ರಾಷ್ಟ್ರೀಯ ಫ್ಲೋರ್ ಬಾಲ್ ತಂಡಕ್ಕೆ ಕೊಡಗಿನ ಆಟಗಾರರು
ರಾಷ್ಟ್ರೀಯ ಫ್ಲೋರ್ ಬಾಲ್ ತಂಡಕ್ಕೆ ಮಡಿಕೇರಿಯವರಾದ ಐತಿಚಂಡ ಪೂವಯ್ಯ ಹಾಗೂ ಟಿ.ಟಿ.ಅವಿನಾಶ್ ಅವರು ಆಯ್ಕೆಯಾಗಿದ್ದು, ಥೈಲ್ಯಾಂಡ್ ಬ್ಯಾಂಕಾಕ್ ನಲ್ಲಿ ನಡೆಯಲಿರುವ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಆಡಲಿದ್ದಾರೆ.
ಮಡಿಕೇರಿ, ಮೇ 06: ರಾಷ್ಟ್ರೀಯ ಹಾಕಿ ತಂಡದಲ್ಲಿ ಕೊಡಗಿನ ಕಲಿಗಳು ಮಿಂಚುತ್ತಿರುವಾಗಲೇ ಫ್ಲೋರ್ ಬಾಲ್ ನಲ್ಲಿಯೂ ಮೊದಲ ಬಾರಿಗೆ ಜಿಲ್ಲೆಯ ಇಬ್ಬರು ಆಟಗಾರರು ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ರಾಷ್ಟ್ರೀಯ ಫ್ಲೋರ್ ಬಾಲ್ ತಂಡಕ್ಕೆ ಮಡಿಕೇರಿಯವರಾದ ಐತಿಚಂಡ ಪೂವಯ್ಯ ಹಾಗೂ ಟಿ.ಟಿ.ಅವಿನಾಶ್ ಅವರು ಆಯ್ಕೆಯಾಗಿದ್ದು, ಥೈಲ್ಯಾಂಡ್ ಬ್ಯಾಂಕಾಕ್ ನಲ್ಲಿ ನಡೆಯಲಿರುವ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಆಡಲಿದ್ದಾರೆ.[ಮೇ 22ರಿಂದ ಕೊಡಗಿನಲ್ಲಿ ಜಿಲ್ಲಾ ಗ್ರಾಮೀಣ ಕ್ರೀಡಾಕೂಟ]

ಉತ್ತರ ಪ್ರದೇಶದ ಗ್ರೇಟ್ ನೋಯ್ಡಾದ ಗೌತಮ ಬುದ್ಧ ಯೂನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಕ್ಯಾಂಪ್ ನಲ್ಲಿ ಕರ್ನಾಟಕ, ಮಾಹಾರಾಷ್ಟ್ರ, ಉತ್ತರ ಪ್ರದೇಶ, ಹಿಮಾಚಲಪ್ರದೇಶ, ದೆಹಲಿ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 62 ಮಂದಿ ಆಟಗಾರರು ಭಾಗವಹಿಸಿದ್ದರು. ಇದರಲ್ಲಿ ಕೊಡಗಿನಿಂದ ತೆರಳಿದ್ದ ಐ.ಬಿ.ಪೂವಯ್ಯ ಹಾಗೂ ಟಿ.ಟಿ.ಅವಿನಾಶ್ ಅವರು ಅಂತಿಮ 17 ಮಂದಿಯ ತಂಡದಲ್ಲಿ ಸ್ಥಾನಪಡೆದಿದ್ದಾರೆ.

ಇಂಡಿಯನ್ ಫ್ಲೋರ್ ಬಾಲ್ ಫೆಡರೇಷನ್ ರಾಷ್ಟ್ರೀಯ ತಂಡವನ್ನು ಜುಲೈ 1 ರಿಂದ ಬ್ಯಾಂಕಾಕ್‍ನಲ್ಲಿ ನಡೆಯಲಿರುವ ಟೂರ್ನಮೆಂಟ್ ಗೆ ಕಳುಹಿಸಲಿದೆ. ಇದಕ್ಕೂ ಮುನ್ನ ಮೇ ಅಂತ್ಯಕ್ಕೆ ಗ್ರೇಟ್ ನೋಯ್ಡಾದಲ್ಲಿ ರಾಷ್ಟ್ರೀಯ ತಂಡದ ಆಟಗಾರರು ಕೋಚಿಂಗ್ ಕ್ಯಾಂಪ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications