ಸಮಸ್ಯೆ ಆಲಿಸದ ಸರ್ಕಾರ: ಕಾವೇರಿ ಹೋರಾಟ ಸ್ಥಗಿತಗೊಳಿಸಲು ಚಿಂತನೆ
ಮಂಡ್ಯ, ಡಿಸೆಂಬರ್ 16: ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರುಹರಿಸುತ್ತಿರುವುದರ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ ನೂರು ದಿನ ಪೂರೈಸಿದೆ. ತಮಿಳುನಾಡಿಗೆ ಹರಿಯುತ್ತಿರುವ ನೀರು ಮಾತ್ರ ನಿರಂತರವಾಗಿ ಹರಿಯುತ್ತಲೇ ಇದೆ. ಹೋರಾಟ ಶತದಿನದವರೆಗೆ ನಡೆದರೂ ಸರ್ಕಾರ ದಿವ್ಯವೌನ ವಹಿಸಿದೆ. ಆಳುವವರ ನಡೆ ಧರಣಿ ನಿರತರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಕಾವೇರಿ ಹೋರಾಟ 56ನೇ ದಿನಕ್ಕೆ ಕಾಲಿಟ್ಟ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯಕ್ಕೆ ಆಗಮಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯವರು ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ರೈತರ ಹಿತ ಕಾಪಾಡುವ ಭರವಸೆ ನೀಡಿದ್ದರು. ಆದರೆ, ಅವರು ಬಂದು ಹೋದ ನಂತರವೂ ನೀರು ನಿರ್ವಹಣಾ ಸಮಿತಿ, ನೀರು ನಿರ್ವಹಣಾ ಪ್ರಾಽಕಾರ ಎರಡು ಬಾರಿ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಹೊರಹಾಕಿದ್ದವು. ಇದು ಹೋರಾಟಗಾರರ ತಾಳ್ಮೆಯನ್ನು ಕೆಣಕುವಂತೆ ಮಾಡಿತ್ತು. ಜೊತೆಗೆ ಸರ್ಕಾರವೂ ನೀರು ಬಿಡುಗಡೆ ಆದೇಶಕ್ಕೆ ಪೂರಕ ನಡೆಯನ್ನು ಅನುಸರಿಸಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡ್ಯಕ್ಕೆ ಭೇಟಿ ನೀಡಿ 44 ದಿನಗಳು ಕಳೆದರೂ ಇದುವರೆಗೂ ಒಮ್ಮೆಯೂ ಕಾವೇರಿ ನದಿ ನೀರಿನ ವಿಚಾರವಾಗಿ ಸಣ್ಣದೊಂದು ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅಽವೇಶನದಲ್ಲಿ ಕಾವೇರಿ ವಿಚಾರದ ಪ್ರಸ್ತಾಪವೇ ಆಗಿಲ್ಲ. ಇನ್ನೆಷ್ಟು ದಿನಗಳ ಕಾಲ ಧರಣಿ, ಉಪವಾಸ, ಹೋರಾಟ ನಡೆಸುವುದು ಎಂಬ ಜಿಜ್ಞಾಸೆ ಹೋರಾಟಗಾರರನ್ನು ತೀವ್ರವಾಗಿ ಕಾಡುತ್ತಿದೆ.
ಮಂಕಾದ ಹೋರಾಟ:
ಕಾವೇರಿ ನದಿ ನೀರಿನ ಹೋರಾಟ ಆರಂಭದ ಒಂದು ತಿಂಗಳು ತೀವ್ರತೆಯಿಂದ ಕೂಡಿತ್ತು. ಕಾವೇರಿ ಚಳವಳಿ ನೆಲದಲ್ಲಿ ನಡೆದ ಮಂಡ್ಯ ಬಂದ್ ಮುಂದೆ ಬೆಂಗಳೂರು ಬಂದ್ ನಂತರ ಕರ್ನಾಟಕ ಬಂದ್‌ಗೂ ಪ್ರೇರಣೆಯಾಗಿತ್ತು. ಆನಂತರದಲ್ಲಿ ಚಳವಳಿ ದಿನೇ ದಿನೇ ತಣ್ಣಗಾಗುತ್ತಾ ಬಂದಿತು. ಚಳವಳಿಯ ಸೂತ್ರ ಹಿಡಿದವರಿಗೆ ಮುಂದೆ ಹೋರಾಟವನ್ನು ಯಾವ ರೀತಿ ಮುಂದುವರೆಸಬೇಕು ಎನ್ನುವುದು ಗೊತ್ತಾಗಲೇ ಇಲ್ಲ. ಜಿಲ್ಲೆಯ ಜನರನ್ನು ಸಂಘಟಿಸಿ ಹೋರಾಟಕ್ಕೆ ಉಗ್ರ ಸ್ವರೂಪ ನೀಡುವ, ಹೊಸದೊಂದು ಆಯಾಮದೊಂದಿಗೆ, ಹೊಸ ದಿಕ್ಕಿನಲ್ಲಿ ಪರಿಣಾಮಕಾರಿಯಾಗಿ ಚಳವಳಿಯನ್ನು ಮುನ್ನಡೆಸುವ ಪ್ರಯತ್ನಕ್ಕೂ ಇಳಿಯಲೇ ಇಲ್ಲ.

ಕೇವಲ ಉಪವಾಸ, ಧರಣಿಗಷ್ಟೇ ಚಳವಳಿಯನ್ನು ಸೀಮಿತಗೊಳಿಸಿದರು. ಒಂದೊಂದು ಸಂಘಟನೆಯವರು ಒಂದೊಂದು ದಿನ ಧರಣಿ ಸ್ಥಳಕ್ಕೆ ಬಂದು ಕುಳಿತು ಹೊರನಡೆದರು. ಹೋರಾಟ ವ್ಯಾಪಕವಾಗಿ ಎಲ್ಲ ತಾಲೂಕುಗಳಿಗೆ ಹರಡದೆ ಒಂದು ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾಯಿತು. ಇದು ಹೋರಾಟದ ತೀವ್ರತೆ ಕ್ಷೀಣಿಸುವುದಕ್ಕೂ ಪ್ರಮುಖ ಕಾರಣವಾಯಿತು.
ಹೋರಾಟಗಾರರಲ್ಲಿ ಭಿನ್ನಮತ:
ಮುಖ್ಯಮಂತ್ರಿಯವರು ಭೇಟಿ ನೀಡಿ ಹೋದ ಬಳಿಕ ಕಾವೇರಿ ಹೋರಾಟವನ್ನು ಮುಂದುವರೆಸುವ ವಿಚಾರದಲ್ಲಿ ಹೋರಾಟಗಾರಲ್ಲೇ ಭಿನ್ನಮತ ಮೂಡಿತ್ತು. ಈ ವಿಚಾರವಾಗಿ ವಾಕ್ಸಮರವೂ ನಡೆದಿತ್ತು. ಧರಣಿ ಸ್ಥಳದಲ್ಲೇ 45 ನಿಮಿಷಗಳ ಕಾಲ ಇದ್ದ ಸಿಎಂ ಸಮ್ಮುಖದಲ್ಲೇ ಹೋರಾಟ ನಿಲ್ಲಿಸುವುದಾಗಿ ಘೋಷಿಸಬೇಕಿತ್ತು. ಇದರಿಂದ ಮುಂದೆ ಸಿಎಂ ಭೇಟಿಗೆ ಅವಕಾಶ ಸಿಗುತ್ತಿತ್ತು.
ಆಗ ರೈತರ ಕಷ್ಟಗಳನ್ನು ಅವರ ಬಳಿ ನಿವೇದಿಸಿಕೊಂಡು ವಿಶೇಷ ಪ್ಯಾಕೇಜ್ ಘೋಷಿಸಿಕೊಳ್ಳಬಹುದಿತ್ತು ಎನ್ನುವುದು ಕೆಲವರ ವಾದವಾದರೆ, ನೀರು ಬಿಡುಗಡೆ ಆದೇಶ ಸಿಎಂ ಬಂದ ದಿನವೇ ಹೊರಬಿದ್ದಿದ್ದು, ಆ ಸಮಯದಲ್ಲಿ ಹೋರಾಟ ಕೈಬಿಟ್ಟಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಹೋರಾಟ ಮುಂದುವರೆಸುವ ನಿರ್ಧಾರ ಮಾಡಿದ್ದೇ ಸರಿ ಎನ್ನುವುದು ಮತ್ತೆ ಕೆಲವರ ವಾದವೂ ಆಗಿತ್ತು.
ಧರಣಿ ಸ್ಥಳದತ್ತ ತಿರುಗಿನೋಡದ ಬಿಜೆಪಿ-ಜೆಡಿಎಸ್:
ಸಿಎಂ ಬಂದು ಹೋದ ನಂತರದಲ್ಲಿ 44 ದಿನಗಳ ಕಾಲ ಚಳವಳಿ ನಡೆದರೂ ಕಾವೇರಿ ಹೋರಾಟದ ಬಗ್ಗೆ ಸರ್ಕಾರ ಕಿವಿಗೊಡುತ್ತಲೇ ಇಲ್ಲ. ಚಳವಳಿ ಆರಂಭಗೊಂಡ ಒಂದೂವರೆ ತಿಂಗಳು ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದವು. ಇದೀಗ ಆ ಪಕ್ಷದ ನಾಯಕರು, ಮುಖಂಡರು ಯಾರೂ ಧರಣಿ ಸ್ಥಳದತ್ತ ತಿರುಗಿಯೂ ನೋಡುತ್ತಿಲ್ಲ. ಹೀಗಾಗಿ ಕಾವೇರಿ ಚಳವಳಿ ಮಸುಕಾಗಿ ಚಳವಳಿ ನೇತೃತ್ವ ವಹಿಸಿರುವವರೂ ನಿತ್ರಾಣರಾಗಿದ್ದಾರೆ.
ಚಳವಳಿ ಮುಂದುವರೆಸುವ ಆಸಕ್ತಿ ಹೋರಾಟಗಾರರಲ್ಲೂ ದಿನೇ ದಿನೇ ಕ್ಷೀಣಿಸುತ್ತಿದೆ. ಯಾವ ಕಾರಣ ಅಥವಾ ಹೋರಾಟಕ್ಕೆ ಯಾವ ಫಲ ಸಿಕ್ಕಿತು ಎಂದು ಜನರಿಗೆ ತಿಳಿಸಿ ಚಳವಳಿ ಸ್ಥಗಿತಗೊಳಿಸುವುದು ಎಂಬ ಚಿಂತೆ ಹೋರಾಟಗಾರರನ್ನೂ ಕಾಡುತ್ತಿದೆ. ನೂರು ದಿನ ಕಳೆದಿರುವ ಕಾವೇರಿ ಚಳವಳಿಯನ್ನು ಎಲ್ಲಿಯವರೆಗೆ ಮುನ್ನಡೆಸಿಕೊಂಡು ಹೋಗುವುದು. ಧರಣಿ, ಪ್ರತಿಭಟನೆ, ಉಪವಾಸ ನಿರಂತರವಾಗಿ ನಡೆದರೂ ತಮಿಳುನಾಡಿಗೆ ಹರಿಯುತ್ತಿರುವ ನೀರೂ ನಿಂತಿಲ್ಲ, ಸರ್ಕಾರದಿಂದ ಪ್ರತಿಕ್ರಿಯೆಯೂ ದೊರಕುತ್ತಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಶಾಸಕರೆಲ್ಲರೂ ಬೆಳಗಾವಿ ಅಧಿವೇಶನದಲ್ಲಿದ್ದಾರೆ. ಅಲ್ಲಿ ಕಾವೇರಿ ವಿಚಾರ ಚರ್ಚೆಗೇ ಬರಲಿಲ್ಲ. ಹೋರಾಟಗಾರರಿಗೆ ನೀಡಿದ್ದ ಭರವಸೆ ಹುಸಿಯಾಗಿದೆ. ಕಾವೇರಿ ವಿಷಯವಾಗಿ ದನಿ ಏರಿಸಬೇಕಿದ್ದ ಬಿಜೆಪಿ-ಜೆಡಿಎಸ್ ವೌನ ವಹಿಸಿವೆ. ಇತ್ತ ಕಾವೇರಿ ಕೂಗು ಕ್ಷೀಣಿಸುತ್ತಾ ಸಾಗಿದೆ. ಹೋರಾಟ ಅಂತ್ಯಗೊಳಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಮುಖಂಡರಲ್ಲಿ ಚರ್ಚೆಗಳು ಆರಂಭಗೊಂಡಿವೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ಹೋರಾಟ ನೂರು ದಿನ ಪೂರೈಸಿದೆ. ಚಳವಳಿ ಸ್ಥಗಿತಗೊಳಿಸುವ ನಿಟ್ಟಿನಲ್ಲೂ ಮುಖಂಡರುಗಳೊಂದಿಗೆ ಚರ್ಚಿಸುತ್ತಿದ್ದೇವೆ. ಸಕಾರಣ ನೀಡಿ ಹೋರಾಟವನ್ನು ಸ್ಥಗಿತಗೊಳಿಸುವ ಅಗತ್ಯವಿದೆ. ಡಿ.19ಕ್ಕೆ ಪ್ರಾಧಿಕಾರದ ಮತ್ತೊಂದು ಸಭೆ ಎಂದು ಹೇಳಲಾಗುತ್ತಿದೆ. ಅದರ ತೀರ್ಪನ್ನು ಆಧರಿಸಿ ಡಿ.23ರ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications