ಮಂಡ್ಯ; ಸರ್ಕಾರದ ಯಡವಟ್ಟು, ಕನ್ನಡ ಶಾಲೆಗಳತ್ತ ಬಾರದ ವಿದ್ಯಾರ್ಥಿಗಳು
ಮಂಡ್ಯ, ಅಕ್ಟೋಬರ್, 31: ರಾಜ್ಯದಲ್ಲಿ ಶೇಕಡಾ 100ರಷ್ಟು ಕನ್ನಡ ಭಾಷೆ ಮಾತನಾಡುವವರು ಇರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಡ್ಯ ಜಿಲ್ಲೆಯಲ್ಲೂ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸಲು ಆರಂಭಿಸಿದೆ. ಇದು ಕನ್ನಡ ಅಧೋಗತಿಗೆ ಇಳಿಯುತ್ತಿರುವುದಕ್ಕೆ ಕೈಗನ್ನಡಿಯಾಗಿದೆ.
ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸುವುದರಲ್ಲಿ ಇರುವ ಆಸಕ್ತಿಯನ್ನು ಕನ್ನಡವನ್ನು ಕಲಿಸುವುದಕ್ಕೆ ತೋರಿಸುತ್ತಿಲ್ಲ. ಹೀಗಾಗಿ ಇಂಗ್ಲಿಷ್ ಎಲ್ಲೆಡೆ ಆಳವಾಗಿ ಬೇರೂರಲು ಆರಂಭಿಸಿದೆ. ಇದರಿಂದ ಕನ್ನಡದ ಬೇರುಗಳು ನೆಲಕಚ್ಚುವ ಸ್ಥಿತಿಯನ್ನು ತಲುಪಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಕನ್ನಡದ ಹಣತೆಗಳಂತಿರುವ ಕನ್ನಡ ಶಾಲೆಗಳು ಮಾತ್ರ ಬೆಳಗುತ್ತಲೇ ಇಲ್ಲ. ಕನ್ನಡ ಶಾಲೆಗಳು ಬಾಗಿಲು ಮುಚ್ಚುತ್ತಲೇ ಇದ್ದು, ನಿರಂತರವಾಗಿ ಕತ್ತಲು ಆವರಿಸುತ್ತಲೇ ಇದೆ. ಎರಡು ಸಾವಿರ ವರ್ಷಗಳ ಭಾಷೆಗಳ ಜೀವಂತಿಕೆಯ ಬಗ್ಗೆ ಅವಲೋಕನ ನಡೆಸಿದರೆ, ಇದೀಗ ಆಂಗ್ಲಭಾಷೆಯ ಒತ್ತಡ ಹೇರಿದ ಉದಾಹರಣೆಯೇ ಹೆಚ್ಚಾಗಿದೆ. ಜಾಗತೀಕರಣ, ತಾಂತ್ರಿಕತೆಯಲ್ಲಿನ ಆವಿಷ್ಕಾರಗಳು, ಇಂಗ್ಲಿಷ್ ಭಾಷೆ ಕಬಂಧ ಬಾಹುಗಳಿಂದ ಪ್ರಾದೇಶಿಕ ಭಾಷೆಗಳು ಮೂಲೆಗುಂಪು ಆಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಥಿತಿಯನ್ನು ನೋಡಿದರೆ ತುಂಬಾ ಬಡತನದಲ್ಲಿರುವಂತೆ ಕಂಡುಬರುತ್ತವೆ. ಅವುಗಳಿಗೆ ಹೊಸ ರೂಪ ನೀಡುವ, ಆಧುನಿಕತೆಯ ಸ್ಪರ್ಶದೊಂದಿಗೆ ಮೇಲ್ಪಂಕ್ತಿಗೆ ಏರಿಸುವ ಸಣ್ಣ ಪ್ರಯತ್ನಗಳು ಕೂಡ ಸರ್ಕಾರದಿಂದ ನಡೆಯುತ್ತಿಲ್ಲ. ಅಂದ ಮೇಲೆ ಕನ್ನಡ ಶಾಲೆಗಳು ಬೆಳವಣಿಗೆ ಕಾಣುವುದಾದರೂ ಹೇಗೆ ಎನ್ನುವುದು ಎಲ್ಲರ ಯಕ್ಷ ಪ್ರಶ್ನೆ ಆಗಿದೆ. ಇಂದಿನ ಕನ್ನಡ ಶಾಲೆಗಳು ಕಡುಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ ಸೀಮಿತವಾಗಿ ಉಳಿದುಕೊಂಡಿವೆ. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಭವಿಷ್ಯವಿಲ್ಲ ಎನ್ನುವುದು ಪೋಷಕರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಅವರು, ಕನ್ನಡವನ್ನು ಪಕ್ಕಕ್ಕೆ ತಳ್ಳಿ ಇಂಗ್ಲಿಷ್ ಮಾಧ್ಯಮದತ್ತ ಮುಖ ಮಾಡುತ್ತಿದ್ದಾರೆ.

ಇಂಗ್ಲಿಷ್ ಶಾಲೆಗಳತ್ತ ಪೋಷಕರ ಚಿತ್ತ
ಹಳ್ಳಿಗಾಡಿನಲ್ಲಿರುವ ಮಕ್ಕಳನ್ನು ಕೂಡ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವುದು ಹೆಚ್ಚಾಗಿದೆ. ಹಾಗಂತ ಅವರನ್ನು ಭಾಷಾಭಿಮಾನಿಗಳು ಅಲ್ಲ ಎನ್ನಲಾಗುವುದಿಲ್ಲ. ಮನಸ್ಸಿನೊಳಗೆ ಭಾಷಾಭಿಮಾನ ಇದ್ದರೂ ಮಾಧ್ಯಮದಲ್ಲಿ ಅದು ಸತ್ತುಹೋಗಿದೆ. ಇಂಗ್ಲಿಷ್ ಕಲಿಯುವ ಅನಿವಾರ್ಯತೆ ಸೃಷ್ಟಿ ಆಗಿರುವುದರಿಂದ ಪೋಷಕರು ವಿಧಿ ಇಲ್ಲದೆ ಅತ್ತ ಆಕರ್ಷಿತರಾಗುತ್ತಿದ್ದಾರೆ. ಖಾಸಗಿ ಶಾಲೆಗಳಂತೆ ಕನ್ನಡ ಶಾಲೆಗಳಿಗೆ ಆಧುನೀಕತೆಯ ಸ್ಪರ್ಶ ನೀಡಬೇಕು. ಮಕ್ಕಳು ಓದುವ ಜಾಗ ನವನಾವೀನ್ಯತೆಯಿಂದ ಕೂಡಿರಬೇಕು. ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದ್ದರೆ ಮಾತ್ರ ಪೋಷಕರು ಕನ್ನಡ ಮಾಧ್ಯಮಕ್ಕೆ ಆಕರ್ಷಿತರಾಗುತ್ತಾರೆ.

ಸರ್ಕಾರಗಳ ನಿರ್ಲಕ್ಷ್ಯ, ಕನ್ನಡಕ್ಕೆ ಆಪತ್ತು
ಸರ್ಕಾರಗಳು ಆಧುನಿಕ ಯುಗಕ್ಕೆ ತಕ್ಕಂತೆ ಕನ್ನಡ ಶಾಲೆಗಳಿಗೆ ಹೊಸ ರೂಪ ಕೊಡಲಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಹಾಗೂ ಮನ್ನಣೆಯನ್ನು ನೀಡಲಿಲ್ಲ. ಶಾಲೆಗಳಿಗೆ ಬೇಡಿಕೆಯಷ್ಟು ಶಿಕ್ಷಕರನ್ನು ಕೊಡಲಿಲ್ಲ. ಮೂಲ ಸೌಕರ್ಯಗಳನ್ನು ಒದಗಿಸಲಿಲ್ಲ. ಕಳಪೆಯಾಗಿ ನಿಂತಿರುವ ಶಾಲೆಗಳಿಂದ ಮಕ್ಕಳು ವರ್ಷದಿಂದ ವರ್ಷಕ್ಕೆ ದೂರ ಸರಿಯುತ್ತಲೇ ಇದ್ದಾರೆ. ಹತ್ತು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳಾದರೂ ಕನ್ನಡ ಶಾಲೆಗಳಿಗೆ ಬರುತ್ತಿದ್ದರು.

ಖಾಸಗಿಯತ್ತ ವಿದ್ಯಾರ್ಥಿಗಳ ಚಿತ್ತ
ಯಾವಾಗ ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿ ಮಾಡಲಿಲ್ಲವೋ ಪ್ರಸ್ತುತ ಗ್ರಾಮೀಣ ಮಕ್ಕಳು ಕೂಡ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದಾರೆ. ಅವರಿದ್ದಲ್ಲಿಗೆ ಕರೆದೊಯ್ಯಲು ಬರುವ ಖಾಸಗಿ ಶಾಲೆಯ ಬಸ್ಸುಗಳು, ಹಳ್ಳಿಗಳ ಸಮೀಪವೇ ತಲೆ ಎತ್ತುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಕನ್ನಡ ಶಾಲೆಗಳು ಸ್ವಂತಿಕೆಯನ್ನು ಕಳೆದುಕೊಂಡಿವೆ. ಗ್ರಾಮೀಣ ಭಾಗದ ಜನರು ಕಷ್ಟಪಟ್ಟಾದರೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮ ಕನ್ನಡ ಮಾತ್ರವಲ್ಲದೆ ಇತರ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಆಪೋಶನ ತೆಗೆದುಕೊಳ್ಳುವಂತೆ ಕಂಡುಬರುತ್ತಿದೆ ಎಂದು ಹಿರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇಂಗ್ಲಿಷ್ ವ್ಯಾಮೋಹ, ಕನ್ನಡಕ್ಕೆ ಯಡವಟ್ಟು
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಎಂ.ಎ., ಪಿಹೆಚ್‌ಡಿ ಪದವಿ ಗಳಿಸಿದವರಿಗೆ ಸೂಕ್ತ ಉದ್ಯೋಗವಕಾಶಗಳು ದೊರಕುತ್ತಿಲ್ಲ. ಕನ್ನಡ ಭಾಷೆಯಲ್ಲಿ ಓದಿದವರು ಮಹತ್ವದ ಹುದ್ದೆಗಳನ್ನು ಅಲಂಕರಿಸದಿರುವುದರಿಂದ ಕನ್ನಡ ಮಾಧ್ಯಮದ ಮೇಲಿನ ಆಸಕ್ತಿ ಪೋಷಕರಿಂದ ದೂರವಾಗುತ್ತಿದೆ. ಪೋಷಕರು ಸಾಲ ಮಾಡಿಯಾದರೂ ಮಕ್ಕಳನ್ನು ಆಂಗ್ಲ ಭಾಷೆಯಲ್ಲಿ ಓದಿಸುವ ಹಂಬಲವನ್ನು ಹೊತ್ತಿದ್ದಾರೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಬೆಲೆ ಇಲ್ಲದಂತಾಗಿದೆ. ಮನೆಗಳಲ್ಲಿ ಮಕ್ಕಳು ಕನ್ನಡದಲ್ಲಿ ಮಾತನಾಡುವುದಕ್ಕಿಂತ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ಕಂಡು ಪೋಷಕರು ಸಂಭ್ರಮಿಸುತ್ತಿದ್ದಾರೆ. ನಮ್ಮ ಮಕ್ಕಳಿಗೆ ಕನ್ನಡವೇ ಬರುವುದಿಲ್ಲ ಎನ್ನುವುದನ್ನು ಗರ್ವದಿಂದ ಹೇಳಿಕೊಳ್ಳುತ್ತಲೂ ಇದ್ದಾರೆ. ತಮ್ಮಲ್ಲಿರುವ ಚಿನ್ನವನ್ನು ಒತ್ತೆ ಇಟ್ಟು, ಸಾಲ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಸುಭದ್ರವಾಗಿ ಕಟ್ಟಿಕೊಡುವುದಕ್ಕೆ ಪಣತೊಟ್ಟು ನಿಂತಿದ್ದಾರೆ.

ಉದ್ಯೋಗದ ಭರವಸೆ ಇಲ್ಲದೆ ಕಂಗಾಲು
ಭಾಷೆ ಆಧುನೀಕತೆಯಿಂದ ಕೂಡಿದ್ದಾಗ ಅದಕ್ಕೆ ಹೆಚ್ಚಿನ ಮಹತ್ವ, ಆಕರ್ಷಣೆ ಬರುತ್ತದೆ. ಕನ್ನಡ ಶಾಲೆಗಳು ಸೌಲಭ್ಯಗಳಿಲ್ಲದ ಕಡುಬಡ ಶಾಲೆಗಳಂತೆ ಪೋಷಕರಿಗೆ ಗೋಚರಿಸುತ್ತಿವೆ. ಕನ್ನಡ ಕಲಿತ ಮಕ್ಕಳಿಗೆ ಉದ್ಯೋಗದ ಭರವಸೆ ಸಿಗುತ್ತಿಲ್ಲ. ಭವಿಷ್ಯ ಕಟ್ಟಿಕೊಳ್ಳಬಹುದೆಂಬ ಸಣ್ಣ ಆಸೆಯೂ ಕಾಣುತ್ತಿಲ್ಲ. ಹೀಗಾಗಿ ಕನ್ನಡ ಭಾಷೆ ಬೆಳವಣಿಗೆ ಮಂಕಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷರು ಎಲ್. ಸಂದೇಶ್ ಆತಂಕವನ್ನು ವ್ಯಕ್ಯಪಡಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications