡ್ಯ, ಸೆಪ್ಟೆಂಬರ್ 03 : ವಿಧಾನಸಭೆ ಚುನಾವಣೆ ಬಳಿಕ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಇದು ಮತ್ತೊಮ್ಮೆ ಸಾಬೀತಾಗಿದೆ. ಮಂಡ್ಯ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ.
ಸೋಮವಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮಂಡ್ಯ ನಗರ ಸಭೆಯ 35 ವಾರ್ಡ್‌ಗಳ ಪೈಕಿ 18 ರಲ್ಲಿ ಜೆಡಿಎಸ್, 9ರಲ್ಲಿ ಕಾಂಗ್ರೆಸ್, 2 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. 6 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಮದ್ದೂರು, ನಾಗಮಂಗಲ, ಪಾಂಡವಪುರ ಪುರಸಭೆಯಲ್ಲಿಯೂ ಜೆಡಿಎಸ್ ಜಯಭೇರಿ ಬಾರಿಸಿದೆ. ಈ ಮೂಲಕ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಜಯಗಳಿಸಿದ್ದರು.

ಮಂಡ್ಯ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಅವರು ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. 'ಮಂಡ್ಯ ಹಿಂದುಳಿದ ನಗರವಾಗಿತ್ತು.ಇನ್ನು ಮುಂದೆ ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ಸಿಎಂ ನಮ್ಮವರು, ಈ ಹಿನ್ನಲೆಯಲ್ಲಿ ಅಭಿವೃದ್ಧಿ ಕೆಲಸ ಆಗಲಿದೆ' ಎಂದರು.
ಮಂಡ್ಯ ಜಿಲ್ಲೆಯ ಫಲಿತಾಂಶ
* ಮಂಡ್ಯ ನಗರಸಭೆ ( 35 ವಾರ್ಡ್) : 18 ಜೆಡಿಎಸ್, ಕಾಂಗ್ರೆಸ್ 9, ಬಿಜೆಪಿ 2, ಪಕ್ಷೇತರ 06
* ಮದ್ದೂರು ಪುರಸಭೆ ( 23 ವಾರ್ಡ್) : 12 ಜೆಡಿಎಸ್, ಕಾಂಗ್ರೆಸ್ 4, ಬಿಜೆಪಿ 1, ಪಕ್ಷೇತರ 06
* ಪಾಂಡವಪುರ ಪುರಸಭೆ (23 ವಾರ್ಡ್) : 18 ಜೆಡಿಎಸ್, ಕಾಂಗ್ರೆಸ್ 3, ಬಿಜೆಪಿ 0, ಪಕ್ಷೇತರ 02
* ನಾಗಮಂಗಲ ಪುರಸಭೆ (23 ವಾರ್ಡ್) : 12 ಜೆಡಿಎಸ್, ಕಾಂಗ್ರೆಸ್ 11, ಬಿಜೆಪಿ 0, ಪಕ್ಷೇತರ 0












Click it and Unblock the Notifications