ಮಂಡ್ಯದ ಮಾರುಕಟ್ಟೆಯಲ್ಲಿ ಟ್ರೋಲ್‌ಗೊಳಗಾದ ರಮ್ಯಾ!

By: ಮಂಜು, ಮಂಡ್ಯ
Subscribe to Oneindia Kannada

ಮಂಡ್ಯ, ನವೆಂಬರ್ 19 : ಟ್ವಿಟ್ಟರಲ್ಲಿ ನರೇಂದ್ರ ಮೋದಿಯವರನ್ನು ಟೀಕಿಸಲು ಸದಾ ಏನಾದರೊಂದು ನೆವ ಹುಡುಕುತ್ತಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾದ ಅಪರೂಪದ ಪ್ರಸಂಗ ಮಂಡ್ಯದ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.

ನೋಟು ನಿಷೇಧದಿಂದಾಗಿ ಮಂಡ್ಯದ ತರಕಾರಿ ಮಾರುಕಟ್ಟೆಯಲ್ಲಿ ಹೇಗೆ ವ್ಯಾಪಾರ ನಡೆದಿದೆ, ಯಾರ್ಯಾರಿಗೆ ಎಷ್ಟೆಷ್ಟು ನಷ್ಟವಾಗಿದೆ, ಯಾರ್ಯಾರು ಏನೇನು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ಸಾಕ್ಷಾತ್ ನೋಡಲು ಮಾರುಕಟ್ಟೆಗೆ ತೆರಳಿದ್ದಾರೆ. [ಆ ವಿಡಿಯೋ ಇಲ್ಲಿದೆ]

Actress Ramya trolled at Mandya vegetable market

"ನೋಡಿಲ್ಲಿ ನೋಟು ನಿಷೇಧದಿಂದ ಬಡ ತರಕಾರಿ ಮಾರಾಟಗಾರರು ಎಷ್ಟೊಂದು ನಷ್ಟ ಅನುಭವಿಸುತ್ತಿದ್ದಾರೆ" ಎಂದು ರಮ್ಯಾ ಹೇಳುತ್ತಿದ್ದಂತೆ, "ನಷ್ಟನೂ ಇಲ್ಲ ಎಂಥದೂ ಇಲ್ಲ, ಯಾರಿಗೂ ತೊಂದರೆಯಾಗಿಲ್ಲ ಮೇಡಂ" ಎಂದ ಅವರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತ ರಮ್ಯಾ ಮೇಡಂ ಅವರ ಹೊಟ್ಟೆ ಉರಿಯುವಂತೆ ಮಾಡಿದ್ದಾರೆ.

ಆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ, ಮೋದಿಯವರು ಇನ್ನೂ ನೂರು ವರ್ಷ ಆಡಳಿತ ನಡೆಸಲಿ, ಅವರಿಗೆ ಆಯುರಾರೋಗ್ಯ ಕೊಟ್ಟು ದೇವರು ಕಾಪಾಡಲಿ ಎಂದು ಘೋಷಣೆ ಕೂಗುತ್ತಿದ್ದಂತೆ, ಮೋದಿ ಮೋದಿ ಎಂಬ ಕೂಗು ಮತ್ತಷ್ಟು ಜಾಸ್ತಿಯಾಯಿತು. ರಮ್ಯಾ ಮೇಡಂ ಅವರು, ಎಲ್ಲಾ ಉಲ್ಟಾ ಹೊಡೆದಿದ್ದರಿಂದ ನಸುನಗುತ್ತಲೇ ಅಲ್ಲಿಂದ ಜಾಗ ಖಾಲಿ ಮಾಡಬೇಕಾಯಿತು. [10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು]


ನೋಟು ನಿಷೇಧದಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು, ಕೊಳ್ಳುವವರು ಹೇಗೆ ಚಿಲ್ಲರೆ ತೊಂದರೆ ಅನುಭವಿಸುತ್ತಿದ್ದಾರೆ, ವ್ಯಾಪಾರಿಗಳು ಯಾವ ರೀತಿ ನಷ್ಟ ಅನುಭವಿಸುತ್ತಿದ್ದಾರೆ ಎಂಬ ಬಗ್ಗೆಯೂ ಸರಣಿಯಾಗಿ ವಿಡಿಯೋಗಳನ್ನು ಟ್ವಿಟ್ಟರಲ್ಲಿ ಹರಿಯಬಿಟ್ಟಿದ್ದಾರೆ.

ಆ ವಿಡಿಯೋ ಒಂದರಲ್ಲಿ, ಐನೂರು ರುಪಾಯಿ ಹಿಡಿದುಕೊಂಡು ಚಿಲ್ಲರೆ ಸಿಗದೆ ತೊಳಲಾಗುಡುತ್ತಿದ್ದ ಮಹಿಳೆಯೊಬ್ಬರಿಗೆ ತಾವೇ ಪರ್ಸಿನಿಂದ ನೂರರ ಐದು ನೋಟುಗಳನ್ನು ಕೊಟ್ಟಿದ್ದಲ್ಲದೆ, ಐನೂರು ರುಪಾಯಿಯನ್ನು ನೀವೇ ಇಟ್ಟುಕೊಳ್ಳಿ ಎಂದು ಉದಾರ ಹೃದಯವನ್ನು ತೋರಿಸಿದ್ದಾರೆ. [ನೋಟು ಬದಲಾವಣೆ ನಿರ್ಧಾರ ಯಾವ್ಯಾವ ದೇಶದಲ್ಲಿ ಸೋತಿದೆ?]


ಮತ್ತೊಂದು ವಿಡಿಯೋದಲ್ಲಿ ಮಹಿಳಾ ವ್ಯಾಪಾರಿಯೊಬ್ಬರು, ನೋಟು ನಿಷೇಧದಿಂದಾಗಿ ತಮಗೆ ಇಂತಿಷ್ಟು ನಷ್ಟವಾಗಿದೆ, ಜನರೆಲ್ಲ ಐನೂರು, ಸಾವಿರ ರುಪಾಯಿ ನೋಟು ಹಿಡಿದುಕೊಂಡು ಬರುತ್ತಿದ್ದರಿಂದ ಚಿಲ್ಲರೆ ನೀಡಲಾಗದೆ ವ್ಯಾಪಾರವೇ ನಡೆಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada actress and former MP of Mandya Ramya has been trolled on social media when she went to vegetable market to take a stock of problems faced by people due to note ban by Narendra Modi government. She has also posted few videos on her twitter account.
Please Wait while comments are loading...