Bengaluru-Mysuru Expressway: 3 ದಿನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಡಿಸೆಂವರ್ 20 ರಿಂದ 23ರ ವರೆಗೆ 3 ದಿನಗಳ ಕಾಲ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಹಿನ್ನೆಲೆ ಈ ಹೆದ್ದಾರಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಹೊಸ ಸಂಚಾರ ಮಾರ್ಗಗಳನ್ನು ಜಾರಿಗೆ ತರಲಾಗಿದೆ. ಹಾಗಾದರೆ ಏನಲ್ಲ ಬದಲಾವಣೆಗಳನ್ನು ತರಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ನಾಳೆಯಿಂದ ಅಂದರೆ ಡಿಸೆಂಬರ್ 20ರಿಂದ 23ರ ವರೆಗೆ 3 ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಡಿಸೆಂಬರ್ 20ರ ಬೆಳಗ್ಗೆ 5 ಗಂಟೆಯಿಂದ ಡಿಸೆಂವರ್ 23ರ ಬೆಳಗ್ಗೆ 6 ಗಂಟೆವರೆಗೆ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರು ಮತ್ತು ಮಂಡ್ಯಕ್ಕೆ ಬಂದು ಹೋಗುವವರಿಗೆ ಸಮ್ಮೇಳನ ನಡೆಯುವ 3 ದಿನಗಳ ಕಾಲ ಹೆದ್ದಾರಿ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

* ಬೆಂಗಳೂರು, ರಾಮನಗರ, ತುಮಕೂರು, ಮದ್ದೂರು, ಮಳವಳ್ಳಿಯಿಂದ ಎಕ್ಸ್‌ಪ್ರೆಸ್‌ವೇನಲ್ಲಿ ಬರುವವರಿಗೆ ಹೊಸಬೂದನೂರು ಬಳಿ ಎಕ್ಸಿಟ್, ಅಲ್ಲಿಂದ ಎಕ್ಸಿಟ್ ಪಡೆದು ಸರ್ವಿಸ್ ರಸ್ತೆ, ಸಮ್ಮೇಳನದ ಮುಖ್ಯ ದ್ವಾರದ ಮೂಲಕ ಬ್ಯಾಂಕರ್ಸ್ ಕಾಲೋನಿ ರಸ್ತೆ ಮೂಲಕ ಸಮ್ಮೇಳನ ಸ್ಥಳ ತಲುಪುವುದಾಗಿದೆ.
* ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರದಿಂದ ಎಕ್ಸ್‌ಪ್ರೆಸ್ ವೇನಲ್ಲಿ ಬರುವವರಿಗೆ ಶಶಿಕಿರಣ ಕನ್ವೆನ್‌ಷನ್ ಹಾಲ್ ಎದುರಿನಲ್ಲಿ ಎಕ್ಸಿಟ್ ನೀಡಲಾಗಿದೆ. ಅಲ್ಲಿಂದ ಸರ್ವಿಸ್ ರಸ್ತೆ ಮೂಲಕ ಹೊಸಬೂದನೂರು ಅಂಡರ್ ಪಾಸ್ ಮೂಲಕ ಯೂ ಟರ್ನ್ ತೆಗೆದುಕೊಂಡು ಸರ್ವಿಸ್ ರಸ್ತೆ ಮೂಲಕ ಬ್ಯಾಂಕರ್ಸ್ ಕಾಲೋನಿ ಮೂಲಕ ಸಮ್ಮೇಳನ ಸ್ಥಳ ತಲುಪುವುದಾಗಿದೆ.
ಉಚಿತ ಬಸ್ ಸೇವೆ: ಇನ್ನು ಸಾರಿಗೆ (KSRTC) ಬಸ್ ನಿಲ್ದಾಣದಿಂದ ಸಮ್ಮೇಳನಕ್ಕೆ ಉಚಿತ ಬಸ್ ಸೇವೆಯನ್ನು ಕಲ್ಪಿಸಲಾಗಿದೆ. ಸರ್ವಿಸ್ ರಸ್ತೆಗಳಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಲಾಗಿದೆ. ಚಿಕ್ಕಮಂಡ್ಯದಿಂದ ಹನಕೆರೆವರೆಗಿನ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಲಾಗಿದೆ. ಮದ್ದೂರು ಮತ್ತು ಶ್ರೀರಂಗಪಟ್ಟಣ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳು ಎಕ್ಸ್‌ಪ್ರೆಸ್ ವೇನಲ್ಲಿ ಸಂಚಾರ ಮಾಡಬಹುದು. ನಿರ್ಬಂಧಿತ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳಿಗೆ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ಹಾಗೂ ನೋಂದಣಿ ಮಾಡಿಕೊಂಡಿರುವ ಪ್ರತಿನಿಧಿಗಳಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಸತಿ ವ್ಯವಸ್ಥೆ, ಮೂಲಸೌಲಭ್ಯ ಕಲ್ಪಿಸಲು ಉದ್ದೇಶಿರುವುದರಿಂದ ಡಿಸೆಂಬರ್ 20, 21 ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ಕುಮಾರ್ ಆದೇಶ ಹೊರಡಿಸಿದ್ದಾರೆ.
ನಾಡಿನ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಹಾಗೂ ನಾಡು-ನುಡಿಯ ಬಗ್ಗೆ ಅಭಿಯಾನ ಮೂಡಿಸುವ ಕಾರ್ಯಕ್ರಮ ಆಗಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯಾಭಿರುಚಿ ಹೆಚ್ಚಿಸಿಕೊಳ್ಳಬೇಕಿದೆ. ಕನ್ನಡ ನಾಡು, ನುಡಿ ಬಗ್ಗೆ ವಿವಿಧ ಗೋಷ್ಠಿಗಳು ನಡೆಯಲಿದ್ದು, ಜ್ಞಾನಾರ್ಜನೆ ಹೆಚ್ಚಿಸುವ ಉದ್ದೇಶದಿಂದ ಎರಡು ದಿನಗಳ ಕಾಲ ಎಲ್ಲಾ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸದರಿ ರಜೆ ಅವಧಿಯನ್ನು ಮುಂದಿನ ಸರ್ಕಾರಿ ರಜಾ ದಿನಗಳಲ್ಲಿ ಪಾಠ, ಪ್ರವಚನ ನಡೆಸಿ ಸರಿದೂಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ ಎನ್ನು ಮಾಹಿತಿ ಲಭ್ಯವಾಗಿದೆ.












Click it and Unblock the Notifications