ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಗನಮರಡಿ ಭೀಕರ ಬಸ್ ದುರಂತದಲ್ಲಿ ಪಾರಾಗಿ ಬಂದ ಗಿರೀಶ್ ಹೇಳಿದ್ದೇನು?

By ಮಂಡ್ಯ ಪ್ರತಿನಿಧಿ
|
Google Oneindia Kannada News

Recommended Video

Mandya Bus incident : ಮಂಡ್ಯ ದುರಂತದಲ್ಲಿ ಬದುಕುಳಿದ ಯುವಕ ಹೇಳಿದ್ದು ಹೀಗೆ | Oneindia Kannada

ಮೈಸೂರು, ನವೆಂಬರ್ 24:ಕನಗನಮರಡಿ ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಅದೃಷ್ಟವೆಂಬಂತೆ ಬದುಕುಳಿದವರು ಕೇವಲ ಇಬ್ಬರೇ. ಅಪಘಾತದಲ್ಲಿ ಪಾರಾಗಿ ಬಂದ ಈ ಇಬ್ಬರು ಮಾತನಾಡುವ ವೇಳೆ ಅನಿಸಿದ್ದು ಅಪಘಾತಕ್ಕೆ ಮೂಲ ಕಾರಣ ಸ್ಟೇರಿಂಗ್ ಲಾಕ್ ಎಂಬುದು.

ಹೌದು, ಲೋಹಿತ್ ಎಂಬ ಆರನೇ ತರಗತಿ ವಿದ್ಯಾರ್ಥಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾನೆ. ಚಾಲಕನ ಸ್ಟೇರಿಂಗ್ ಲಾಕ್ ಆದ ಕಾರಣ ಬಸ್ ನೇರವಾಗಿ ವಿಸಿ ನಾಲೆಯಲ್ಲಿ ಬಿದ್ದಿತೆಂದು ಹೇಳಲಾಗುತ್ತಿದೆ. ಅಂದಹಾಗೆ ಈ ಘೋರ ದುರಂತದಲ್ಲಿ ಸಾವನ್ನು ಗೆದ್ದು ಬಂದ ಗಿರೀಶ್ ಹೇಳಿದ್ದಿಷ್ಟು...

"ನಾನು ಬಸ್ ಹಿಂಭಾಗ ಕುಳಿತಿದ್ದೆ. ಆಗ ಏಕಾಏಕಿ ಬಸ್ ನಾಲೆಯೊಳಗೆ ಬೀಳಲಾರಂಭಿಸಿತು. ಬಸ್ ನಾಲೆಗೆ ಉರುಳಿದ ನಂತರ ಒಳಗೆ ನೀರು ನುಗ್ಗಲು ಶುರುವಾಯ್ತು. ಬಸ್ ಉರುಳುತ್ತಿರುವಾಗಲೇ ಕಿಟಕಿ ಗಾಜು ಒಡೆದೆ. ನಂತರ ಹೊರಬಂದು ಈಜಿ ದಡ ಸೇರಿದೆ.

ಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

ಆ ವೇಳೆಯೇ ಲೋಹಿತ್ ಮೇಲಕ್ಕೆ ಬಂದ. ಆದ್ದರಿಂದ ಅವನನ್ನು ರಕ್ಷಣೆ ಮಾಡಿದೆ. ಆದರೆ ನನ್ನನ್ನು ಆಂಜನೇಯನೇ ರಕ್ಷಣೆ ಮಾಡಿದ. ನಮ್ಮ ಕೂಗಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಜನ ಓಡಿ ಬಂದರು. ನಾನು ಬಸ್ ನಿಂದ ಹೊರಬರುತ್ತಿದಂತೆ ಬಾಲಕನ್ನು ಮಾತ್ರ ಈಜಿ ರಕ್ಷಣೆ ಮಾಡಲು ಸಾಧ್ಯವಾಯಿತು". ಮುಂದೆ ಓದಿ...

ಎಲ್ಲರನ್ನೂ ಕಳೆದುಕೊಂಡೆ

ಎಲ್ಲರನ್ನೂ ಕಳೆದುಕೊಂಡೆ

ನಮ್ಮ ಊರಿನವರೇ 15 ಜನರಿದ್ದರು. ಆದರೆ ನನ್ನ ಕಣ್ಣ ಮುಂದೆಯೇ ಎಲ್ಲರನ್ನೂ ಕಳೆದುಕೊಂಡೆ. ಬಸ್ ಕಂಡಕ್ಟರ್ ಬದುಕಿದ್ದು, ಕಾಲುವೆಯಿಂದ ಈಜಿ ಬಂದು ಬಳಿಕ ಸ್ಥಳದಿಂದ ಪರಾರಿಯಾದ ಎಂದು ಗಿರೀಶ್ ತಿಳಿಸಿದ್ದಾರೆ.

 ಮಂಡ್ಯ ಭೀಕರ ದುರಂತ LIVE:ಕಣ್ಣೀರು ಸುರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಭೀಕರ ದುರಂತ LIVE:ಕಣ್ಣೀರು ಸುರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು

ಸ್ಟೇರಿಂಗ್ ಲಾಕ್ ಆಗಿದ್ದಕ್ಕೆ ಹೀಗಾಗಿದೆ. ಕೇವಲ ಬಸ್ ಉರುಳಿ 10 ನಿಮಿಷಕ್ಕೆಲ್ಲಾ ಸ್ಥಳೀಯರು ಆಗಮಿಸಿ ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಆಗಲೇ ಬಸ್ ಮೇಲೆ ಒಂದು ಅಡಿ ನೀರು ಇತ್ತು ಎಂದು ಅಪಘಾತದಲ್ಲಿ ಪಾರಾದ ಗಿರೀಶ್ ಮಾಹಿತಿ ನೀಡಿದ್ದಾರೆ.

 Big Breaking: ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಕ್ಕೂ ಹೆಚ್ಚು ಜನ ಸಾವು Big Breaking: ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಕ್ಕೂ ಹೆಚ್ಚು ಜನ ಸಾವು

ಊರಿನಲ್ಲಿ ದುಃಖದ ವಾತಾವರಣ

ಊರಿನಲ್ಲಿ ದುಃಖದ ವಾತಾವರಣ

ಬಸ್ಸಿನಲ್ಲಿ 5 ಜನ ಶಾಲಾ ಮಕ್ಕಳು ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಮ್ಮ ಪಾಂಡವಪುರ ಗ್ರಾಮದವರು 15 ಜನರು ಇದ್ದರು. ಸದ್ಯ ಊರಿನಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿರುವುದು ಬೇಸರ ಸಂಗತಿ ಎಂದರು.

ಮೃತರ ಆಕ್ರಂದನಕ್ಕೆ ಮರುಗಿದ ಸಿಎಂ

ಮೃತರ ಆಕ್ರಂದನಕ್ಕೆ ಮರುಗಿದ ಸಿಎಂ

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಾಗಿ ಮಲಗಿರುವ ಶವಗಳನ್ನ ಕಂಡು ಕಣ್ಣೀರಿಟ್ಟು, ಮೃತರ ಆಕ್ರಂದನಕ್ಕೆ ಮರುಗಿದರು. ನಂತರ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಘೋಷಣೆ ಮಾಡಿದರು. ಇದೀಗ ಮಾಜಿ ಸಿಎಂ‌ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

English summary
Young man Girish and Sixth Standard Student Lohit escaped in a bus accident at Kanaganamaradi. Here Girish talked about this tragedy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X