ಮಂಡ್ಯ ಮತದಾರರ ಪಾದಕ್ಕೆ ನಮಿನಿಸಿದ ದರ್ಶನ್
Recommended Video
ಮಂಡ್ಯ, ಮೇ 29: ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿದ ಮಂಡ್ಯದ ಜನರಿಗೆ 'ಥ್ಯಾಂಕ್ಸ್' ಎಂದರೆ ಚಿಕ್ಕಪದವಾಗುತ್ತದೆ, ಗೆಲ್ಲಿಸಿದ ಎಲ್ಲರ ಪಾದಗಳಿಗೆ ನನ್ನ ನಮಸ್ಕಾರಗಳು ಎಂದು ದರ್ಶನ್ ಅವರು ವಂದನೆಗಳು ಅರ್ಪಿಸಿದರು.
ಮಂಡ್ಯದ 'ಸ್ವಾಭಿಮಾನಿ ವಿಜಯೋತ್ಸವ'ದಲ್ಲಿ ಮಾತನಾಡಿದ ದರ್ಶನ್, ಸುಮತಲಾ ಅವರನ್ನು ಗೆಲ್ಲಿಸಿದಕ್ಕೆ ಎಲ್ಲರಿಗೂ ಧನ್ಯವಾದ ಹೇಳಿದ ದರ್ಶನ್, ನಿಮಗೆ ಜೀವನಪರ್ಯಂತೆ ಋಣಿಯಾಗಿರುತ್ತೇವೆ ಎಂದರು.
ಅಂಬರೀಶ್ ಅವರ ಹುಟ್ಟುಹಬ್ಬ ಇಂದು ಆದರೆ ಇಂದು ಅವರಿಗೆ ಶುಭಾಶಯ ಹೇಳುವುದಿಲ್ಲ, ಹಣ ವೋ ಸ್ವಾಭಿಮಾನವೋ ಎಂಬ ಆಯ್ಕೆ ಬಂದಾಗ ಸ್ವಾಭಿಮಾನವನ್ನು ಆಯ್ಕೆ ಮಾಡಿದ ನಿಮ್ಮ ಹುಟ್ಟುಹಬ್ಬ ಇಂದು ಎಂದು ಮಂಡ್ಯದ ಜನರಿಗೆ ಶುಭಾಶಯಗಳನ್ನು ದರ್ಶನ್ ಹೇಳಿದರು.

ದೊಡ್ಡ ಪಕ್ಷಗಳನ್ನು, ದೊಡ್ಡ ವ್ಯಕ್ತಿಗಳನ್ನು ಎದುರುಹಾಕಿಕೊಂಡು ನಾವು, ನಿವೆಲ್ಲಾ ಚುನಾವಣೆ ನಡೆಸಿದ್ದೇವೆ. ಆದರೆ ಆಗೆಲ್ಲಾ ಏನೇನಾಯಿತೊ ಎಲ್ಲವನ್ನೂ ಮರೆತುಬಿಡೋಣ, ಜಗಳ ನಮಗೆ ಬೇಡಾ ಎಂದು ಎಲ್ಲರೂ ಒಟ್ಟಾಗಿ ಇರೋಣ ಎಂದು ದರ್ಶನ ಹೇಳಿದರು.
ಜನರನ್ನು ರಾಜಕೀಯವಾಗಿ ಶಿಕ್ಷಿತಗೊಳಿಸುವ ಅವಶ್ಯಕತೆಯೂ ಇದೆ ಎಂದ ದರ್ಶನ್, ಸಂಸದರ ಕಾರ್ಯವ್ಯಾಪ್ತಿಗೆ ಯಾವ ಕೆಲಸಗಳು ಬರುತ್ತವೆ, ಶಾಸಕರ ಕಾರ್ಯವ್ಯಾಪ್ತಿಗೆ ಯಾವ ಕಾರ್ಯ ಬರುತ್ತದೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಯಾವ ಕಾರ್ಯ ಬರುತ್ತವೆ ಎಂದು ಜನರಿಗೆ ತಿಳಿಹೇಳಬೇಕು ಎಂದು ಅವರು ಹೇಳಿದರು.
ಎಲ್ಲ ಕಲಾವಿದರಿಗೂ ಪ್ರೋತ್ಸಾಹವನ್ನು ನೀವು ಕೊಟ್ಟಿದ್ದೀರಾ. ಹಾಗೆಯೇ ನನ್ನ ತಮ್ಮ ಅಮರ್ ನ ಸಿನಿಮಾ ಬರುತ್ತಿದೆ, ಅದನ್ನೂ ಪ್ರೋತ್ಸಾಹಿಸಿ ಬೆಂಬಲಿಸಿ, ಅವರ ತಂದೆಗಿಂತಲೂ ಚೆನ್ನಾಗಿ ಗೆಲ್ಲಿಸಿ ಎಂದು ಮನವಿ ಮಾಡಿದರು.












Click it and Unblock the Notifications