KRS: ವರುಣನ ಅಬ್ಬರಕ್ಕೆ ಕುಸಿದ ಕೆಆರ್‌ಎಸ್‌ಡ್ಯಾಂನ ಒಳಹರಿವಿನ ತಡೆಗೋಡೆ!
ಮಂಡ್ಯ ಜುಲೈ 24: ರಾಜ್ಯದ ಮಳೆನಾಡು ಪ್ರದೇಶಗಳಲ್ಲಿ ವರುಣನ ಅರ್ಭಟ ಜೋರಾಗಿದೆ. ನಿತ್ಯ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದ್ದರಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಇದರಿಂದಾಗಿ ಮೈಸೂರಿನ ಕೆಆರ್‌ಎಸ್‌ಡ್ಯಾಂನ ಒಳಹರಿವಿನ ತಡೆಗೋಡೆ ಕುಸಿದಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಕಾವೇರಿ ಒಡಲಾದ ಕೆಆರ್‌ಎಸ್ ಡ್ಯಾಂ ಭರ್ತಿಯ ಅಂಚಿಗೆ ತಲುಪಿದೆ. ಹೀಗಾಗಿ ಡ್ಯಾಂನಿಂದ ನಿತ್ಯ ನೀರು ಬಿಡಲಾಗುತ್ತಿದೆ. ನೀರು ಹರಿಯುವ ತೀವ್ರತೆಗೆ ಒಳಹರಿವಿನ ತಡೆಗೋಡೆ ಕುಸಿದಿದೆ. ಇದರಿಂದಾಗಿ ಸುತ್ತಲು ವಾಸಿಸುವ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ಕೆಆರ್‌ಎಸ್ ಡ್ಯಾಂನ ತಡೆಗೋಡೆ ಕುಸಿದಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಕೆಆರ್‌ಎಸ್ ಡ್ಯಾಂನ ನಗುವನ ತೋಟದ ಮುಂದೆ ಇರುವ ಗೇಟ್ ಬಳಿಯ ತಡೆಗೋಡೆಯನ್ನು ತೋಟಕ್ಕೆ ತೊಂದರೆಯಾಗದಿರಲಿ ಎಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿತ್ತು. ಆದರೆ ರಬಸದಿಂದ ನೀರು ಬಿಟ್ಟ ಪರಿಣಾಮ ಗೋಡೆ ಕುಸಿದಿದೆ. ತಡೆಗೋಡೆ ಕುಸಿದಿದ್ದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಲಕ್ಷಾಂತರ ರೂಪಾಯಿ ನೀರಿನಲ್ಲಿ ಹಾಕಿದಂತಾಗಿದೆ.
ದಕ್ಷಿಣ ಕರ್ನಾಟಕದ ಜೀವನಾಡಿ, ಬೆಂಗಳೂರಿನ ದಾಹ ನೀಗಿಸುವ ಕೃಷ್ಣರಾಜಸಾಗರ ಜಲಾಶಯ ತುಂಬುವ ಹಂತಕ್ಕೆ ಬಂದಿದ್ದು, ಕಳೆದ ಸೋಮವಾರವಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕೃಷಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಲಾಶಯಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಕೆಆರ್‌ಎಸ್ ರುದ್ರ ರಮಣೀಯ ದೃಶ್ಯ
ರುದ್ರ ರಮಣೀಯ ಕಾವೇರಿ ಅಬ್ಬರಕ್ಕೆ ಆರ್‌ಎಸ್ ಅಕ್ಷರಶಃ ಜಲಪಾತದಂತೆ (Waterfall) ಕಂಗೊಳಿಸುತ್ತಿದೆ. ಮಂಡ್ಯದ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಬಿಡಲಾಗಿದೆ. ಇದ್ರಿಂದ ಕೆಆರ್‌ಎಸ್ ಡ್ಯಾಂ ಬಳಿ ಜಲಪಾತವೇ ನಿರ್ಮಾಣವಾಗಿದ್ದು, ರೌದ್ರ ರಮಣೀಯವಾದ ದೃಶ್ಯ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ಸೊಬಗನ್ನ ನೋಡುವುದರ ಮಜಾವೇ ಬೇರೆ. ಅಷ್ಟೊಂದು ಆಕರ್ಷಕ ಚಿತ್ತವನ್ನ ಸದ್ಯ ಕೆಆರ್‌ಎಸ್ ಡ್ಯಾಂ ಪಡೆದಿದೆ.
ಡ್ಯಾಂನಿಂದ ರಭಸವಾಗಿ ಹೊರ ಬರುವ ನೀರು ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿದೆ. ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು ಎಂಬಂತಿದ್ದು, ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಂಡು ಫುಲ್ ಎಂಜಾಯ್ ಮಾಡ್ತಿದ್ದಾರೆ. ಇನ್ನು ಡ್ಯಾಂಗೆ ಹರಿದು ಬರ್ತಿರೊ ಒಳಹರಿವು ಕೂಡ ಹೆಚ್ಚಾಗಿದೆ. ಇದ್ರಿಂದ ಡ್ಯಾಂಗೆ ಬಂದು ಅಪ್ಪಳಿಸ್ತಿರೋ ನೀರು ಸಮುದ್ರದ ಅಲೆಗಳ ರೀತಿ ಕಂಡು ಬರ್ತಿದೆ. ಹಾಗಾಗಿ ಕೆಆರ್‌ಎಸ್ ಡ್ಯಾಂ ವೀಕ್ಷಣೆಗೆ ಬರುವವರಿಗೆ ಈಗ ಡಬಲ್ ಮಜಾ ಸಿಕ್ಕಂತಾಗಿದೆ.












Click it and Unblock the Notifications