'ದರ್ಶನ್ ಸಾಡೇ ರಸ್ತೆಯಲ್ಲಿ ದನದ ಬಾಡು ತಿನ್ನುತ್ತಿದ್ದ ದಿನಗಳನ್ನು ಮರೆತಂತಿದೆ'

Recommended Video

      LokSabhaElections2019 :ಮಂಡ್ಯ ಚುನಾವಣಾ ಪ್ರಚಾರದ ವಿಷಯಕ್ಕೆ ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ನಾಯಕ

      ಮಂಡ್ಯ, ಮಾರ್ಚ್ 22: ದರ್ಶನ್ ಅವರು ಮೈಸೂರಿನ ಸಾಡೇ ರಸ್ತೆಯಲ್ಲಿ ದನದ ಬಾಡು ತಿನ್ನುತ್ತಿದ್ದ ದಿನಗಳನ್ನು ಮರೆತಂತಿದೆ. ಮೈಸೂರಿನ ಪಡುವಾರಹಳ್ಳಿಯ ಜನರಿಂದ ಅವರಿಗೆ ಎಂತಹ ಗೌರವ ಸಿಕ್ಕಿದೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.

      ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

      ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ಶ್ರೀರಂಗಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಜೇಬಲ್ಲಿ ದುಡ್ಡಿರದಿದ್ದರೂ ಜನರ ಬಳಿ ತಿನ್ನೋಕೆ ಬರುವವನು ದರ್ಶನ್. ಇವರ ಸಿನಿಮಾಗೆ ನಾವು ಹಣ ಕೊಡ್ತೀವಿ ಎಂದು ಏಕವಚನದಲ್ಲೇ ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

      ಅವರು ಎಲ್ಲೆಲ್ಲಿ ಏನೇನು ಕೆಲಸ ಮಾಡಿದ್ದಾರೆ ಯಾರಿಗೆ ಗೊತ್ತು? ಯಶ್ ಮಂಡ್ಯದ ಜನರಿಗೆ ಧಮ್ಕಿ ಹಾಕಿ ಹೋಗಿದ್ದಾರೆ. ಸಿನಿಮಾದಲ್ಲಿ ಮಾತಾಡುವ ಶೈಲಿಯಲ್ಲಿ ತೋಳೇರಿಸಿ ಮಾತಾಡಿದ್ದು ಜಿಲ್ಲೆಯ ಜನರಿಗೆ ಮುಜುಗರ ಉಂಟು ಮಾಡಿದೆ. ಅದಕ್ಕೆ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

      JDS leader Santosh speaking against Darshan and Yash

      ಇದಾದ ಬಳಿಕ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಯಶ್ ಅವರೇ ನೀವು ಎಷ್ಟು ಸಾರಿ ಬೇಕಾದರೂ ತಪ್ಪು ಮಾಡಲು ನಿಮಗೆ ಮಂಡ್ಯನೇ ಬೇಕಾ ? ಯಶ್ ಅವರು ಬುಧವಾರ (ಮಾ.20) ಮಂಡ್ಯದಲ್ಲಿ ಬಳಸಿದ ಭಾಷೆ, ಕೈ ತೋರಿಸಿಕೊಂಡು ಉದ್ಧಟತನದಿಂದ ಮಾತನಾಡಿದ ರೀತಿ ಗೌರವ ತರುವಂತಹದ್ದಲ್ಲ. ಇಷ್ಟಕ್ಕೂ ಯಶ್ ಮಂಡ್ಯದಲ್ಲಿ ಎಷ್ಟು ಸಾರಿ ಬೇಕಾದರೂ ತಪ್ಪು ಮಾಡುತ್ತೇನೆ ಎನ್ನಲು ಮಂಡ್ಯದ ಜನರು ಕುರಿಗಳಲ್ಲ. ಅದಕ್ಕೆ ಅವಕಾಶ ನೀಡುವುದಿಲ್ಲ. ಸಿನಿಮಾ ನಟರು ತಮಗಿರುವ ಗೌರವ ಮತ್ತು ಅಭಿಮಾನಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆಯಿಂದ ಮಾತನಾಡುವುದು ಒಳಿತು ಎಂದು ಸಲಹೆ ನೀಡಿದರು.

      ಕಳೆದ ಎರಡು ದಿನಗಳ ಹಿಂದಷ್ಟೆ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಚಿತ್ರನಟರ ವಿರುದ್ಧ ಗುಡುಗಿ, ನೀವು ನಿಮ್ಮ ಕೆಲಸ ನೋಡಿಕೊಂಡು ಗೌರವದಿಂದ ಮನೆಯಲ್ಲಿರಿ. ಅದನ್ನು ಬಿಟ್ಟು ದೇವೇಗೌಡರು, ಕುಮಾರಸ್ವಾಮಿ ಅವರ ಬಗ್ಗೆ ಟೀಕೆ ಮಾಡಿದರೆ ನಿಮ್ಮ ಆಸ್ತಿ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಧಮ್ಕಿ ಹಾಕಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+