ಮಂಡ್ಯ: ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಬಲಿ ಪಡೆದ ಕಾರು

ರಸ್ತೆ ಬದಿಯಲ್ಲಿರುವ ತಮ್ಮ ಮನೆಯ ಮುಂಭಾಗದಲ್ಲಿ ಮಗು ಶ್ರೇಯಾ ಆಟವಾಡುತ್ತಿತ್ತು. ಈ ವೇಳೆ ತಮಿಳುನಾಡಿನ ನಿವಾಸಿ ಕಮಲಾ ಕಣ್ಣನ್ ಎಂಬುವರು ಚಲಾಯಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ವೇಗವಾಗಿ ಬಂದು ಮಗುವಿಗೆ ಡಿಕ್ಕಿ ಹೊಡೆದಿದೆ.

ಕೆ.ಆರ್.ಪೇಟೆ, ಮೇ 24: ರಸ್ತೆ ಬದಿಯಲ್ಲಿದ್ದ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಇಲ್ಲಿನ ಹಿರಿಕಳಲೆ ಗ್ರಾಮದಲ್ಲಿ ನಡೆದಿದೆ.

ಹಿರಿಕಳಲೆಯ ರಂಗನತಿಟ್ಟು ಬಡಾವಣೆಯಲ್ಲಿ ವಾಸಿಗಳಾದ ಪೂರ್ಣಿಮಾ ಮಂಜಶೆಟ್ಟಿ ದಂಪತಿ ಪುತ್ರಿ ಶ್ರೇಯಾ(3) ಮೃತಪಟ್ಟ ಮಗುವಾಗಿದೆ.

Child died at a car accident in Mandya

ರಸ್ತೆ ಬದಿಯಲ್ಲಿರುವ ತಮ್ಮ ಮನೆಯ ಮುಂಭಾಗದಲ್ಲಿ ಮಗು ಶ್ರೇಯಾ ಆಟವಾಡುತ್ತಿತ್ತು. ಈ ವೇಳೆ ತಮಿಳುನಾಡಿನ ನಿವಾಸಿ ಕಮಲಾ ಕಣ್ಣನ್ ಎಂಬುವರು ಚಲಾಯಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ವೇಗವಾಗಿ ಬಂದು ಮಗುವಿಗೆ ಡಿಕ್ಕಿ ಹೊಡೆದಿದೆ. [ಮಂಡ್ಯದ ಮಳವಳ್ಳಿಯಲ್ಲಿ ಸಿಡಿಲು ಬಡಿದು ಮನೆ ಜಖಂ, ನಾಲ್ವರಿಗೆ ಗಾಯ]

ಕೂಡಲೇ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ಮಾರ್ಗದ ಮಧ್ಯದಲ್ಲಿಯೇ ಮೃತಪಟ್ಟಿದೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+