ಸರ್ವ ಪಕ್ಷ ಸಭೆಗೆ ಬಾರದ ಬಿಎಸ್ ವೈ, ಹೋಗಿದ್ದೆಲ್ಲಿಗೆ?

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಆಗಸ್ಟ್ 27: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ಬೆಂಗಳೂರಿನಲ್ಲಿ ಸರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದ್ದರೆ ಅತ್ತ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕೃಷ್ಣ ರಾಜ ಸಾಗರ ಅಣೆಕಟ್ಟಿಗೆ ಭೇಟಿ ನೀಡಿ ನೀರು ಲಭ್ಯತೆಯ ಪರಿಶೀಲನೆ ನಡೆಸಿದರು.

ರಾಜ್ಯದ ರೈತರಿಗೆ ನೀರು ನೀಡಲಾಗುತ್ತಿಲ್ಲ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಯಡಿಯೂರಪ್ಪ ಶನಿವಾರ ಹೇಳಿದರು.[65 ಟಿಎಂಸಿಯಲ್ಲಿ 50 ಟಿಎಂಸಿ ಕೊಟ್ಟರೆ ಉಳಿಯುವುದೆಷ್ಟು!?]

Must Read : ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ

ಶನಿವಾರ ಬೆಳಗ್ಗೆ ಅಣೆಕಟ್ಟಿಗೆ ಭೇಟಿ ನೀಡಿದ ಬಿಎಸ್ ವೈ, ಸರ್ಕಾರ ರೈತ ವಿರೋಧಿಯಾದ ತೀರ್ಮಾನ ತೆಗೆದುಕೊಳ್ಳಲು ಬಿಡುವುದಿಲ್ಲ. ನೀರಿಗಾಗಿ ರೈತರು ನಡೆಸುವ ಹೋರಾಟಕ್ಕೆ ಸದಾ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದರು.

ಎಂದಿಗೂ ಬದ್ಧ

ಎಂದಿಗೂ ಬದ್ಧ

ರಾಜ್ಯದ ರೈತರ ಹಿತಕ್ಕೆ ಧಕ್ಕೆಯಾಗುವಂತಹ ತೀರ್ಮಾನ ತೆಗೆದುಕೊಳ್ಳಲು ಬಿಡುವುದಿಲ್ಲ. ಬಿಜೆಪಿ ಎಂದಿಗೂ ಹೋರಾಟಕ್ಕೆ ಬದ್ಧವಾಗಿದೆ ಎಂದು ಬಿಎಸ್ ವೈ ಹೇಳಿದರು.

ಸ್ಥಳೀಯ ಮುಖಂಡರಿದ್ದರು

ಸ್ಥಳೀಯ ಮುಖಂಡರಿದ್ದರು

ಕೆಆರ್ ಎಸ್ ಅಣೆಕಟ್ಟಿಗೆ ಭೇಟಿ ನೀಡಿದ ಬಿ ಎಸ್ ಯಡಿಯೂರಪ್ಪ ಜತೆ ಸ್ಥಳೀಯ ಮುಖಂಡರು ಇದ್ದರು.

ಈಗ ಎಷ್ಟು ನೀರಿದೆ

ಈಗ ಎಷ್ಟು ನೀರಿದೆ

124 ಅಡಿಯ ಕೆ ಆರ್ ಎಸ್ ಅಣೆಕಟ್ಟಿನಲ್ಲಿ ಸದ್ಯ 94.20 ಅಡಿ ನೀರಿದೆ. ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳಹರಿವು ಬಂದ್ ಆಗಿದೆ.

 18 ಟಿಎಂಸಿ ನೀರು

18 ಟಿಎಂಸಿ ನೀರು

ಜಲಾಶಯದಲ್ಲಿ ಕೇವಲ 18 ಟಿಎಂಸಿ ನೀರು ಸಂಗ್ರಹಣೆ ಇದೆ. ಕಳೆದ ವರ್ಷ ಇದೇ ವೇಳೆಗೆ 27 ಟಿಎಂಸಿ ನೀರು ಸಂಗ್ರಹಣೆ ಇತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State BJP President B.S. Yeddyurappa visit Krishna Raja Sagara (KRS) Dam, Mandya on August 27, Saturday morning.
Please Wait while comments are loading...