ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ 8 ಲಕ್ಷ ರೂ ಹಾನಿ, ಎಫ್‌ಐಆರ್ ದಾಖಲು

|
Google Oneindia Kannada News

Recommended Video

Lok Sabha Elections 2019 : ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ 8 ಲಕ್ಷ ರೂ ಹಾನಿ, ಎಫ್‌ಐಆರ್ ದಾಖಲು

ಮಂಡ್ಯ, ಮಾರ್ಚ್ 27: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ 8 ಲಕ್ಷ ರೂ ಹಾನಿಯಾಗಿದೆ ಎನ್ನುವ ದೂರು ದಾಖಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೂರು ಪ್ರಕರಣಗಳಲ್ಲೂ ಯಾವುದೇ ವ್ಯಕ್ತಿಯನ್ನು ನಿರ್ದಿಷ್ಟವಾಗಿ ದೂರಿಲ್ಲ. ಪ್ರಚಾರ ಸಭೆಯಿಂದ ಕಾವೇರಿ ವನದಲ್ಲಿ ಹೂ ಕುಂಡಗಳು, ಹೂವಿನ ಗಿಡಗಳು, ಫೌಂಟೇನ್, ವಿದ್ಯುತ್ ಸಂಪರ್ಕಗಳು, ಲಾನ್ ತುಳಿದು ಹಾಳು ಮಾಡಿರುವುದು, ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್ ಕಂಬಗಳನ್ನು ಕೆಡವಿರುವುದರಿಂದ ಸುಮಾರು 8 ಲಕ್ಷ ರೂ. ಹಾನಿಯಾಗಿದೆ ಎಂದು ರವಿ ದೂರು ನೀಡಿದ್ದಾರೆ.

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು? ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?

ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ನಿಖಿಲ್ ನಾಮಪತ್ರ ಸಲ್ಲಿಸುವ ವೇಳೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಜೆಡಿಎಸ್ ವಿರುದ್ಧ 3 ಪ್ರತ್ಯೇಕ ಎಫ್​ಐಆರ್ ದಾಖಲಾಗಿವೆ. ಮಂಡ್ಯ ಕಸಬಾ ಫ್ಲೈಯಿಂಗ್ ರವಿ ನೀಡಿದ ದೂರಿನ ಹಿನ್ನೆಲೆ 1, ಕಸಬಾ 1ರ ಫ್ಲೈಯಿಂಗ್ ಸ್ಕಾ್ವಡ್ ಸುಧಾಮ ದೂರಿನನ್ವಯ 2 ಎಫ್​ಐಆರ್​ಗಳನ್ನು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಪೇಪರ್ ಚೂರು ಸಿಡಿಸಿದ್ದಕ್ಕೆ ಎಫ್‌ಐಆರ್‌

ಪೇಪರ್ ಚೂರು ಸಿಡಿಸಿದ್ದಕ್ಕೆ ಎಫ್‌ಐಆರ್‌

ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಅನುಮತಿ ಪಡೆಯದೆ ಹಸಿರು, ಬಿಳಿ ಬಣ್ಣದ ಪೇಪರ್ ಚೂರುಗಳನ್ನು ಸಿಡಿಸಿ ಮನರಂಜನೆ ಕೊಟ್ಟು ಮತದಾರರನ್ನು ಸೆಳೆಯಲು ಆಮಿಷವೊಡ್ಡಿದ್ದಾರೆ ಎಂದು ಸುಧಾಮ ದೂರು ಸಲ್ಲಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಆಸ್ತಿ ಎಷ್ಟು?

ನಿಖಿಲ್ ಕುಮಾರಸ್ವಾಮಿ ಆಸ್ತಿ ಎಷ್ಟು?

ನಿಖಿಲ್ ಕುಮಾರಸ್ವಾಮಿ ಅವರಿಗೆ ಈ ಹಣಕಾಸು ವರ್ಷದಲ್ಲಿ 71.47 ಲಕ್ಷ ಆದಾಯ ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ಅವರ ಒಟ್ಟು ಆದಾಯ 1.06 ಕೋಟಿ ರೂಪಾಯಿಗಳು. ನಿಖಿಲ್ ಕುಮಾರಸ್ವಾಮಿ ಅವರ ವಿವಿದ ಬ್ಯಾಂಕುಗಳ ಖಾತೆಯಲ್ಲಿ 1.09 ಕೋಟಿ ರೂಪಾಯಿ ಹಣವಿದೆ. ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಅವರು 76 ಲಕ್ಷ ರೂಪಾಯಿ ಬಂಡವಾಳ ತೊಡಗಿಸಿದ್ದಾರೆ.

ಚುನಾವಣಾ ದೂರು: ಮುಖ್ಯಮಂತ್ರಿಗಳ ತವರು ಹಾಸನ ಮೊದಲುಚುನಾವಣಾ ದೂರು: ಮುಖ್ಯಮಂತ್ರಿಗಳ ತವರು ಹಾಸನ ಮೊದಲು

ಮಾರ್ಚ್ 25ರಂದು ನಾಮಪತ್ರ ಸಲ್ಲಿಸಿದ ನಿಖಿಲ್

ಮಾರ್ಚ್ 25ರಂದು ನಾಮಪತ್ರ ಸಲ್ಲಿಸಿದ ನಿಖಿಲ್

ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾರ್ಚ್ 25ರಂದು ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಜೆಡಿಎಸ್ ಕಾರ್ಯಕರ್ತರು ಗೋ ಬ್ಯಾಕ್ ಘೋಷಣೆ ಆರಂಭಿಸಿದ್ದು, ಹಲಗೂರಿನಲ್ಲಿ ಪ್ರಚಾರ ನಡೆಸುತ್ತಿದ್ದ ನಿಖಿಲ್ ಎದುರೇ ಗೋ ಬ್ಯಾಕ್ ದರ್ಶನ್, ಗೋ ಬ್ಯಾಕ್ ಯಶ್ ಎಂದು ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಜಿದ್ದಾಜಿದ್ದಿನ ಪ್ರಚಾರಕ್ಕೆ ಚಾಲನೆ ನೀಡಿರುವುದು ಕಂಡು ಬಂದಿದೆ.

ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ಸುಮಲತಾ ದೂರುಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ಸುಮಲತಾ ದೂರು

ಕುಮಾರಸ್ವಾಮಿ ಮಗ ಎಂದು ಮತ ಹಾಕಿ

ಕುಮಾರಸ್ವಾಮಿ ಮಗ ಎಂದು ಮತ ಹಾಕಿ

2004ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಿದ್ದ ಕುಮಾರಸ್ವಾಮಿಗೆ ಮಳವಳ್ಳಿ ಜನ ದೇವೇಗೌಡರ ಮಗ ಅಂತ ಮತ ಕೊಟ್ರಿ. ಈಗ ಕುಮಾರಸ್ವಾಮಿ ಮಗ ಅಂತ ನನಗೆ ಮತ ಕೊಡಿ" ಎಂದು ನಿಖಿಲ್ ರೋಡ್ ಶೋನಲ್ಲಿ ಜನತೆಗೆ ಮನವಿ ಮಾಡಿದರು.

ನಿಖಿಲ್ ಅಭಿಮನ್ಯು, ನಾನು ಅರ್ಜುನ, ಮಂಡ್ಯ ಚಕ್ರವ್ಯೂಹ ಭೇದಿಸುತ್ತೇವೆ: ಕುಮಾರಸ್ವಾಮಿ ನಿಖಿಲ್ ಅಭಿಮನ್ಯು, ನಾನು ಅರ್ಜುನ, ಮಂಡ್ಯ ಚಕ್ರವ್ಯೂಹ ಭೇದಿಸುತ್ತೇವೆ: ಕುಮಾರಸ್ವಾಮಿ

English summary
Election flying squad reported that 8 lakh rupees worth public assets were destroyed during nikhil kumaraswamy nomination. Three different FIR are registered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X