ಸಿದ್ದರಾಮಯ್ಯ ಮತ್ತೆ ಸಿಎಂ ಗಾದಿಗೆ: ಚಲುವರಾಯಸ್ವಾಮಿ ಬ್ಯಾಟಿಂಗ್
Recommended Video
ಮಂಡ್ಯ, ಮೇ 9: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುವವರ ಸಾಲಿಗೆ ಕಾಂಗ್ರೆಸ್ ಮುಖಂಡ ಎನ್. ಚಲುವರಾಯಸ್ವಾಮಿ ಸೇರ್ಪಡೆಯಾಗಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುರಾಯಸ್ವಾಮಿ, ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಬಯಸುತ್ತಿದ್ದಾರೆ ಎಂದರು.
ಮುಂದಿನ ನಾಲ್ಕು ವರ್ಷಕ್ಕಾಗಲಿ, ಎರಡು ವರ್ಷಕ್ಕಾಗಲಿ ಅಥವಾ ಒಂದು ವರ್ಷಕ್ಕಾಗಲಿ ಮುಂದಿನ ಚುನಾವಣೆಉಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರನ್ನು ಬದಲಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಯಾರೂ ಹೇಳಿಲ್ಲ. ಎಚ್‌ಡಿಕೆ ನಡವಳಿಕೆಯಲ್ಲಿ ಸರ್ಕಾರದ ಭವಿಷ್ಯ ಅಡಗಿದೆ. ಮಧ್ಯಂತರ ಚುನಾವಣೆ ಕಾಂಗ್ರೆಸ್ ಪ್ರಯತ್ನ ಮಾಡುತ್ತಿಲ್ಲ. ಸಹಾಯ ಮಾಡಿದವರ ಮೇಲೆ ಗೌರವ ಇರಬೇಕು. ಸಹಾಯ ಮಾಡಿದವರಿಗೆ ವಿಶ್ವಾಸದಿಂದ ಕೆಲಸ ಮಾಡಬೇಕು. ಹೀಗಾದರೆ ಐದು ವರ್ಷ ಸಿಎಂ ಆಗಬಹುದು ಎಂದರು.

ಎಲ್ಲ ವರ್ಗದವರ ಅಭಿಪ್ರಾಯ
ನಾಯಕನಾಗಬೇಕೆಂದರೆ ಸರ್ಕಾರ ಬೀಳಿಸುವುದಲ್ಲ. ರಾಜ್ಯದ ಎಲ್ಲ ಶೋಷಿತ ವರ್ಗದ ಜನರು ಬಯಸುತ್ತಿದ್ದಾರೆ. ಕೆಲವು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಜನರಿಗೂ ಅರ್ಥವಾಗಿದೆ. ಸಿದ್ದರಾಮಯ್ಯ ಅವರು ಜಾತಿ ವಿರೋಧಿ ಅಲ್ಲ. ಈ ಸರ್ಕಾರ ಬೀಳಿಸಿ ಆಗುವುದಲ್ಲ. ಮುಂದಿನ ಚುನಾವಣೆಯ ಬಳಿಕ ಅವರು ಮುಖ್ಯಮಂತ್ರಿ ಅಗಬೇಕೆಂದು ಜನರು ಬಯಸುತ್ತಿದ್ದಾರೆ. ಈಗಿನ ಸನ್ನಿವೇಶದಲ್ಲಿ ಅದು ಅಪ್ರಸ್ತುತ ಎಂದು ನಮ್ಮ ಅಧ್ಯಕ್ಷರು ಹೇಳಿದ್ದಾರೆ.

ಚಲುವರಾಯಸ್ವಾಮಿಗೆ ಹಕ್ಕು ಇಲ್ಲ
ಹೈಕಮಾಂಡ್ ಹೇಳಿದಂತೆ ಸಿದ್ದರಾಮಯ್ಯ ಅವರೂ ಕೇಳಬೇಕು. ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಚಲುಚರಾಯಸ್ವಾಮಿಗೆ ಹಾಗೆ ಹೇಳುವ ಹಕ್ಕಿಲ್ಲ. ದೋಸ್ತಿ ನಿರ್ಧಾರದಂತೆ ಸರ್ಕಾರ ನಡೆಯುತ್ತಿದೆ ಎಂದು ವಿಧಾನಸೌಧದಲ್ಲಿ ಸಚಿವ ಆರ್.ವಿ. ದೇಶಪಾಂಡೆ ಪ್ರತಿಕ್ರಿಯೆ ನೀಡಿದರು.

ಐದು ವರ್ಷ ಕುಮಾರಸ್ವಾಮಿ ಸಿಎಂ
ಎಚ್ ಡಿ ಕುಮಾರಸ್ವಾಮಿ ಅವರು ಮುಂದಿನ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ನಾನು ಹೇಳಿದ ಭವಿಷ್ಯವೆಲ್ಲ ನಿಜವಾಗಿದೆ. ಯೋಗ ಬಂದಾಗ ಯಾರೂ ತಡೆಯಲು ಆಗುವುದಿಲ್ಲ. ನಾನು ಸಚಿವನಾಗಿದ್ದೇ ನನ್ನ ಅದೃಷ್ಟ. ಚಲುವರಾಯಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಹಾಗೆ ಮಾಡಿದರೆ ಪೊಳ್ಳೆದ್ದು ಹೋಗುತ್ತೇನೆ. ನನ್ನ ಗೌರವವನ್ನು ನಾನೇ ಕಳೆದುಕೊಳ್ಳುತ್ತೇನೆ. ಚಲುವರಾಯಸ್ವಾಮಿ ಹೇಳಿಕೆಯಿಂದ ಏನೂ ಆಗುವುದಿಲ್ಲ ಎಂದು ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ರಿಜೆಕ್ಟೆಡ್ ಪೀಸ್
'ಚಲಯವರಾಯಸ್ವಾಮಿ ರಿಜೆಕ್ಟೆಡ್ ಪೀಸ್. ನಾವೇನು ಅಧಿಕಾರಕ್ಕಾಗಿ ಅವರ ಮನೆಗೆ ಹೋಗಿದ್ದೇವೆಯೇ? ಚಲುವರಾಯಸ್ವಾಮಿಗೆ ಈಗ ಯಾವುದೇ ಅಧಿಕಾರ ಇಲ್ಲ. ಅದಕ್ಕೆ ಹೊಟ್ಟೆಕಿಚ್ಚು. ಸರ್ಕಾರ ಸುಭದ್ರವಾಗಿರುತ್ತದೆ' ಎಂದು ಶಾಸಕ ಸುರೇಶ್ ಗೌಡ ಟಾಂಗ್ ನೀಡಿದರು.

ಕುರ್ಚಿ ಖಾಲಿ ಇಲ್ಲವಲ್ಲ
'ನಮ್ಮ ಶಾಸಕರು ಅಭಿಮಾನದಿಂದ ಮತ್ತೆ ಸಿಎಂ ಆಗುವಂತೆ ಅವರ ಅಭಿಪ್ರಾಯ ಹೇಳುತ್ತಾರೆ. ಈಗ ಸಿಎಂ ಕುರ್ಚಿ ಖಾಲಿ ಇಲ್ಲವಲ್ಲ. ಅಲ್ಲಿ ಕುಮಾರಸ್ವಾಮಿ ಇದ್ದಾರೆ. ಕುಮಾರಸ್ವಾಮಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಾವು ಮತ್ತೆ ಸಿಎಂ ಆಗಬೇಕೆಂಬ ಕೂಗಿಗೆ ಪ್ರತಿಕ್ರಿಯೆ ನೀಡಿದ್ದರು.
|
ಪ್ರಶ್ನೆ ಸಮಂಜಸವಲ್ಲ
ನಮ್ಮ ಪಕ್ಷದ ಶಾಸಕರು ಅಭಿಮಾನದಿಂದ ನಾನು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆ ಅಷ್ಟು ಸಮಂಜಸವಲ್ಲ. ಬಿಜೆಪಿಯವರಿಗೆ ಅಧಿಕಾರ ಸಿಕ್ಕಾಗ ಜನಪರ, ಭ್ರಷ್ಟಾಚಾರ ರಹಿತ, ಸುಭದ್ರ ಸರ್ಕಾರ ನೀಡಲಿಲ್ಲ. ಮೂವರು ಮುಖ್ಯಮಂತ್ರಿ ಬದಲಾದರು, ಆರು ಮಂತ್ರಿಗಳು ಜೈಲಿಗೆ ಹೋಗಿದ್ದರು. ಇವರಿಗೆ ಯಾವ ಕಾರಣಕ್ಕೆ ಮತ್ತೆ ಅಧಿಕಾರ ನೀಡಬೇಕು? ಎಂದು ಅವರು ಟ್ವೀಟ್ ಮಾಡಿದ್ದರು.












Click it and Unblock the Notifications