ಮಂಡ್ಯದಲ್ಲಿ ಕಾಂಗ್ರೆಸ್ ನಮಗೆ ಬೆಂಬಲಿಸುತ್ತಿಲ್ಲ: ಜಿ.ಟಿ.ದೇವೇಗೌಡ ಆರೋಪ

ಮಂಡ್ಯ, ಏಪ್ರಿಲ್ 02: ಮಂಡ್ಯದಲ್ಲಿ ಕಾಂಗ್ರೆಸ್‌ ಪಕ್ಷ ನಮಗೆ (ಜೆಡಿಎಸ್‌) ಬೆಂಬಲ ನೀಡುತ್ತಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ಸುದ್ದಿಗಾರರೊಂದಿಗೆ ತಮ್ಮ ಅಸಮಾಧಾನವನ್ನು ಜಿ.ಟಿ.ದೇವೇಗೌಡ ಅವರು ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕಣಕ್ಕೆ ಇಳಿದಿದ್ದ ಕಾಂಗ್ರೆಸ್‌ನ ಎಂಟೂ ಅಭ್ಯರ್ಥಿಗಳು ಸುಮಲತಾ ಅವರ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ, ಕ್ಷೇತ್ರದಲ್ಲಿ ಎಲ್ಲವೂ ಕೈಮೀರಿ ಹೋಗಿದೆ ಎಂದು ಅವರು ಹೇಳಿದ್ದಾರೆ.

Congress not supporting JDS in Mandya: GT Deve Gowda

ಮಂಡ್ಯ ಸೇರಿದಂತೆ ರಾಜ್ಯದ ಎಲ್ಲ ಕಡೆ ನಾವು (ಜೆಡಿಎಸ್) ಕಾಂಗ್ರೆಸ್‌ ಜೊತೆ-ಜೊತೆಗೆ ಹೋಗುತ್ತಿದ್ದೇವೆ, ಆದರೆ ಮಂಡ್ಯದಲ್ಲಿ ಕಾಂಗ್ರೆಸ್‌ನವರು ಬಹಿರಂಗವಾಗಿಯೇ ಸುಮಲತಾ ಅವರ ಪರ ನಿಂತಿದ್ದಾರೆ, ಕುಮಾರಸ್ವಾಮಿ ಅವರನ್ನು ದೂರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಚೆಲುವರಾಯಸ್ವಾಮಿ ಬಳಿ ನಾನು ಮಾತನಾಡಿದೆ, 'ಈಗ ಕೈಮೀರಿ ಹೋಗಿದೆ, ಈಗ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರಿನಲ್ಲಿ ಜೆಡಿಎಸ್ ನಾಯಕರು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗದೇ ಇರುವ ಬಗ್ಗೆ ಮಾತನಾಡಿದ ಅವರು, ಪ್ರಚಾರದ ಬ್ಯಾನರ್‌, ಫ್ಲೆಕ್ಸ್‌ಗಳಲ್ಲಿ ಜೆಡಿಎಸ್ ಮುಖಂಡರ ಚಿತ್ರಗಳಿಲ್ಲವೆಂದು ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು, ಈಗ ಜೆಡಿಎಸ್-ಕಾಂಗ್ರೆಸ್ ನಾಯಕರು ಮಾತನಾಡಿದ್ದೇವೆ ಒಟ್ಟಿಗೆ ಪ್ರಚಾರ ಮಾಡಲಿದ್ದೇವೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+