ಸ್ಫೋಟಕ ಮಾಹಿತಿ:"2013 ರಲ್ಲಿ ರಮ್ಯಾ ಅವರನ್ನು ಗೆಲ್ಲಿಸಿದ್ದು ಚಲುವರಾಯಸ್ವಾಮಿ!"

Recommended Video

      ಮಂಡ್ಯದಲ್ಲಿ ರಮ್ಯಾ ಅವರನ್ನ ಗೆಲ್ಲಿಸಿದ್ದು ಅಂಬರೀಷ್ ಅಲ್ಲ..!? | Oneindia Kannada

      ಮಂಡ್ಯ, ಮೇ 10: "2013 ರಲ್ಲಿ ರಮ್ಯಾ ಅವರನ್ನು ಗೆಲ್ಲಿಸಿದ್ದು ಆಗ ನಾಗಮಂಗಲದ ಜೆಡಿಎಸ್ ಶಾಸಕರಾಗಿದ್ದ ಚಲುವರಾಯಸ್ವಾಮಿ" ಎಂಬ ಸ್ಫೋಟಕ ಸುದ್ದಿಯನ್ನು ನಾಗಮಂಗಲದ ಹಾಲಿ ಶಾಸಕ ಸುರೇಶ್ ಗೌಡ ಹೊರಹಾಕಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಮಂಡ್ಯದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಚಲುವರಾಯಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸುರೇಶ್ ಗೌಡ ಅವರು, "ಚಲುವರಾಯ ಸ್ವಾಮಿ ಅವರ ಬಗ್ಗೆ ಗೊತ್ತಿಲ್ಲದಿರುವುದು ಏನೂ ಅಲ್ಲ. ಅವರು ಜೆಡಿಎಸ್ ನಲ್ಲಿದ್ದಾಗಲೇ ಮಂಡ್ಯದಲ್ಲಿ 2013 ರ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮ್ಯಾ ಅವರ ಪರ ಕೆಲಸ ಮಾಡಿದ್ದರು. ಜೆಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ಅವರು ಆಗ ಅಚ್ಚರಿಯ ಸೋಲು ಕಾಣುವುದಕ್ಕೂ ಅವರೇ ಕಾರಣ" ಎಂದು ಸುರೇಶ್ ಗೌಡ ಹೇಳಿದರು.

      "ಆದರೆ 2014 ರ ಲೋಕಸಭೆ ಚುನಾವಣೆಯ ಹೊತ್ತಿಗೆ ಚಲುವರಾಯಸ್ವಾಮಿ ಅವರ ಷಡ್ಯಂತ್ರಗಳ ಬಗ್ಗೆ ಅರಿತ ಪುಟ್ಟರಾಜು ಆವರು ಎಚ್ಚರಿಕೆಯ ನಡೆ ಇಟ್ಟು ಗೆಲುವು ಸಾಧಿಸಿದರು. ನಾನು ಆ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿಯೇ ಇದ್ದುದ್ದರಿಂದ ಆಗ ಜೆಡಿಎಸ್ ನಲ್ಲಿದ್ದ ಯಾರೆಲ್ಲ ರಮ್ಯಾ ಗೆಲುವಿಗಾಗಿ ಶ್ರಮಿಸಿದ್ದರು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತು" ಎಂದು ಸುರೇಶ್ ಗೌಡ ಹೇಳಿದರು.

      Cheluvarayaswamy supports Ramya in 2013 by election in Mandya: Suresh Gowda

      ಮೊದಲು ಕಾಂಗ್ರೆಸ್ ನಲ್ಲಿದ್ದ ಸುರೇಶ್ ಗೌಡ ಅವರು ಚಲುವರಾಯಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ ಕಾಂಗ್ರೆಸ್ ಟಿಕೆಟ್ ನಿಂತ ವಂಚಿತರಾಗಿ ಜೆಡಿಎಸ್ ಸೇರಿದ್ದರು. 2018 ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಲುವರಾಯಸ್ವಾಮಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ್ ಗೌಡ ಸೋಲಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+