Get Updates
Get notified of breaking news, exclusive insights, and must-see stories!

ಇದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯ ನೆನಪಿನ ಸಮುದಾಯ ಭವನದ ಕಥೆ.!

ಮಂಡ್ಯ, ಆಗಸ್ಟ್‌, 22: ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಗಳು ಘೋಷಿಸುವ ಯೋಜನೆ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತ ಉದಾಹರಣೆಗಳು ಬಹಳಷ್ಟಿದ್ದು, ಈ ರೀತಿಯಾಗಿ ಸಾರ್ವಜನಿಕರ ಹಣ ಪೋಲಾಗುತ್ತಿರುವುದು ಹೊಸತೇನಲ್ಲ. ಇದರ ಬಗ್ಗೆ ಯಾರೂ ಚಕಾರವೆತ್ತದ ಕಾರಣದಿಂದ ಅದರ ಹೊರೆಯನ್ನು ನಾವೇ ಹೋರುವಂತಾಗಿದೆ.

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಹಿಂದಿನ ಸರ್ಕಾರಗಳ ಯೋಜನೆಗಳನ್ನು ಮುಂದುವರೆಸಲು ಹಿಂದೇಟು ಹಾಕುತ್ತವೆ. ಅದರ ಪರಿಣಾಮಗಳನ್ನು ಸಾರ್ವಜನಿಕರಾದ ನಾವೇ ಎದುರಿಸುವಂತಾಗಿದೆ. ಇದಕ್ಕೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ಸಮುದಾಯ ಭವನ ಸಾಕ್ಷಿಯಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ನಿರ್ಮಿಸಲು ಆರಂಭಿಸಿದ ಸಮುದಾಯ ಭವನ ಇದುವರೆಗೆ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು, ಇದಕ್ಕೆ ಮಾಡಿದ ಖರ್ಚು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

community-hall-construction-work-paused

2006ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ವೇಳೆ ಅವರು ಹುಟ್ಟುಹಾಕಿದ ಗ್ರಾಮವಾಸ್ತವ್ಯ ಭಾರೀ ಗಮನಸೆಳೆದಿತ್ತಲ್ಲದೆ, ಜನಪ್ರಿಯವಾಗಿತ್ತು. ಅದರಂತೆಯೇ ಅವತ್ತು ಅವರು ಬಂಡಿಹೊಳೆ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರಲ್ಲದೆ, ಅದರ ಸವಿ ನೆನಪಿಗಾಗಿ ಗ್ರಾಮದಲ್ಲಿ ಸಮುದಾಯಭವನ ನಿರ್ಮಿಸಲು ಯೋಜನೆ ರೂಪಿಸಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗಿತ್ತು.

ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು

ಇದಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡರು. ಮುಂದೆ ಅಧಿಕಾರಕ್ಕೆ ಬಂದ ಸರ್ಕಾರಗಳು ಇದರತ್ತ ಗಮನಹರಿಸಲಿಲ್ಲ. ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಅದರತ್ತ ಯೋಚನೆ ಮಾಡುವ ಹೊತ್ತಿಗೆ ಅಧಿಕಾರ ಕಳೆದುಕೊಂಡರು. ಹೀಗೆ ಒಂದೂವರೆ ದಶಕಗಳೇ ಹೋಗಿವೆ. ಪರಿಣಾಮ ಅವತ್ತು ಗುದ್ದಲಿಪೂಜೆ ಮಾಡಿಸಿ ಆರಂಭಿಸಿದ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಗಿಡಗಂಟಿಗಳು ಬೆಳೆದು, ವಿಷ ಜಂತುಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ.

ಬಂಡಿಹೊಳೆ ಗ್ರಾಮವು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಇಲ್ಲಿ ಸಮುದಾಯ ಭವನ ನಿರ್ಮಿಸಿದರೆ ಗ್ರಾಮದ ಜನಕ್ಕೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆಯಿತ್ತು. ಜನ ಕೂಡ ನಮ್ಮೂರಿಲ್ಲಿ ಸುಮುದಾಯ ಭವನ ನಿರ್ಮಾಣಗೊಳ್ಳುತ್ತದೆ ಎಂದು ಖುಷಿಯಾಗಿದ್ದರು. ಆದರೆ ಇವತ್ತು ಅರ್ಧಕ್ಕೆ ನಿಂತ ಸಮುದಾಯಭವನವನ್ನು ನೋಡಿ ಹಿಡಿಶಾಪ ಹಾಕುತ್ತಿದ್ದಾರೆ.

ಗ್ರಾಮವಾಸ್ತವ್ಯದ ನೆನಪಿಗಾಗಿ ಕಟ್ಟಡ ನಿರ್ಮಾಣ

2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಗ್ರಾಮವಾಸ್ತವ್ಯ ಮಾಡಿದ್ದರು. ಅದರಂತೆ ಬಂಡಿಹೊಳೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಟೆಂಡರ್ ಆಗಿದ್ದ ಕುಂಬಾರ ಸಮುದಾಯಕ್ಕೆ ಸೇರಿದ ಮೊಗಣ್ಣ ಎಂಬುವರು ವಾಸವಿದ್ದ ಜನತಾ ಕಾಲೋನಿಯ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡಿ, ಗ್ರಾಮದ ಜನರ ಕುಂದುಕೊರತೆಗಳನ್ನು ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ್ದರು.

ಇದಾದ ಬಳಿಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಸವಿ ನೆನಪಿಗಾಗಿ ಬಂಡಿಹೊಳೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಬೀರವಳ್ಳಿ-ಕೆ.ಆರ್.ಪೇಟೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ರಸ್ತೆಯ ಪಕ್ಕದಲ್ಲಿಯೇ ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಮುದಾಯಭವನ ನಿರ್ಮಿಸಲು ಕ್ರಮ ಕೈಗೊಂಡು ಗುದ್ದಲಿಪೂಜೆಯೊಂದಿಗೆ ಕಾಮಗಾರಿಯನ್ನು ಆರಂಭಿಸಲಾಗಿತ್ತು.

ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮದ ಅನುದಾನವನ್ನು ಬಳಸಿಕೊಂಡು ನಿರ್ಮಿಸಲು ಉದ್ಧೇಶಿಸಿದ್ದ ಸಮುದಾಯ ಭವನದ ಕಾಮಗಾರಿಯು ನೆಲ ಅಂತಸ್ತಿನ ಕಟ್ಟಡವು ಆರ್.ಸಿ.ಸಿ ಮೇಲ್ಛಾವಣಿ ಹಂತಕ್ಕೆ ಬಂದು ಅಲ್ಲಿಗೆ ಕಾಮಗಾರಿ ನಿಂತು ಹೋಗಿದೆ. ಆ ನಂತರ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಿದರೂ ಈ ಸಮುದಾಯಭವನವನ್ನು ಪೂರ್ಣಗೊಳಿಸಲು ಯಾರು ಕೂಡ ಮುಂದಾಗಲೇ ಇಲ್ಲ. ಜೊತೆಗೆ ಅರ್ಧಕ್ಕೆ ನಿಂತಿರುವ ಸಮುದಾಯಭವದ ಕಾಮಗಾರಿಯನ್ನು ಪೂರ್ಣಗೊಳಿಸಿ ಅದನ್ನು ಸಾರ್ವಜನಿಕರ ಸೇವೆಗೆ ಅರ್ಪಿಸಬೇಕೆಂಬ ಹಿತಾಸಕ್ತಿಯೂ ಸಂಬಂಧಿಸಿದವರಲ್ಲಿ ಇಲ್ಲದಂತಾಗಿದೆ.

ಕಟ್ಟಡ ಕಾಮಗಾರಿ ನಿಂತು ಹೋಗಿ ಹತ್ತಾರು ವರ್ಷಗಳೇ ಕಳೆದು ಹೋಗಿರುವುದರಿಂದ ಕಟ್ಟಡದೊಳಗೆ ಮತ್ತು ಸುತ್ತಮುತ್ತ ಗಿಡಗಂಟಿಗಳು ಆವರಿಸಿವೆ. ಅದರ ಬಳಿಗೆ ಹೋಗಲು ಜನ ಭಯಪಡುವಂತಾಗಿದೆ. ಕೆಲವರು ಇದರತ್ತ ನೋಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈಗಾಗಲೇ ಈ ಕಟ್ಟಡಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಕಟ್ಟಡ ಪೂರ್ಣಗೊಳ್ಳದ ಕಾರಣ ಜನರ ಹಣ ಪೋಲಾಗಿದೆ. ಸದ್ಯ ಅಧಿಕಾರದಲ್ಲಿರುವ ಸರ್ಕಾರ ಇತ್ತ ಗಮನಹರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಣಾಮ ಕಟ್ಟಡ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ದೊರೆಯುವುದು ಮರೀಚಿಕೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+