ಮಂಡ್ಯ: ವಿಜಯೇಂದ್ರ ಸಿಎಂ ಆಗಲೆಂದು ಕಾಳಿಕಾಂಬ ದೇವಾಲಯದಲ್ಲಿ ಅಶ್ವಮೇಧ ಯಾಗ

ಮಂಡ್ಯ, ಅಕ್ಟೋಬರ್ 27: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ 2023ರ ವಿಧಾನಸಭೆಯ ಮುಂದಾಳತ್ವ ಸಿಗಬೇಕು, ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ನಗರದ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಅಶ್ವಮೇಧ ಯಾಗ ನಡೆಸಿದ್ದಾರೆ.

ಮಂಡ್ಯದ ಕಾಳಿಕಾಂಭ ದೇವಾಸ್ಥಾನದಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿಗಳು ಕುದುರೆಯೊಂದನ್ನು ತಂದು ಅಶ್ವಮೇಧ ಪೂಜೆ ನೆರೆವೇರಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಿವಕುಮಾರ ಆರಾಧ್ಯ ಮಾತನಾಡಿ, ಶ್ರೀ ಕಾಳಿಕಾಂಬ ದೇವಾಲಯದಲ್ಲಿ ವಿಶೇಷವಾಗಿ ಅಶ್ವಮೇಧ ಯಾಗಕ್ಕೆಂದು ಒಂದು ಕುದರೆಯನ್ನು ತರಿಸಿ ಯಾಗವನ್ನು ನಡೆಸಲಾಗಿದೆ ಎಂದರು.

ದ್ವಾಪರ ಕಾಲಯುಗದಲ್ಲಿ ಕುದುರೆಯ ಸಾರಥ್ಯವನ್ನು ಅರ್ಜುನ ವಹಿಸಿದ್ದರು. ಅದೇ ರೀತಿ ಈ ಯಾಗ ನಡೆಸಿ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ನಮ್ಮೆಲ್ಲರ ಹಾಗೂ ಅಭಿಮಾನಿಗಳ ಆಶಯವಾಗಿದೆ. ಇದನ್ನು ಮನಗಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾಗೂ ರಾಜ್ಯದ ನಾಯಕರು ಇದನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.

Ashwamedha yaga was performed by BJP Activists in Mandya for Vijayendra to Become CM

ಹಾಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಲ್ಲಿ ವಿಜಯೇಂದ್ರಗೆ ಸಾರಥ್ಯ ನೀಡಬೇಕು. ವಿಜಯೇಂದ್ರಗೆ ಸಾರಥ್ಯ ನೀಡಿದರೆ ಈ ಅಶ್ವಮೇಧ ಯಾಗವನ್ನು ಯಾರು ತಡೆಲು ಆಗಲ್ಲ.ಚುನಾವಣೆಯೆಂಬ ಅಶ್ವಮೇಧ ಯಾಗದಲ್ಲಿ ವಿಜಯೇಂದ್ರ ಜಯಗಳಿಸುವುದು ನಿಶ್ಚಿತ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರೈತ ಮೋರ್ಚಾದ ನಗರಾಧ್ಯಕ್ಷ ಹೊಸಹಳ್ಳಿ ಶಿವು, ಮುಖಂಡರಾದ ಮಾದರಾಜ ಅರಸು, ಮಹದೇವು, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

ತಹಾಶೀಲ್ದಾರ್‌ ವರ್ಗಾವಣೆ ಮಾಡದಂತೆ ಪ್ರತಿಭಟನೆ

ಮಂಡ್ಯ: ತಹಶೀಲ್ದಾರ್‌ಗೆ ಭೂಕಳ್ಳರ ಕಿರುಕುಳ ಸಂಬಂಧ ಪಟ್ಟಂತೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ಭೂ ಕಳ್ಳರು ಪಿತೂರಿ ನಡೆಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ದಕ್ಷ ಅಧಿಕಾರಿಯಾಗಿರುವ ತಹಾಶೀಲ್ದಾರ್‌ರನ್ನು ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿ ನಗರದ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+