• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಯುಪಡೆ ದಾಳಿ : ಕಾಂಗ್ರೆಸ್‌ ನಾಯಕರಿಗೊಂದು ಅಮೂಲ್ಯ ಸಲಹೆ

|

ಮಂಡ್ಯ, ಮಾರ್ಚ್ 04 : ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿ ಫೆ.26ರಂದು ನಡೆಸಿದ್ದ ವಾಯುದಾಳಿಯ ಬಗ್ಗೆ ಹಲವರು ಸಾಕ್ಷಿಗಳನ್ನು ಕೇಳುತ್ತಿದ್ದಾರೆ. ದಾಳಿಯಲ್ಲಿ ಭಯೋತ್ಪಾದಕರ ಶಿಬಿರಗಳನ್ನು ನಾಶ ಮಾಡಲಾಗಿದೆಯೇ? ಎಂಬುದು ಪ್ರಶ್ನೆಯಾಗಿದೆ.

ನರೇಂದ್ರ ಮೋದಿ ವಿಚಾರ್ ಮಂಚ್ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಅವರು ಈ ವಿಚಾರದ ಕುರಿತು ಕಾಂಗ್ರೆಸ್ ನಾಯಕರಿಗೆ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಅವರು ಬಿಡುಗಡೆ ಮಾಡಿದ್ದಾರೆ.

ಬಾಲಕೋಟ್ ದಾಳಿ : ದಿನೇಶ್ ಗುಂಡೂರಾವ್ ಟ್ವೀಟ್ ಭಾರಿ ಪ್ರತಿಕ್ರಿಯೆ

ಸಾಕ್ಷಿ ಕೇಳುವ ಕಾಂಗ್ರೆಸ್ ನಾಯಕರು ಮಾಜಿ ಸಂಸದೆ ರಮ್ಯಾ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚನೆ ಮಾಡಿ ಪಾಕಿಸ್ತಾನಕ್ಕೆ ಕಳಿಸಿ ಎಂದು ಸಲಹೆ ನೀಡಿದ್ದಾರೆ. ಮಹಾ ಶಿವರಾತ್ರಿಯ ದಿನ ನಿಮ್ಮ ಗೋಳು ನಿವಾರಣೆಗಾಗಿ ಆ ಶಿವನನ್ನು ಬೇಡುತ್ತೇನೆ ಎಂದು ಟೀಕಿಸಿದ್ದಾರೆ.

ಬಾಲಾಕೋಟ್ ಟೆರರಿಸ್ಟ್ ಕ್ಯಾಂಪ್ ಬಗ್ಗೆ ಬೆಚ್ಚಿ ಬೀಳಿಸುವ ಸಂಗತಿಗಳು

'ಬಾಲಕೋಟ್ ಪ್ರದೇಶದಲ್ಲಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂಬುದಕ್ಕೆ ರಕ್ಷಣಾ ಇಲಾಖೆ ಸಾಕ್ಷಿಗಳನ್ನು ಒದಗಿಸುತ್ತದೆ ಅಂದುಕೊಂಡಿದ್ದೇನೆ. ನಮ್ಮ ಯೋಧರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದರು.

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಎಂಥಹ ವಿಪರ್ಯಾಸ

ಎಂಥಹ ವಿಪರ್ಯಾಸ

ಕಾಂಗ್ರೆಸ್ ಪಕ್ಷದ ಶಾಶಕರು ಹಾಗೂ ಮಂತ್ರಿಗಳು ರಾಜ್ಯ ಮಟ್ಟದಲ್ಲಿ ಹಾಗು ರಾಷ್ಟ್ರ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಾ ನಮ್ಮ ಹೆಮ್ಮೆಯ ಸೇನೆ ಉಗ್ರರ ವಿರುದ್ಧ ನೆಡೆಸಿರುವ ಕಾರ್ಯಾಚರಣೆಯನ್ನು ಅನುಮಾನದಿಂದ ನೋಡುತ್ತಿದ್ದಾರೆ. ಇದು ಎಂತಹ ವಿಪರ್ಯಾಯ, ನಮ್ಮ ಸೈನಿಕರ ಬದ್ಧತೆ , ದೇಶಭಕ್ತಿಯನ್ನು ಅನುಮಾನದಿಂದ ನೋಡುವ ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಸಿ.ಟಿ.ಮಂಜುನಾಥ್ ಸಲಹೆ ನೀಡಿದ್ದಾರೆ.

ರಮ್ಯಾ ನೇತೃತ್ವದಲ್ಲಿ ಸಮಿತಿ ರಚಿಸಿ

ರಮ್ಯಾ ನೇತೃತ್ವದಲ್ಲಿ ಸಮಿತಿ ರಚಿಸಿ

ಕಾಂಗ್ರೆಸ್ ಪಕ್ಷದವರಿಗೆ ಸಾಕ್ಷಿ ಬೇಕಾದರೆ ದಯಮಾಡಿ ನಿಮ್ಮ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಕುಮಾರಿ ರಮ್ಯಾ ನೇತೃತ್ವದಲ್ಲಿ ಒಂದು ಉನ್ನತ ಮಟ್ಟದ ತನಿಖಾ ತಂಡ ರಚಿಸಿ. ರಮ್ಯಾ ಇನ್ವೆಸ್ಟಿಗೇಷನ್ ಬ್ಯುರೋ (RBI) ಅಲ್ಲಿಗೆ ಕಳಿಸಿ , ನಿಜವಾಗಲೂ ನೀವು ಕೇಳಿದ ಸಾಕ್ಷ್ಯ ಸಿಕ್ಕರೂ ಸಿಗಬಹುದು ಎಂದು ಸಿ.ಟಿ.ಮಂಜುನಾಥ್ ಲೇವಡಿ ಮಾಡಿದ್ದಾರೆ.

ಪಾಕಿಸ್ತಾನವನ್ನು ಹಾಡಿ ಹೊಗಳಿದ್ದರು

ಪಾಕಿಸ್ತಾನವನ್ನು ಹಾಡಿ ಹೊಗಳಿದ್ದರು

ರಮ್ಯಾ ಅವರು ಪಾಕಿಸ್ತಾನ ನರಕವಲ್ಲ, ಸ್ವರ್ಗ ಎಂದು ಹೇಳಿದ್ದರು. ಅಲ್ಲಿಯ ಜನ ತುಂಬಾ ಒಳ್ಳೆಯವರು ಎಂದು ಪಾಕಿಸ್ಥಾನವನ್ನು ಹಾಡಿ ಹೊಗಳಿದ್ದರು. ಆದ್ದರಿಂದ ಪಾಕಿಸ್ತಾನದ ಎಲ್ಲಾ ಮಾಧ್ಯಮಗಳು ಕೂಡ ರಮ್ಯಾ ಅವರನ್ನು ಕೊಂಡಾಡಿದ್ದವು. ಆದ್ದರಿಂದ ಅವರ ನೇತೃತ್ವದಲ್ಲಿ ತಂಡ ರಚಿಸಿ ಎಂದು ಸಿ.ಟಿ.ಮಂಜುನಾಥ್ ಹೇಳಿದ್ದಾರೆ.

ಪಾಕಿಸ್ತಾನದವರು ಮಾಹಿತಿ ಕೊಡ್ತಾರೆ

ಪಾಕಿಸ್ತಾನದವರು ಮಾಹಿತಿ ಕೊಡ್ತಾರೆ

ರಮ್ಯಾ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿ ಕಳುಹಿಸಿದರೆ ಸತ್ತ ಉಗ್ರರು ಎಷ್ಟು?, ಅವರ ಹೆಸರೇನು?, ಉಗ್ರರು ಸ್ವರ್ಗದಲ್ಲಿ 72 ಜನ ಅಪ್ಸರೆಯರ ಜೊತೆಗಿದ್ದಾರೆಯೇ ? ಎಂಬ ಮಾಹಿತಿಯನ್ನು ಪಾಕಿಸ್ತಾನ ನೀಡಬಹುದು ಎಂದು ಸಿ.ಟಿ.ಮಂಜುನಾಥ್ ಲೇವಡಿ ಮಾಡಿದ್ದಾರೆ.

English summary
Prime Minister Narendra Modi Vichara Manch Karnataka Secretary and BJP leader C.T. Manjunath has urged the Congress leaders to set up committee in the leadership of Mandya former MP Ramya to collect proof for the destruction of the Terror Camp in Balakot and death of terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X