Maddur Assembly Constituency: ಜೆಡಿಎಸ್ ಕೋಟೆಗೆ ಲಗ್ಗೆ ಹಾಕೋರ್ಯಾರು?
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ.
ಮಂಡ್ಯ, ಮಾರ್ಚ್ 13: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ಮದ್ದೂರು ವಿಧಾನಸಭಾ ಕ್ಷೇತ್ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತನ್ನದ ಆದ ಮಹತ್ವವನ್ನು ಹೊಂದಿದೆ. ಇಲ್ಲಿ ಹಾಲಿ ಶಾಸಕರಾಗಿ ಜೆಡಿಎಸ್‌ನ ಡಿಸಿ ತಮ್ಮಣ್ಣ ತಮ್ಮದೇ ಭದ್ರಕೋಟೆಯನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಚುನಾವಣೆಯ ವಿಶ್ಲೇಷಣೆ ಇಲ್ಲಿದೆ.
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಮೊದಲಿನಿಂದಲೂ ಇದು ಜೆಡಿಎಸ್‌ನ ಭದ್ರಕೋಟೆಯಂತೆ ಇದೆ. ಆದರೆ ಇಲ್ಲಿ ದಲಿತರು ಹಾಗೂ ಮುಸ್ಲಿಮರ ಮತಗಳು ನಿರ್ಣಯಕ ಎನಿಸಿವೆ. ಇಲ್ಲಿಂದ ಎಸ್‌ಎಂ ಕೃಷ್ಣ ಒಂದು ಬಾರಿ, ನಟ ಅಂಬರೀಷ್ ಮೂರು ಭಾರಿ, ಮಾದೇಗೌಡ ಅವರು 2 ಬಾರಿ ಗೆದ್ದಿದ್ದರು. ಈಗ ಹಾಲಿ ಶಾಸಕರಾಗಿರುವ ಡಿಸಿ ತಮ್ಮಣ್ಣ ಅವರು 2 ಬಾರಿ ಶಾಸಕರಾಗಿದ್ದು ಈಗ ಮೂರನೇ ಬಾರಿಗೆ ಹ್ಯಾಟ್ರಿಕ್ ಹೊಡೆಯಲು ಸಿದ್ದರಾಗಿದ್ದಾರೆ. ಇಲ್ಲಿ ಈಗ ಜೆಡಿಎಸ್‌ನಿಂದ ಪಂಚರತ್ನ ರಥಯಾತ್ರೆ ಕೂಡ ನಡೆದಿದೆ.
ಎಸ್‌ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿ ವಿದೇಶಾಂಗ ಸಚಿವರಾಗಿದ್ದವರು. ಅಲ್ಲದೆ ಮಾದೇಗೌಡ, ಮಂಚೇಗೌಡ ಮನೆತನದ ರಾಜಕಾರಣದ ನಡುವೆ ಶ್ರೀಸಾಮಾನ್ಯನಾಗಿದ್ದ ಸಿದ್ದರಾಜು ಕೂಡ ಇಲ್ಲಿಂದ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ 2004ರಿಂದ ಇಲ್ಲಿಯವರೆಗೂ ಇಲ್ಲಿ ಜೆಡಿಎಸ್‌ನ ಪ್ರಭಾವ ಹೆಚ್ಚಾಗಿದೆ. 2004 ರಚ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸಿದ್ದರಾಜು ಹಾಗೂ ವಿವೇಕಾನಂದ ಅವರಿಗೆ ಎರಡು ಬಿ ಫಾರಂ ಅನ್ನು ಮಾಜಿ ಪ್ರಧಾನಿಗಳಾಸ ಎಚ್‌ಡಿ ದೇವೇಗೌಡ ಅವರು ನೀಡಿದ್ದರು. ಆಗ ಇಲ್ಲಿ ಡಿಸಿ ತಮ್ಮಣ್ಣ ಗೆಲುವು ಸಾಧಿಸಿದ್ದರು. 2008ರಲ್ಲಿ ಮಧ್ಯಂತರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಸಿದ್ದರಾಜು ಅವರು ಕಾಂಗ್ರೆಸ್‌ನ ಡಿ.ಸಿ.ತಮ್ಮಣ್ಣ, ಬಿಜೆಪಿಯ ಮಧು ಮಾದೇಗೌಡ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆದರೆ 6 ತಿಂಗಳಲ್ಲಿ ಅವರು ಆಕಾಲಿಕ ನಿಧನ ಹೊಂದಿದರು. ಬಳಿಕ ಅವರ ಪತ್ನಿ ಕಲ್ಪನಾ ಅವರು ಉಪಚುನಾವಣೆಯಲ್ಲಿ ಗೆದಿದ್ದರು.

ಕಲ್ಪನಾ ಪಕ್ಷೇತರರಾಗಿ ಅಖಾಡಕ್ಕೆ
2014ರ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ತಮ್ಮ ಬೀಗರಾದ ತಮ್ಮಣ್ಣ ಅವರಿಗೆ ಜೆಡಿಎಸ್‌ನಿಂದ ಟಿಕೆಟ್ ನೀಡಿದರು. ಇದರಿಂದ ಜೆಡಿಎಸ್ ಟಿಕೆಟ್ ಕಳೆದುಕೊಂಡ ಕಲ್ಪನಾ ಅವರಿಗೆ ಕಾಂಗ್ರೆಸ್ ಬಿ ಫಾರಂ ಕೈತಪ್ಪಿತು. ಬೆಂಬಲಿಗರ ಒತ್ತಾಸೆಯಂತೆ ಕಲ್ಪನಾ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಸಂಸದ ಜಿ.ಮಾದೇಗೌಡರ ಪುತ್ರ ಜಿ.ಎಂ.ಮಧುಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತ್ತು.

ತಮ್ಮಣ್ಣ ಮತ್ತೆ ಜೆಡಿಎಸ್ ಅಭ್ಯರ್ಥಿ
ಅಂತಿಮವಾಗಿ ತಮ್ಮಣ್ಣ ಗೆದ್ದರು. ಈಗ 2023ರ ಚುನಾವಣೆಯಲ್ಲಿ ತಮ್ಮಣ್ಣ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಘೊಷಿತರಾಗಿದ್ದಾರೆ. ಕಾಂಗ್ರೆಸ್‌ನಿಂದ ಮಧು ಮಾದೇಗೌಡ, ಕಲ್ಪನಾ ಸಿದ್ದರಾಜು ಹಾಗೂ ಬಿಜೆಪಿಯಿಂದ ಲಕ್ಷ್ಮಣ್‌ಕುಮಾರ್, ಚಿತ್ರನಟಿ ಪ್ರೇಮಾ ಯುವರಾಜ್, ವಕೀಲ ಕೆ.ಎಂ.ರಮೇಶ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಹೆಸರು ಬಿಜೆಪಿಯಿಂದ ಕೇಳಿ ಬರುತ್ತಿದೆ.

2013ರಿಂದ ಜೆಡಿಎಸ್‌ನಿಂದ ಡಿ.ಸಿ.ತಮ್ಮಣ್ಣ ಗೆಲುವು
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ ಕಾಲನುಕ್ರಮದಲ್ಲಿ ನೋಡುವುದಾದರೆ 1952ರಲ್ಲಿ ಕಾಂಗ್ರೆಸ್‌ನಿಂದ ಎಚ್‌ಕೆ ವೀರಣ್ಣಗೌಡ, 1957ರಲ್ಲಿ ಮತ್ತೆ ಎಚ್.ಕೆ.ವೀರಣ್ಣಗೌಡ, 1962ರಲ್ಲಿ ಪಿಎಸ್‌ಪಿಯಿಂದ ಎಸ್.ಎಂ.ಕೃಷ್ಣ, 1967ರಲ್ಲಿ ಕಾಂಗ್ರೆಸ್‌ನಿಂದ ಎಂ.ಮಂಚೇಗೌಡ, 1972ರಲ್ಲಿ ಕಾಂಗ್ರೆಸ್‌ನಿಂದ ಎ.ಡಿ.ಬಿಳೀಗೌಡ, 1978ರಲ್ಲಿ ಜನತಾ ಪಕ್ಷದಿಂದ ಎಂ.ಮಂಚೇಗೌಡ, 1983ರಲ್ಲಿ ಕಾಂಗ್ರೆಸ್‌ನಿಂದ ಎಂ.ಮಂಚೇಗೌಡ, 1984ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಯವಾಣಿ ಮಂಚೇಗೌಡ, 1985ರಲ್ಲಿ ಜನತಾ ಪಕ್ಷದಿಂದ ಬಿ.ಅಪ್ಪಾಜಿಗೌಡ, 1989ರಲ್ಲಿ ಕಾಂಗ್ರೆಸ್‌ನಿಂದ ಎಸ್.ಎಂ.ಕೃಷ್ಣ, 1994ರಲ್ಲಿ ಜನತಾದಳದಿಂದ ಡಾ.ಮಹೇಶ್‌ಚಂದ್, 1999ರಲ್ಲಿ ಎಸ್.ಎಂ.ಕೃಷ್ಣ, 2004ರಲ್ಲಿ ಕಾಂಗ್ರೆಸ್‌ನಿಂದ ಡಿ.ಸಿ.ತಮ್ಮಣ್ಣ, 2008ರಲ್ಲಿ ಜೆಡಿಎಸ್‌ನಿಂದ ಎಂ.ಎಸ್.ಸಿದ್ದರಾಜು, 2008ರ ಉಪ ಚುನಾವಣೆಯಲ್ಲಿ ಕಲ್ಪನಾ ಸಿದ್ದರಾಜು, 2013ರಿಂದ ಜೆಡಿಎಸ್‌ನಿಂದ ಡಿ.ಸಿ.ತಮ್ಮಣ್ಣ ಗೆಲ್ಲುತ್ತಾ ಬಂದಿದ್ದಾರೆ.

1 ಲಕ್ಷ ಒಕ್ಕಲಿಗರು, 40 ಸಾವಿರ ದಲಿತ ಮತದಾರರು
ಕ್ಷೇತ್ರದಲ್ಲಿ 1 ಲಕ್ಷ ಒಕ್ಕಲಿಗರು, 40 ಸಾವಿರ ದಲಿತರು, 6 ಸಾವಿರ ಲಿಂಗಾಯಿತರು, 11 ಸಾವಿರ ಮುಸ್ಲಿಮರು, 6 ಸಾವಿರ ಕುರುಬರು, 4 ಸಾವಿರ ಬ್ರಾಹ್ಮಣರು, ವಿಶ್ವಕರ್ಮ 4 ಸಾವಿರ, ಇತರೆ 31 ಸಾವಿರ, ಒಟ್ಟು 2,02,418 ಮತದಾರರು ಇದ್ದಾರೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್‌ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications