ಮಂಡ್ಯ ರಾಜಕೀಯ : ಅಂಬರೀಶ್ ಬಣಕ್ಕೆ ಗೆಲುವು!

Posted By: Gururaj
Subscribe to Oneindia Kannada

ಮಂಡ್ಯ, ಜನವರಿ 01 : ಮಂಡ್ಯ ಕಾಂಗ್ರೆಸ್ ಬಣ ರಾಜಕೀಯದಲ್ಲಿ ಮಾಜಿ ಸಚಿವ ಅಂಬರೀಶ್‌ ಅವರಿಗೆ ಗೆಲುವು ಸಿಕ್ಕಿದೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸಿ.ಡಿ.ಗಂಗಾಧರ್ ನೇಮಕಗೊಂಡಿದ್ದಾರೆ.

ಎಂ.ಎಸ್.ಆತ್ಮಾನಾಂದ ಅವರು ಸುಮಾರು ಆರು ವರ್ಷಗಳಿಂದ ಮಂಡ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರನ್ನು ಬದಲಾಯಿಸಲು ಅಂಬರೀಶ್ ಹಲವು ಬಾರಿ ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ.

ಸಲ್ಲದ ಗಾಳಿ ಸುದ್ದಿಗಳಿಗೆ ಸೂಜಿ ಚುಚ್ಚಿದ ಅಂಬರೀಶ್

ಅಂಬರೀಶ್ ರಾಜಕೀಯದಿಂದ ದೂರ ಸರಿಯಲಿದ್ದಾರೆ ಎಂಬ ಸಮಯದಲ್ಲಿಯೇ, ಮಂಡ್ಯದಲ್ಲಿ ತಮ್ಮ ಬಣದ ನಾಯಕನನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಹೇಗೆ ಲಾಭವಾಗಲಿದೆ? ಕಾದು ನೋಡಬೇಕು.

Ambareesh wins Mandya district Congress battle

ಎಸ್.ಎಂ.ಕೃಷ್ಣ, ಅಂಬರೀಶ್ ಬಣದ ನಡುವೆ ಮುಸುಕಿನ ಗುದ್ದಾಟವಿತ್ತು. ಇದರ ಪರಿಣಾಮ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೈ ಹಾಕಿರಲಿಲ್ಲ. ಈಗ ಎಸ್‌.ಎಂ.ಕೃಷ್ಣ ಬಿಜೆಪಿ ಸೇರಿದ್ದು, ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದೆ.

ಚುನಾವಣಾ ವರ್ಷ : ಮಂಡ್ಯ, ಹಾಸನ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ

ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ಅವರನ್ನು ಗೆಲ್ಲಿಸಿದ್ದು ಆತ್ಮಾನಂದ ಅವರ ಸಾಧನೆ. ನಂತರ ನಡೆದ 2014ರ ಲೋಕಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚನಾವಣೆಗಳಲ್ಲಿ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ.

ಮಂಡ್ಯ ರಾಜಕೀಯ : ರವೀಂದ್ರ ಶ್ರೀಕಂಠಯ್ಯಗೆ ಆಹ್ವಾನ ನೀಡಿದ ಎಚ್ಡಿಕೆ!

ಆದರೆ, ಆತ್ಮಾನಂದ ಅವರನ್ನು ಬದಲಾವಣೆ ಮಾಡಿರಲಿಲ್ಲ. 2017ರ ಅಕ್ಟೋಬರ್‌ನಲ್ಲಿ ಕೆಪಿಸಿಸಿ 15 ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡಿತ್ತು. ಮಂಡ್ಯದ ಅಧ್ಯಕ್ಷರನ್ನು ಬದಲಾವಣೆ ಮಾಡಿರಲಿಲ್ಲ. ಈಗ ಚುನಾವಣೆ ಸಮೀಪವಾಗುತ್ತಿರುವಾಗ ಅಧ್ಯಕ್ಷರನ್ನು ಬದಲಾಯಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister and Mandya MLA M.H.Ambareesh wins Mandya district Congress battle. CD Gangadhar appointed as Mandya district Congress president.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ