Breaking: ಗಣಿಗಾರಿಕೆಗಾಗಿ ಕೆಆರ್‌ಎಸ್ ಬಳಿ ಪ್ರಾಯೋಗಿಕ ಸ್ಫೋಟ

ಮಂಡ್ಯ ಜುಲೈ 22: ಕೃಷ್ಣರಾಜ ಸಾಗರ (ಕೆಆರ್‌ಎಸ್) ಡ್ಯಾಂಗೆ ಗಣಿಗಾರಿಕೆಯಿಂದ ತೊಂದರೆ ಇದೆಯೇ?. ಇದ್ದರೆ ಅದು ಹೇಗೆ ಎಂದು ತಿಳಿದುಕೊಳ್ಳಲು ರಾಜ್ಯ ಸರ್ಕಾರ ಬೇಬಿ ಬೆಟ್ಟದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲು ತೀರ್ಮಾನಿಸಲಾಗಿದೆ.

ಮೂಲಗಳ ಪ್ರಕಾರ ರಾಜ್ಯ ಸರ್ಕಾರ ಜುಲೈ 25 ರಿಂದ 31ರವರೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬೇಬಿ ಬೆಟ್ಟದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲಿದೆ. ಅದಕ್ಕಾಗಿ ಸಿದ್ಧತೆ ನಡೆಸಿಕೊಂಡಿದೆ. ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದರೂ ಸರ್ಕಾರದ ಈ ನಿರ್ಧಾರ ಕುತೂಹಲ ಮೂಡಿಸಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬೇಬಿ ಬೆಟ್ಟದ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟಿಗೆ ತೊಂದರೆ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಪರಿಸರವಾದಿಗಳು ಹಾಗೂ ಅನೇಕರು ಹೇಳಿದ್ದರು. ಈ ಕುರಿತು ಸಂಸದರು ಸದನದಲ್ಲಿ ಪ್ರಸ್ತಾಪಿಸಿದ್ದರು. ಡ್ಯಾಂಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕಾಗಿಯೇ ಈ ಭಾಗದಲ್ಲಿ 2019ರಿಂದಲೂ ಗಣಿಗಾರಿಕೆ ಮುಖ್ಯ ಭಾಗವೇ ಆದ ಟ್ರಯಲ್ ಬ್ಲಾಸ್ಟ್ ವಿರೋಧ ವ್ಯಕ್ತವಾಗುತ್ತಿದೆ.

Karnataka Govt Approves For Trail blast in Mandy Bebi Betta From July 25 to 31

ಈ ಮಧ್ಯೆ ಕೆಆರ್‌ಎಸ್‌ ಅಣೆಕಟ್ಟಿಗೆ ನಿಜಕ್ಕೂ ಗಣಿಗಾರಿಕೆಯಿಂದ ಅಪಾಯ ಇದೆಯೇ? ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಟ್ರಯಲ್ ಬ್ಲಾಸ್ಟಗೆ ಮುಂದಾಗಿದೆ. ಇದಕ್ಕೆ ವೈಜ್ಞಾನಿಕ ಮತ್ತು ಸಂಶೋಧನಾ ಕೇಂದ್ರವು ಸಾಥ್ ನೀಡುತ್ತಿದೆ. ಜುಲೈ 24ರಂದೇ ಕೆಆರ್​ಎಸ್ ಜಲಾಶಯಕ್ಕೆ ಜಾರ್ಖಂಡ್​ನ ಧನಬಾದ್​​​ನಿಂದ ವಿಶೇಷ ತಂಡವೊಂದು ಆಗಮಿಸಿದ್ದು, ಟ್ರಯಲ್ ಬ್ಲಾಸ್ಟ್‌ ಪ್ರಯೋಗ ಮಾಡಲಿದೆ.

ವರ್ಷಗಳಿಂದಲೂ ಮಂಡ್ಯ ವ್ಯಾಪ್ತಿಯ ಬೇಬಿ ಬೆಟ್ಟ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಆಣೆಕಟ್ಟಿನ ಅಸ್ತಿತ್ವಕ್ಕೆ ತೊಂದರೆ ಆಗುತ್ತಿದೆ ಎಂಬ ಆರೋಪವಿದೆ. ಅಕ್ರಮ ಚಟುವಟಿಕೆಗಳ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ನಿಂತು ಅಣೆಕಟ್ಟಿನ ರಕ್ಷಣೆಗೆ ನಾನು ಸಿದ್ಧ ಎಂದು ಸಂಸದೆ ಸುಮಲತಾ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+