"ಸುಮಲತಾ ಗೆಲ್ತಾರೆ ಅನ್ನೋದು ಗೊತ್ತಾಗಿ ಕುಮಾರಸ್ವಾಮಿ ಹೆದರಿದ್ದಾರೆ!"
Recommended Video
ಮಂಡ್ಯ, ಏಪ್ರಿಲ್ 20: "ಮಂಡ್ಯದಲ್ಲಿ ನಟಿ ಸುಮಲತಾ ಅಂಬರೀಶ್ ಅವರು ಗೆಲ್ತಾರೆ ಎಂಬುದು ಗೊತ್ತಾಗಿ ಎಚ್ ಡಿ ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಭಯವಾಗುತ್ತಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
"ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಉತ್ತಮ ಸ್ಪರ್ಧೆ ನೀಡಿದ್ದಾರೆ. ಕಳೆದ ಒಂದು ವಾರದಿಂದಲೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಡ್ಯದಲ್ಲೇ ಬೀಡುಬಿಟ್ಟಿದ್ದರು. ಆದರೆ ಈಗ ಸುಮಲತಾ ಅವರೇ ಗೆಲ್ಲಬಹುದು ಎನ್ನಿಸಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಏನು ಮಾತನಾಡಬೇಕು ಎಂಬುದೂ ಗೊತ್ತಾಗುತ್ತಿಲ್ಲ" ಎಂದು ಯಡಿಯೂರಪ್ಪ ಲೇವಡಿ ಮಾಡಿದರು.
'ಪುಲ್ವಾಮಾದಲ್ಲಿ ದಾಳಿ ನಡೆಯುತ್ತದೆಂದು ಎರಡು ತಿಂಗಳ ಹಿಂದೇ ಗೊತ್ತಿತ್ತು' ಎಂಬ ಅಸಂಬದ್ಧ ಹೇಳಿಕೆಯನ್ನು ಕುಮಾರಸ್ವಾಮಿ ಕೊಟ್ಟಿದ್ದಾರೆ. ಅವರಿಗೆ ಅಷ್ಟೆಲ್ಲ ದಿವ್ಯದೃಷ್ಟಿ ಇದ್ದಿದ್ದರೆ, ಈ ವಿಷಯವನ್ನು ಮೊದಲೇ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರೆ 40 ಸೈನಿಕರ ಪ್ರಾಣ ಉಳಿಯುತ್ತಿತ್ತು ಎಂದು ಯಡಿಯೂರಪ್ಪ ಟಾಂಗ್ ನೀಡಿದರು.

ನನ್ನ ವಿರುದ್ಧ ಡೈರಿ ಷಡ್ಯಂತ್ರ
ನನ್ನ ವಿರುದ್ಧ ಡೈರಿಯ ಅಸ್ತ್ರ ಪ್ರಯೋಗ ಮಾಡಲಾಯ್ತು. ಆದರೆ ಆ ಡೈರಿಯಲ್ಲಿರುವುದು ನನ್ನ ಕೈಬರಹವಲ್ಲ ಎಂಬುದು ಈಗಾಗಲೇ ದೃಢವಾಗಿದೆ- ಬಿ ಎಸ್ ಯಡಿಯೂರಪ್ಪ

ಧರ್ಮ ಒಡೆಯುವಲ್ಲಿ ಸೋನಿಯಾ ಪಿತೂರಿ?
"ಸೋನಿಯಾ ಗಾಂಧಿ ಅವರಿಗೆ ಎಂಬಿ ಪಾಟೀಲ್ ಅವರು ಬರೆದ ಪತ್ರದ ಬಗ್ಗೆ ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ್ದೆ. ಲಿಂಗಾಯತ ಧರ್ಮವನ್ನು ಒಡೆಯುವುದಕ್ಕಾಗಿ ಸೋನಿಯಾ ಗಾಂಧಿ ಅವರು ಪಿತೂರಿ ನಡೆಸಿದ್ದು ತಿಳಿದು ತೀವ್ರ ಆಘಾತವಾಯಿತು!"- ಬಿ ಎಸ್ ಯಡಿಯೂರಪ್ಪ

ಸೋನಿಯಾ ಗಾಂಧಿ ಈ ಮಟ್ಟಕ್ಕೆ ಇಳಿಯಬಾರದಿತ್ತು!
ನಾವೆಲ್ಲರೂ ನೆಹರೂ-ಗಾಂಧಿ ಕುಟಯಂಬದ ಬಗ್ಗೆ ಗೌರವ ಹೊಂದಿದ್ದೇವೆ. ಆದರೆ ಸೋನಿಯಾ ಗಾಂಧಿ ಅವರು ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ ಈ ಮಟ್ಟಕ್ಕೆ ಇಳಿಯಬಾರದಿತ್ತು- ಬಿ ಎಸ್ ಯಡಿಯೂರಪ್ಪ

22 ಕ್ಷೇತ್ರಗಳಲ್ಲಿ ಗೆಲುವು
ಲೋಕಸಭೆ ಚುನಾವನೆಯಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಶಿವಮೊಗ್ಗದಲ್ಲಿ ಹೆಚ್ಚಿನ ಅಂತರದಲ್ಲೇ ಗೆಲುವು ಸಾಧಿಸಲಿದೆ. ನಾವು ವಿಧಾನಸಭೆ ಚುನಾವಣೆಯಲ್ಲೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೆವು. ಲೋಕಸಭೆಯಲ್ಲೂ ಉತ್ತಮ ಪ್ರದರ್ಶನ ತೋರುತ್ತೇವೆ- ಬಿ ಎಸ್ ಯಡಿಯೂರಪ್ಪ












Click it and Unblock the Notifications