ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದರೋಡೆಕೋರರಿಂದ 6 ಲಕ್ಷ, 21 ಚಿನ್ನದ ಬಿಸ್ಕೆಟ್, ಎರಡು ಕಾರು ವಶ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಗಸ್ಟ್ 25: ಬೆಂಗಳೂರು-ಮೈಸೂರು ಹೆದ್ದಾರಿ ಪ್ರಯಾಣಿಕರನ್ನೇ ಗುರಿ ಮಾಡಿಕೊಂಡು ರಾತ್ರಿ ವೇಳೆ ವಾಹನಗಳನ್ನು ತಡೆದು, ದರೋಡೆ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ನಗದು ಸಹಿತ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

robbers

ಆ.10ರಂದು ಶ್ರೀರಂಗಪಟ್ಟಣದ ಗೌರಿಪುರ ಗ್ರಾಮದ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರು ಚಾಲಕನೊಬ್ಬನನ್ನು ಬೆದರಿಸಿ, ಕಾರಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಅಪಹರಿಸಿ ದರೋಡೆ ಮಾಡಿದ್ದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕೊನೆಗೂ ದರೋಡೆ ಮಾಡಿದ್ದ ಮಹಾರಾಷ್ಟ್ರ ಮೂಲದ ಸುಧಾಕರ, ವಿಜಯ್, ಸೂರಜ್, ಪ್ರಕಾಶ್ ಎಂಬ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಪರಮೇಶ್ವರರಿಗೆ ಹಾರದ ಬದಲು ರೈತರ ಕಪ್ಪು ಬಾವುಟ!]

ಬಂಧಿತರಿಂದ ದರೋಡೆ ನಡೆಸಿದ್ದ 10 ಲಕ್ಷ ರು. ನಗದಿನಲ್ಲಿ 6.21 ಲಕ್ಷ ರು., 21 ಚಿನ್ನದ ಬಿಸ್ಕೆಟ್ ಹಾಗೂ ಎರಡು ಕಾರು, 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರನ್ನು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಶ್ಲಾಘಿಸಿದ್ದು, ನಗದು ಬಹುಮಾನ ಘೋಷಿಸಿದ್ದಾರೆ.

ಬಾಲಕಿ ಅಪಹರಿಸಿದ್ದ ಇಬ್ಬರ ಬಂಧನ: ಅಪ್ರಾಪ್ತೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಎಸ್.ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲೂಕಿನ ಮೊಗರಳ್ಳಿ ಗ್ರಾಮದ ಅಪ್ರಾಪ್ತೆಯನ್ನು ಯುವಕರಿಬ್ಬರು ಅಪಹರಿಸಿದ್ದಾರೆ ಎಂದು ಆಕೆಯ ತಾಯಿ ಆ.2 ರಂದು ಕೆ.ಆರ್.ಎಸ್. ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.[ಕುಡಿದ ಅಮಲಿನಲ್ಲಿ 8 ವರ್ಷದ ಮಗನನ್ನು ಕೊಂದ ಅಪ್ಪ]

ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಅಪ್ರಾಪ್ತೆ ಬೆಂಗಳೂರಿನಲ್ಲಿರುವುದು ಪತ್ತೆಯಾಗಿತ್ತು. ಅಲ್ಲದೆ ಆಕೆಯೊಂದಿಗಿದ್ದ ಪ್ರಶಾಂತ್, ಮಂಜು ಎಂಬಿಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ, ಅಪ್ರಾಪ್ತೆಯನ್ನು ತಾಯಿಯೊಂದಿಗೆ ಕಳುಹಿಸಲಾಗಿದೆ.

ಪತ್ನಿ, ಮಗಳ ದಹಿಸಲು ಯತ್ನ: ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿ ಮತ್ತು ಮಗಳನ್ನು ಜೀವಂತ ದಹಿಸಲು ಯತ್ನಿಸಿದ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಸಮೀಪದ ಹರಿಹರ ಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಅದೃಷ್ಟವಶಾತ್ ತಾಯಿ ಮತ್ತು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಮಂಡ್ಯದ ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಪ್ರವೇಶ ಶುಲ್ಕ ಏರಿಕೆ]

ಹರಿಹರಪುರ ಗ್ರಾಮದ ನಂಜುಂಡ ಎಂಬಾತನೇ ತನ್ನ ಪತ್ನಿ ರಂಜಿತಾ (25) ಮತ್ತು ಮಗಳು ಇಂಪನಾ (4)ಳನ್ನು ದಹಿಸಲು ಯತ್ನಿಸಿದ ಆರೋಪಿ. ನಂಜುಂಡ ಮತ್ತು ರಂಜಿತಾ 5 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅಂದಿನಿಂದ ಅನೋನ್ಯವಾಗಿದ್ದ ದಂಪತಿ, ನಂತರದ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ರಂಜಿತಾಳಿಗೆ ನಂಜುಂಡ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ.

ಎರಡು ತಿಂಗಳ ಹಿಂದೆ ನಂಜುಂಡ ಮಗುವಿಗೆ ವಿಷವುಣಿಸಿ ಕೊಲೆ ಮಾಡಲು ಯತ್ನಿಸಿದ್ದ. ಬಳಿಕ ಮಗುವಿನ ಕೊಲೆ ಆರೋಪವನ್ನು ಪತ್ನಿ ರಂಜಿತಾ ಮೇಲೆ ಹೊರಿಸಿ, ಆಕೆಯನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದ್ದ. ಆದರೆ ಮಗು ಬದುಕುಳಿದಿತ್ತು.[ಪಟ್ಟಣದ ಗೆಂಡೆ ಹೊಸಹಳ್ಳಿ ಪಕ್ಷಿಧಾಮ ಬೆಂಕಿಗೆ ನಾಶ]

ನಂಜುಂಡನ ದೂರಿನ ಆಧಾರದ ಮೇಲೆ ಪೊಲೀಸರು ರಂಜಿತಾಳನ್ನು 40 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಬಂದ ಆಕೆ, ತನಗೆ ಜೀವ ಬೆದರಿಕೆ ಇರುವುದಾಗಿ ತಿಳಿಸಿ ಪೊಲೀಸರ ನೆರವಿನಿಂದ ಗಂಡನ ಮನೆ ಹೋಗಿದ್ದಳು.

ಆದರೆ, ನಂಜುಂಡ ತನ್ನ ತಾಯಿ ಕೆಂಪಮ್ಮ, ತಮ್ಮ ಶಿವಣ್ಣ ಮತ್ತಿಬ್ಬರು ಕುಟುಂಬ ಸದಸ್ಯರೊಡಗೂಡಿ ಪತ್ನಿ ಮತ್ತು ಮಗಳನ್ನು ಜೀವಂತವಾಗಿ ಸುಡಲು ಬುಧವಾರ ಮುಂದಾದ ಎಂದು ಕಿರುಗಾವಲು ಪೊಲೀಸರು ರಂಜಿತಾಳ ಹೇಳಿಕೆಯನ್ನು ಆಧರಿಸಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದಾರೆ.

English summary
Interstate robbers who were robbing passangers in Mysuru-Bengaluru highway arrested by Srirangapatna police. Seized cash, gold biscuits, two cars and mobile phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X