ಮಡಿಕೇರಿಯಲ್ಲಿ ನೀರಿನಲ್ಲಿ ಮುಳುಗಿ ಯೋಧ ಸೇರಿ ಇಬ್ಬರ ಸಾವು
ಮಡಿಕೇರಿ, ಮೇ 01: ಇಲ್ಲಿಗೆ ಸಮೀಪದ ಕೊಡ್ಲಿಪೇಟೆಯ ಕಟ್ಟೆಪುರದ ಹೇಮಾವತಿ ನದಿಯ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಸೇರಿದಂತೆ ಇಬ್ಬರು ನೀರುಪಾಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಬೆಸೂರು ನಿವಾಸಿಗಳಾಗಿರುವ ಯೋಧ ಲೋಕೇಶ್ (32) ಹಾಗೂ ಲತೇಶ್ (27) ಇಂದು ಮಧ್ಯಾಹ್ನ ಊಟ ಮುಗಿಸಿ, ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು ಮನೆ ಸಮೀಪದ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದರು. ಆದರೆ ನೀರಿನಿಂದ ಮೇಲೆ ಬರಲಾಗದೆ ಲೋಕೇಶ್ ಮತ್ತು ಲತೇಶ್ ಇಬ್ಬರೂ ಮೃತಪಟ್ಟಿದ್ದಾರೆ. ಲೋಕೇಶ್ ಅವರ ಮೃತ ದೇಹ ಸಿಕ್ಕಿದ್ದು, ಲತೇಶ್ ಮೃತದೇಹಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇವರು ಕುಟುಂಬಸ್ಥರೊಂದಿಗೆ ಈಜಲು ತೆರಳಿದ್ದರು ಎನ್ನಲಾಗಿದೆ.

ಲಾಕ್ ಡೌನ್ ನಡುವೆ ಈಜಲು ಹೋದ ಹೊಳಲ್ಕೆರೆ ತಾಲ್ಲೂಕಿನ ಯುವಕ ಸಾವು
ಲೋಕೇಶ್ ಅವರು ಕಳೆದ ವಾರವಷ್ಟೇ ಹಾಸನ ಜಿಲ್ಲೆ ಅರಕಲಗೂಡಿನ ಯುವತಿಯೊಂದಿಗೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರು 2009ರಿಂದ ಭಾರತೀಯ ಸೇನೆಯ ಎಎಂಸಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.












Click it and Unblock the Notifications