ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೂ ಕೆಆರ್ ಎಸ್ ಇನ್ನೂ ಖಾಲಿ

Posted By:
Subscribe to Oneindia Kannada

ಮೈಸೂರು, ಜೂನ್ 17: ರಾಜ್ಯಕ್ಕೆ ಮಾನ್ಸೂನ್ ಕಾಲಿಟ್ಟಾಗಿನಿಂದ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, ಇತ್ತ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು (ಕೆ ಆರ್ ಎಸ್) ಮಾತ್ರ ನಿರೀಕ್ಷಿತ ಮಟ್ಟದಲ್ಲಿ ತುಂಬುತ್ತಿಲ್ಲ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ, ಕೊಡಗಿನಲ್ಲಿ ಈ ವರ್ಷ ಈವರೆಗೆ ಉತ್ತಮ ಮಳೆಯಾಗಿದೆ. ಆದರೆ, ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಅಲ್ಪ ಮಟ್ಟದಲ್ಲಿ ಏರಿಕೆ ಕಂಡಿದೆಯಷ್ಟೇ ಎಂದು ತಜ್ಞರು ತಿಳಿಸಿದ್ದಾರೆ.

Despite Kodagu gets good rainfall KRS remains low

ಸದ್ಯಕ್ಕೆ ಕೆಆರ್ ಎಸ್ ಜಲಾಶಯದ ಮಟ್ಟ 67.78 ಅಡಿಗಳಷ್ಟಿದೆ. ಇದು ಕಳೆದ ವರ್ಷ ಈ ಸಮಯದಲ್ಲಿ 74.04 ಅಡಿಗಳಷ್ಟಿತ್ತು. ಹಾಗಾಗಿ, ಸುಮಾರು 6.26 ಅಡಿಗಳಷ್ಟು ಕಡಿಮೆ ನೀರು ಈ ಬಾರಿ ಸಂಗ್ರಹವಾಗಿದೆ.

ಇನ್ನು, ಈ ಬಾರಿ ಬೇಸಿಗೆಯಲ್ಲಿ ಡೆಡ್ ಸ್ಟೋರೇಜ್ ಗಿಂತ ಕೆಳಗೆ ಇಳಿದಿದ್ದ ಜಲಾಶಯದ ನೀರಿನ ಪ್ರಮಾಣದಲ್ಲಿ ಈಗ ಸ್ವಲ್ಪ ಏರಿಕೆಯಾಗಿದೆ.

ಶುಕ್ರವಾರದ (ಜೂನ್ 16) ಹೊತ್ತಿಗೆ ಜಲಾಶಯಕ್ಕೆ 1,515 ಕ್ಯೂಸೆಕ್ಸ್ ನೀರು ಹರಿದುಬಂದಿದೆ. ದಿನಕ್ಕೆ 500 ಕ್ಯೂಸೆಕ್ಸ್ ನೀರು ಬರುತ್ತಿದೆ. ಆದರೆ, ಜಲಾಶಯ ಬೇಗನೇ ಭರ್ತಿಯಾಗಬೇಕೆಂದರೆ (124.80 ಅಡಿ) ಇದು ಸಾಲದು ಎಂದು ಹೇಳಲಾಗುತ್ತಿದೆ.

ಆದರೆ, ಇತರ ಕೆಲವಾರು ತಜ್ಞರ ಪ್ರಕಾರ, ಜಲಾಶಯಕ್ಕೆ ನೀರು ಬರಲು ಜುಲೈನಿಂದ ಆಗಸ್ಟ್ ವರೆಗೂ ಸಮಯವಿರುತ್ತದೆ. ಹಾಗಾಗಿ, ಈಗಲೇ ಆತಂಕಗೊಳ್ಳುವ ಅಗತ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Despite a good rainfall over the past week in Kodagu, Cauveri river's origin region, KRS Reservoir has seen no increase in its water level.
Please Wait while comments are loading...