ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಂಗಪಟ್ಟಣದಲ್ಲಿ ಹಸಿರು ಧ್ವಜ ಕಿತ್ತೆಸೆದ ಆರೋಪಿ ವಿರುದ್ಧ ಪೊಲೀಸ್ ಕ್ರಮ

|
Google Oneindia Kannada News

ಮಂಡ್ಯ, ಡಿ. 06: ಶ್ರೀರಂಗಪಟ್ಟಣದಲ್ಲಿ ಮನೆಯೊಂದರ ಮೇಲೆ ಹತ್ತಿ ಹಸಿರು ಧ್ವಜ ತೆಗೆದು ಕೇಸರಿ ಹಾರಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೋಬ್ಬ ಆವೇಶದಲ್ಲಿ ಮನೆಯ ಮೇಲೆ ಹತ್ತಿ ಅಲ್ಲಿದ ಹಸಿರು ಧ್ವಜ ಕಿತ್ತೆಸೆದು ಕೇಸರಿ ಧ್ವಜವನ್ನು ಹಾಕುತ್ತಾನೆ. ಈ ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಭಾರೀ ಟೀಕೆ ವ್ಯಕ್ತವಾಗಿತ್ತು.

Hanuman Jayanti : ವಿಜೃಂಭಣೆಯ ಹನುಮಜಯಂತಿ, ಮಸೀದಿಗೆ ನುಗ್ಗಲು ಯತ್ನ, ಪೊಲೀಸರ ತಡೆHanuman Jayanti : ವಿಜೃಂಭಣೆಯ ಹನುಮಜಯಂತಿ, ಮಸೀದಿಗೆ ನುಗ್ಗಲು ಯತ್ನ, ಪೊಲೀಸರ ತಡೆ

ಭಾನುವಾರ ಗಂಜಾಂನ್ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಯಾತ್ರೆಗೆ ಜನರು ಸಹ ತಮ್ಮತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಸ್ವಾಗತ ಕೋರಿದ್ದರು. ಹಾಗೆ ಗಂಜಾಂನ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದ ಹನುಮ ಸಂಕೀರ್ತನಾ ಯಾತ್ರೆ ವೇಳೆ, ಮುಸ್ಲಿಂ ಸಮುದಾಯದವರ ಮನೆ ಮೇಲೆ ಇದ್ದ ಹಸಿರು ಬಣ್ಣದ ಬಾವುಟ ಗಮನಿಸಿದ ಹಿಂದೂ ಕಾರ್ಯಕರ್ತ ತಕ್ಷಣ ಮನೆ ಮೇಲೇರಿ, ಹಸಿರು ಬಾವುಟ ಕಿತ್ತು ಹಾಕಿ ಕೇಸರಿ ಬಾವುಟ ಹಾಕಿ ಕ್ಷಣಾರ್ಧದಲ್ಲಿ ಕೆಳಗೆ ಹಾರಿದ ಘಟನೆ ನಡೆದಿತ್ತು.

Action Against the Person Who Removed Green Flag in Srirangapatna

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದರು "ಶ್ರೀರಂಗಪಟ್ಟಣ ಪ್ರಕರಣದಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ನಾಡಿನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಪ್ರತಿಯೊಬ್ಬರಿಗೂ ಕಾನೂನು ಅನ್ವಯಿಸುತ್ತದೆ" ಎಂದು ಹೇಳಿದ್ದಾರೆ.

ಇನ್ನು, ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯ ಮೇಲೆ ಹಸಿರು ಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಕ್ಕಾಗಿ ಹಿಂದೂ ಜಾಗರಣ ವೇದಿಕೆ ಸದಸ್ಯರ ವಿರುದ್ಧ FIR ದಾಖಲಿಸಲಾಗಿದೆ. ರೆಹಮಾನ್ ಎಂಬುವವರು ಮುಸ್ಲಿಂ ಸಮುದಾಯದ ಇತರ ಸದಸ್ಯರೊಂದಿಗೆ ದೂರು ದಾಖಲಿಸಿದ್ದಾರೆ.

ಇತ್ತ, ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಪಟ್ಟಣದ ಒಂಬತ್ತು ಸ್ಥಳಗಳಲ್ಲಿ ಗೋಡೆಗಳ ಮೇಲೆ 'ಸಿಎಫ್‌ಐ ಸೇರಿಕೊಳ್ಳಿ' ಎಂಬ ಆಕ್ಷೇಪಾರ್ಹ ಬರಹಗಳು ಕಂಡು ಬಂದಿರುವ ಹಿನ್ನೆಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಪೊಲೀಸರು ತಿಳಿಸಿದ್ದಾರೆ.

Action Against the Person Who Removed Green Flag in Srirangapatna

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಿಎಫ್‌ಐ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ದ ವಿದ್ಯಾರ್ಥಿ ವಿಭಾಗವಾಗಿದೆ.

English summary
Police action against the person allegedly who removing a green flag and swapping the flags on top of a house in Srirangapatna. he was a participant in Hanuma Sankeerthana Yatra. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X