ಬೇಸಿಗೆ ರಜೆಗಾಗಿ ಅಜ್ಜಿ ಊರಿಗೆ ಬಂದವರ ದಾರುಣ ಅಂತ್ಯ: ನಾಲೆಯಲ್ಲಿ ಆಟವಾಡಲು ಹೋಗಿ ಐವರು ನೀರು ಪಾಲು
ಮಂಡ್ಯ, ಏಪ್ರಿಲ್ 25 : ಜಿಲ್ಲೆಯ ವಿ.ಸಿ. ನಾಲೆಯಲ್ಲಿ ಆಟವಾಡಲು ಹೋದ ಐವರು ನೀರುಪಾಲಾಗಿರುವ ಘಟನೆ ತಾಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ನೀಲಸಂದ್ರ ಬಡಾವಣೆಯ ಅನೀಷಾ ಬೇಗಂ(10), ತಸ್ಮಿಯಾ (22), ಮೆಹತಾಬ್ (10), ಅಶ್ರಕ್ (28), ಅಫೀಕಾ (22) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ
ಮೃತರು ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿನ್ನೆ ಅಜ್ಜಿ ಊರು ಹಲ್ಲೆಗೆರೆಗೆ ಬಂದಿದ್ದರು. ಇಂದು ದೊಡ್ಡಕೊತ್ತಗೆರೆ ಬಳಿಯ ವಿಶ್ವೇಶ್ವರಯ್ಯ ನಾಲೆ ಬಳಿ ತೆರಳಿ ನಾಲೆಯಲ್ಲಿ ಆಡವಾಡುತ್ತಿದ್ದರು. ಈಜುತ್ತಿದ್ದ ವೇಳೆ ಬಾಲಕನೋರ್ವ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲು ಹೋದ ಉಳಿದ ನಾಲ್ವರೂ ಸಹ ನೀರಿನಲ್ಲಿ ಕೊಚ್ಚಿ ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.

ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸತತ ಕಾರ್ಯಾಚರಣೆ ನಡೆಸಿ ಮೂವರ ಶವಗಳನ್ನು ಹೊರತೆಗೆದರು. ಇಬ್ಬರ ಶವಗಳು ನೀರನಲ್ಲಿ ಕೊಚ್ಚಿ ಹೋಗಿರುವ ಕಾರಣ ಶವಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಐವರು ನೀರುಪಾಲಾದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಾಜಕಾಲುವೆಯನ್ನು ಮುಚ್ಚಿ ಒತ್ತುವರಿ: ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಅಧಿಕಾರಿಗಳು
ಮಂಡ್ಯ: ಬೆಳಗೊಳ ಹೋಬಳಿ ಹೊಸ ಆನಂದೂರು ಗ್ರಾಮದ ಸರ್ವೆ ನಂ.986 ರಲ್ಲಿ 5 ಗುಂಟೆ, 10 ಗುಂಟೆ ಜಮೀನು ಖರೀದಿಸಿರುವ ಜಮೀನುದಾರರು ಆ ಜಮೀನಿನ ಜೊತೆ ರಾಜಕಾಲುವೆಗೆ ಸಾವಿರಾರು ಲಾರಿ ಮಣ್ಣು ತುಂಬಿ ಕಾಲುವೆಯನ್ನೇ ಮುಚ್ಚಿ ತಂತಿ ಬೇಲಿ ಹಾಕಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥ ರಘು.ಹೆಚ್.ಎಸ್. ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು .ಇದರ ಬಗ್ಗೆ ನಾನು ಕಳೆದ ಫೆ.13ರಂದು ಕೆ.ಆರ್.ಎಸ್ ಪೋಲಿಸ್ ಠಾಣೆಗೆ ಹಾಗೂ ಫೆ.23 ರಂದು ನಾನು ಬೆಳಗೊಳ ಗ್ರಾಮಪಂಚಾಯಿತಿ ಪಿಡಿಓರವರಿಗೆ, ಉಪ ತಹಶೀಲ್ದಾರ್‌ರ ಬೆಳಗೊಳ (ನಾಡ ಕಚೇರಿ) ತಹಶೀಲ್ದಾರ್ ಶ್ರೀರಂಗಪಟ್ಟಣ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕಾವೇರಿ ನಿರಾವರಿ ನಿಗಮ ಕೆ.ಆರ್.ಸಾಗರ, ಜಿಲ್ಲಾಧಿಕಾರಿಗಳು ಮಂಡ್ಯ ಇವರಿಗೆಲ್ಲ ಇದರ ಬಗ್ಗೆ ದೂರು ಕೊಟ್ಟಿರುತ್ತೇನೆ ಎಂದು ತಿಳಿಸಿದರು.
ದೂರು ನೀಡಿ ತಿಂಗಳುಗಳೇ ಕಳೆದಿದ್ದರೂ ಯಾವ ಇಲಾಖೆಯವರು ಕೂಡ ಬಂದು ಸ್ಥಳ ಪರೀಶಿಲನೆ ಮಾಡಿ ಕೆಲಸ ಮಾಡುತ್ತಿರುವುದನ್ನು ನಿಲ್ಲಿಸಿರು ವುದಿಲ್ಲ ಹಲವಾರು ಬಾರಿ ತಹಶೀಲ್ದಾರ್‌ರ ಕಚೇರಿಗೆ ಹೋದರು ಕೂಡ ಪ್ರಯೋಜನವಾಗಲಿಲ್ಲ. ಹಾಗಾದರೆ ಇದರ ಬಗ್ಗೆ ಕ್ರಮ ಯಾರು ತೆಗೆದುಕೊಳ್ಳುತ್ತಾರೆ ಯಾವ ಇಲಾಖೆಯು ಕೂಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ ಮತ್ತು ಹಿಂಬರಹ ಕೂಡ ಕೊಟ್ಟಿರುತ್ತಾರೆ ಹಾಗಾದರೆ ನಾವು ಯಾರ ಬಳಿ ಹೇಳುವುದು ಎಂದು ತಮ್ಮ ಅಳಲು ತೋಡಿಕೊಂಡರು.
ಈ ನಾಲೆ ಮುಚ್ಚುವುದರಿಂದ ಮಳೆಯಿಂದ ನಮ್ಮ ಮನೆ ಸೇರಿದಂತೆ ಅಕ್ಕ-ಪಕ್ಕ ಮನೆಗಳಿಗೆ ನೀರು ನುಗ್ಗುತ್ತದೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆಗೆ ಸ್ಥಳ ಪರಿಶೀಲನೆ ಮಾಡಿ ಮತ್ತೆ ರಾಜ ಕಾಲುವೆಯಿಂದ ಮಣ್ಣು ತೆರವುಗೊಳಿಸಿ ಮತ್ತು ತಂತಿ ಬೇಲಿ ತೆರವುಗೊಳಿಸಿ ಅಂತವರ ಮೇಲೆ ಕಾನೂನು ಕ್ರಮ ಆದಷ್ಟು ಬೇಗೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ರೈತ ಸಂಘಗಳು ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.











Click it and Unblock the Notifications