ಕಾವೇರಿ ನದಿಯಲ್ಲಿ ಕ್ಷೀಣಿಸುತ್ತಿದೆ ನೀರಿನ ಮಟ್ಟ

Posted By: ಬಿಎಂ ಲವಕುಮಾರ್
Subscribe to Oneindia Kannada

ಮಡಿಕೇರಿ, ಮಾರ್ಚ್ 13: ಕೊಡಗಿನಿಂದ ಹರಿದು ಬರುವ ಕಾವೇರಿ ನೀರಿನ ಮಟ್ಟ ಕ್ಷೀಣಿಸಲಾರಂಭಿಸಿದೆ. ನದಿಯಲ್ಲಿ ನೀರು ಕಡಿಮೆಯಾಗಿದ್ದು ಬಂಡೆಕಲ್ಲುಗಳು ಕಾಣಲಾರಂಭಿಸಿವೆ. ಆದರೆ ಇಂದು ಮಳೆ ಬಿದ್ದಿರುವುದರಿಂದ ಸ್ವಲ್ಪ ಮಟ್ಟಿಗೆ ನದಿಗೆ ನೀರು ಹರಿದುಬರುವ ಆಶಾಭಾವನೆ ಚಿಗುರೊಡೆದಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇಂದಿನವರೆಗೆ ಕೊಡಗಿನಲ್ಲಿ ಮಳೆ ಬಿದ್ದಿರಲಿಲ್ಲ. ಕಾಫಿಗೆ ಹೂ ಅರಳಲು ಮಳೆಯ ಅವಶ್ಯಕತೆಯಿದ್ದು, ಮಳೆ ಬಾರದ ಕಾರಣದಿಂದಾಗಿ ಕಾಫಿ ತೋಟದ ಮಾಲೀಕರು ಕೆರೆ, ತೋಡು, ನದಿಗಳಿಗೆ ಮೋಟಾರ್‍ಯಿಟ್ಟು ನೀರನ್ನು ಹಾಯಿಸುತ್ತಿದ್ದರು. ಇದರಿಂದ ನೀರಿನ ಮಟ್ಟ ವಿಪರೀತ ಕುಸಿದಿದೆ. ಇದು ಹೀಗೆಯೇ ಮುಂದುವರೆದರೆ ನದಿ ಬತ್ತುವ ಭಯವೂ ಇಲ್ಲದಿಲ್ಲ.

ರಾಜ್ಯದಲ್ಲಿ ಬಿಸಿಲೇರುತ್ತಿದೆ, ಮಳೆ ಸಾಧ್ಯತೆಯೂ ಇದೆ!

ಮೊದಲಿಗೆ ಹೋಲಿಸಿದರೆ ಈಗ ಜಿಲ್ಲೆಯಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಜತೆಗೆ ಹೋಂಸ್ಟೇ, ರೆಸಾರ್ಟ್‍ಗಳು ಹೆಚ್ಚಾಗಿವೆ. ಇದರಿಂದಾಗಿ ನೀರಿನ ಬಳಕೆ ಹೆಚ್ಚನ ಪ್ರಮಾಣದಲ್ಲಾಗುತ್ತಿದ್ದು, ಈಗಿನಿಂದಲೇ ನೀರಿನ ಬರ ಕಾಣಿಸಿಕೊಳ್ಳತೊಡಗಿದೆ.

Water level is decreasing in the Cauvery

ಮುಖ್ಯ ಪಟ್ಟಣವಾಗಿರುವ ಮಡಿಕೇರಿ ಗುಡ್ಡದ ಮೇಲಿರುವ ಕಾರಣದಿಂದಾಗಿ ಇಲ್ಲಿಗೆ ನೀರು ಸರಬರಾಜು ಮಾಡುವುದು ಕಷ್ಟದ ಕೆಲಸವಾಗಿದೆ. ಇಲ್ಲಿಗೆ ಕಾವೇರಿ ನದಿಯಿಂದ ನೀರು ತರಲು ಸಾಧ್ಯವಿಲ್ಲ. ಮೊದಲಿನಿಂದಲೂ ನೀರಿನಾಸರೆಯಿರುವ ಪ್ರದೇಶಗಳಲ್ಲಿ ಅಡ್ಡಲಾಗಿ ಒಡ್ಡು ನಿರ್ಮಿಸಿ ಅಲ್ಲಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ದಿನ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ನೀರು ಬತ್ತಿ ಹೋಗುತ್ತಿದೆ.

ಬೆಂಗಳೂರಲ್ಲಿ ಸೆಕೆಯ ಪ್ರಮಾಣದಲ್ಲಿ ಕೊಂಚ ಇಳಿಕೆ

ಈ ವೇಳೆ ಕಾವೇರಿ ನದಿಯಿಂದ ಟ್ಯಾಂಕರ್ ಮೂಲಕ ನೀರನ್ನು ತಂದು ಬಳಿಕ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಒಟ್ಟಾರೆ ಬೇಸಿಗೆ ಬರುತ್ತಿದ್ದಂತೆಯೇ ಮಡಿಕೇರಿಯಲ್ಲಿ ನೀರಿನ ಅಭಾವ ತಲೆದೋರುವುದು ಮಾಮೂಲಿಯಾಗಿದೆ. ಈ ಬಾರಿ ಉತ್ತಮ ಮಳೆಯಾದರೆ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು ಇಲ್ಲದೆ ಹೋದರೆ ತೊಂದರೆ ಕಟ್ಟಿಟ್ಟ ಬುತ್ತಿ.

Water level is decreasing in the Cauvery

ಇದೆಲ್ಲದರ ನಡುವೆ ಕೊಡಗಿನಿಂದ ಹರಿದು ಬರುವ ಕಾವೇರಿ ನದಿಗೆ ತ್ಯಾಜ್ಯ ನೀರು ಸೇರಿ ಕಲುಷಿತಗೊಳ್ಳುತ್ತಿದೆ ಎಂಬ ಆರೋಪವೂ ಇದೆ. ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cauvery water level flows from the Kodagu is decreasing. This has resulted in water shortage in Madikeri.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ