ಮಂಡ್ಯ: ತುತ್ತು ನೀಡಬೇಕಾದ ಕೈಯಲ್ಲಿ ವಿಷವುಣಿಸಿದ ಹೆತ್ತತಾಯಿ!
ಹೆತ್ತ ಮಕ್ಕಳಿಗೇ ವಿಷವುಣಿಸಿ, ಪ್ರಜ್ಞೆ ತಪ್ಪಿದ ಮಕ್ಕಳನ್ನು ಮತ್ತೆ ನೇಣಿಗೆ ಹಾಕಿ ಸಾಯಿಸಿದ ತಾಯಿ, ಕೊನೆಗೆ ತಾನೂ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆಗೆ ಸಣ್ಣದೊಡ್ಡಿ ಬೋರೆ ಗ್ರಾಮ ಸಾಕ್ಷಿಯಾಗಿದೆ.
ಮಂಡ್ಯ, ಮೆ 29: ತಾನೇ ಹೆತ್ತ ಮಕ್ಕಳನ್ನು ಸ್ವಂತ ತಾಯಿಯೇ ಸಾಯಿಸಿದ ಘಟನೆ ಮಂಡ್ಯ ಜಿಲ್ಲೆಯ ಸಣ್ಣದೊಡ್ಡಿ ಬೋರೆ ಗ್ರಾಮದಲ್ಲಿ iಇಂದು ನಡೆದಿದೆ.
ಹೆತ್ತ ಮಕ್ಕಳಿಗೇ ವಿಷವುಣಿಸಿ, ಪ್ರಜ್ಞೆ ತಪ್ಪಿದ ಮಕ್ಕಳನ್ನು ಮತ್ತೆ ನೇಣಿಗೆ ಹಾಕಿ ಸಾಯಿಸಿದ ತಾಯಿ, ಕೊನೆಗೆ ತಾನೂ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆಗೆ ಸಣ್ಣದೊಡ್ಡಿ ಬೋರೆ ಗ್ರಾಮ ಸಾಕ್ಷಿಯಾಗಿದೆ.

ಮೃತರನ್ನು ತಾಯಿ ಲೀಲಾವತಿ(33) , ತೇಜು(12), ಯಶ್ವಂತ್ (9) ಎಂದು ಗುರುತಿಸಲಾಗಿದ್ದು ಘಟನೆಗೆ ಸ್ಪಷ್ಟಕಾರಣ ತಿಳಿದುಬಂದಿಲ್ಲ. ಮಂಡ್ಯ ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Click it and Unblock the Notifications