ಮಹಾರಾಷ್ಟ್ರಕ್ಕೆ ಜೈ ಅಂದ ಕರ್ನಾಟಕದ ಮಂತ್ರಿ: ಭಾರೀ ವಿರೋಧ
ಮಂಡ್ಯ, ಫೆಬ್ರವರಿ 27: ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈಕಾರ ಕೂಗುವ ಮೂಲಕ ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ.
Recommended Video
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಫೆಬ್ರವರಿ 20ರಂದು ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಕಲಾತಂಡದ ಕುರಿತು ಮಾತನಾಡುವ ವೇಳೆ ಮಹಾರಾಷ್ಟ್ರಕ್ಕೆ ಜೈ ಎಂದಿದ್ದಾರೆ.
ಸಭೆಯಲ್ಲಿ ಮಾತನಾಡುತ್ತಾ ಅವರು, "ಈಗ ನಾನು ಏನೇ ಆಗಿದ್ದರೂ ಅದು ಮಹಾರಾಷ್ಟ್ರದಿಂದ. 25 ವರ್ಷಗಳ ಹಿಂದೆ ಮುಂಬೈಗೆ ಹೋಗಿ ಹೋಟೇಲ್ ಉದ್ಯಮಿಯಾಗಿ, ಬಿಲ್ಡರ್ ಆಗಿ, ಆದಾದ ಮೇಲೆ ಇಲ್ಲಿಗೆ ಬಂದು ರಾಜಕಾರಣಿಯಾದೆ'' ಎಂದಿದ್ದಾರೆ.

"ನನ್ನನ್ನು ಉದ್ಯಮಿಯನ್ನಾಗಿ ಮಾಡಿದ್ದೇ ಮಹಾರಾಷ್ಟ್ರ. ಜೈ ಮಹಾರಾಷ್ಟ್ರ ಮತ್ತು ಜೈ ಶಿವಾಜಿ ಮಹಾರಾಜ್ ಎಂದು ಹೇಳಲು ಬಯಸುತ್ತೇನೆ. ಇಂದು ನನ್ನ ದೇಹದಲ್ಲಿ ಶಕ್ತಿ, ತಾಕತ್ತು ಇದೆ ಎಂದರೆ ಅದು ಮಹಾರಾಷ್ಟ್ರದ್ದು, ಜೈ ಮಹಾರಾಷ್ಟ್ರ'' ಎಂದು ಘೋಷಣೆ ಕೂಗಿದ್ದಾರೆ.
ಭಾಷಣವನ್ನು ಪೂರ್ತಿಯಾಗಿ ಮರಾಠಿಯಲ್ಲೇ ಮಾಡಿರುವ ನಾರಾಯಣಗೌಡ, ಮಹಾರಾಷ್ಟ್ರದ ಪರ ಜೈಕಾರ ಕೂಗಿ ಇದೀಗ ಟೀಕೆಗೆ ಒಳಗಾಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಕರ್ನಾಟಕದಲ್ಲಿದ್ದುಕೊಂಡು ಬೇರೆ ರಾಜ್ಯವನ್ನು ಹೊಗಳಿ, ಜೈಕಾರ ಹಾಕಿದ್ದಕ್ಕೆ ಟೀಕೆಗಳೂ ಕೇಳಿಬರುತ್ತಿವೆ.












Click it and Unblock the Notifications