ಜೆಡಿಎಸ್ ಕಾರ್ಯಕರ್ತರ ಸರಣಿ ಕೊಲೆ, ಜ 4ರಂದು ಮಂಡ್ಯ ಬಂದ್ ಗೆ ಕರೆ

Posted By: Ramesh
Subscribe to Oneindia Kannada

ಮಂಡ್ಯ, ಜನವರಿ. 02 : ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗುತ್ತಿವೆ.

ಒಂದು ವಾರದಲ್ಲಿ ನಾಲ್ಕು ಜೆಡಿಎಸ್ ಕಾರ್ಯಕರ್ತರ ಕೊಲೆಗಳೇ ಇದಕ್ಕೆ ಉದಾಹರಣೆ. ಇದರಿಂದ ಮಂಡ್ಯ ಜಿಲ್ಲಾ ಜೆಡಿಎಸ್ ಜನವರಿ 4ರಂದು ಮಂಡ್ಯ ಜಿಲ್ಲೆ ಬಂದ್ ಗೆ ಕರೆಕೊಟ್ಟಿದೆ. [ಒಂದು ವಾರದಲ್ಲಿ ಮಂಡ್ಯದ ನಾಲ್ವರು ಜೆಡಿಎಸ್ ಕಾರ್ಯಕರ್ತರ ಕೊಲೆ!]

ಸಾಲು-ಸಾಲು ಜೆಡಿಎಸ್ ಕಾರ್ಯಕರ್ತರ ಕೊಲೆ ಖಂಡಿಸಿ ಹಾಗೂ ಮಂಡ್ಯ ಡಿವೈಎಸ್ ಪಿ ಜನಾರ್ಧನ ಅವರನ್ನು ಅಮಾನತು ಮಾಡವಂತೆ ಒತ್ತಾಯಿಸಿ ಜೆಡಿಎಸ್ ಸಂಸದ ಸಿ.ಎಸ್ ಪುಟ್ಟರಾಜು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

JD(S) workers murders MP C S Puttaraju has called for Mandya bandh on January 4

ಡಿಸೆಂಬರ್ 24ರಂದು ಬೆಳಗ್ಗೆ ಜೆಡಿಎಸ್ ಕಾರ್ಯಕರ್ತ ಕುಮಾರ್ ಅಲಿಯಾಸ್ ಕೇಬಲ್ ಕುಮಾರ್‍, ಡಿಸೆಂಬರ್ 25 ನಂದೀಶ್ ಮತ್ತು ಮುತ್ತುರಾಜ್, ಡಿಸೆಂಬರ್ 31ರ ರಾತ್ರಿ ಹರೀಶ್ ಅಲಿಯಾಸ್ ಗುಂಡ ಎನ್ನುವರು 4 ಜೆಡಿಎಸ್ ಕಾರ್ಯಕರ್ತರು ಒಂದೇ ವಾರದಲ್ಲಿ ಚಿಕ್ಕ ಪುಟ್ಟ ಗಲಾಟೆಯಲ್ಲಿ ಕೊಲೆಯಾಗಿದ್ದಾರೆ.

ಈ ಕೊಲೆಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡಗಳು ಇದ್ದು. ಅವರನ್ನು ಕೂಡಲೇ ಬಂಧಿಸಬೇಕೆಂದು ಮಂಡ್ಯ ಸಂಸದ ಸಿ.ಎಸ್ ಪುಟ್ಟರಾಜು ನೇತೃತ್ವದಲ್ಲಿ ಮಂಡ್ಯ ಜಿಲ್ಲೆ ಬಂದ್ ಗೆ ಕರೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JD(S) MP C S Puttaraju has called for Mandya bandh on January 4. The party workers are planning to stage a massive protest and block roads condemning the series of murders in Mandya. MP Puttaraju blamed the police for the murder and demanded suspension of DySP Janardhan.
Please Wait while comments are loading...